ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಿಂದೂ ಭಾವನೆಗಳಿಗೆ ಧಕ್ಕೆ: ಶ್ರೀಕೃಷ್ಣನೇ ಬಿರಿಯಾನಿ ತಿನ್ನುವ ರೀತಿಯ ಜಾಹೀರಾತು ನೀಡಿದ ರೆಸ್ಟೋರೆಂಟ್!

Viral Video: ರೆಸ್ಟೋರೆಂಟ್ ವೊಂದು ಮಾಂಸಹಾರಿ ಹೋಟೆಲ್ ನ ಜಾಹೀರಾತು ನೀಡಲು ಹೋಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ವಿಷು ಹಬ್ಬದ ಪ್ರಯುಕ್ತ ಕೇರಳದ ಚೆರ್ತಲಾದಲ್ಲಿರುವ 'ಮೆಹರ್ ಮಂಡಿ ಅಂಡ್ ಗ್ರಿಲ್ಸ್' ಎಂಬ ರೆಸ್ಟೋರೆಂಟ್ ಹಿಂದೂಗಳ ದೇವರಾದ ಶ್ರೀ ಕೃಷ್ಣನ ಚಿತ್ರದ ಪಕ್ಕದಲ್ಲಿ ಕೋಳಿ ಮಾಂಸದ ಖಾದ್ಯ ತೋರಿಸುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.

ಶ್ರೀಕೃಷ್ಣನ ಫೋಟೋದೊಂದಿಗೆ ಮಾಂಸಾಹಾರ ಜಾಹೀರಾತು ನೀಡಿದ ಹೋಟೆಲ್

ಶ್ರೀಕೃಷ್ಣನ ಫೋಟೋದೊಂದಿಗೆ ಮಾಂಸಾಹಾರದ ಜಾಹೀರಾತು -

Profile
Pushpa Kumari Apr 18, 2026 11:27 AM

ತಿರುವನಂತಪುರಂ,ಎ.18: ಜನರನ್ನು ಆಕರ್ಷಣೆಗೊಳಿಸಬೇಕು ಎನ್ನುವ ಉದ್ದೇಶದಿಂದ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುವ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ರೆಸ್ಟೋರೆಂಟ್ ವೊಂದು ಮಾಂಸಹಾರಿ ಹೋಟೆಲ್ ನ ಜಾಹೀರಾತು ನೀಡಲು ಹೋಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ವಿಷು ಹಬ್ಬದ ಪ್ರಯುಕ್ತ ಕೇರಳದ ಚೆರ್ತಲಾದಲ್ಲಿರುವ 'ಮೆಹರ್ ಮಂಡಿ ಅಂಡ್ ಗ್ರಿಲ್ಸ್' ಎಂಬ ರೆಸ್ಟೋರೆಂಟ್ ಹಿಂದೂಗಳ ದೇವರಾದ ಶ್ರೀ ಕೃಷ್ಣ ನ ಚಿತ್ರದ ಪಕ್ಕದಲ್ಲಿ ಕೋಳಿ ಮಾಂಸದ ಖಾದ್ಯ ತೋರಿಸುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದೆ. ಸದ್ಯ ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.

ವಿಷು ಹಬ್ಬದ ಪ್ರಯುಕ್ತ ಗ್ರಾಹಕರನ್ನು ಸೆಳೆಯಲು ಕೇರಳದ ರೆಸ್ಟೋರೆಂಟ್ ವೊಂದು ಜಾಹೀರಾತು ನೀಡಿದೆ. ಆದರೆ ಹಿಂದೂಗಳ ಆರಾಧ್ಯ ದೇವರಾದ ಶ್ರೀ ಕೃಷ್ಣನ ಫೋಟೋದ ಪಕ್ಕದಲ್ಲೇ ಕೋಳಿ ಖಾದ್ಯದೊಂದಿಗೆ ಪ್ರಚಾರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ವೈರಲ್ ಆದ ಈ ಜಾಹೀರಾತು ಪೋಸ್ಟರ್ ಅನ್ನು ಹಬ್ಬದ ಮಾರ್ಕೆಟಿಂಗ್ ನೆಪದಲ್ಲಿ ಧಾರ್ಮಿಕ ಭಾವನೆಗಳನ್ನು ನೋಯಿಸುವ ಪ್ರಯತ್ನ ಎಂದು ಟೀಕೆ ಮಾಡಲಾಗಿದೆ.

ವಿಡಿಯೋ ನೋಡಿ:



ವಿಶೇಷವಾಗಿ ವಿಷು ನಂತಹ ಪವಿತ್ರ ಹಬ್ಬದ ಸಮಯದಲ್ಲಿ, ಸಾಂಪ್ರದಾಯಿಕವಾಗಿ ಸಸ್ಯಾಹಾರಿ ಊಟದೊಂದಿಗೆ ಪೂಜಿಸಲ್ಪಡುವ ಕ್ರಮವಾಗಿದೆ. ಆದರೆ ಹಿಂದೂ ದೇವರ ಫೋಟೋ ಮುಂದೆ ಮುಂದೆ ಮಾಂಸಹಾರ ಖಾದ್ಯದೊಂದಿಗೆ ತೋರಿಸುವುದು ತಪ್ಪು ಎಂದು ಅನೇಕರು ಕಿಡಿಕಾ ರಿದ್ದಾರೆ. ಉದ್ದೇಶಪೂರ್ವಕವಾಗಿ ಹಿಂದೂ ನಂಬಿಕೆಗಳು ಮತ್ತು ದೇವತೆಗಳನ್ನು ಅಪಹಾಸ್ಯ ಮಾಡಿದ್ದಾರೆ ಎನ್ನಲಾಗಿದೆ.

Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಕೇರಳದಲ್ಲಿ 'ವಿಷು' ಹಬ್ಬದ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಲಾಗುತ್ತದೆ. ಆದರೆ, ಈ ಹೋಟೆಲ್ ಪ್ರಚಾರದ ಭರದಲ್ಲಿ ಕೃಷ್ಣನ ಚಿತ್ರವನ್ನು ಬಳಸಿ, ಅದರ ಪಕ್ಕದಲ್ಲಿ ಮಾಂಸಾಹಾರಿ ಆಹಾರವನ್ನು ಪ್ರದರ್ಶನ ಮಾಡಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರು ಆಕ್ರೋಶ ಹೊರಹಾಕಿದ್ದಾರೆ.

ಆ ಬಳಿಕ ರೆಸ್ಟೋರೆಂಟ್ ನ ಸಿಬ್ಬಂದಿ ಕ್ಷಮೆ ಕೇಳುವ ವಿಡಿಯೊ ವೈರಲ್ ಆಗಿದೆ. ಇದು ಉದ್ದೇಶ ಪೂರ್ವಕವಾಗಿ ಮಾಡಿದ ತಪ್ಪಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಜನರು ಮಾತ್ರ ಇದಕ್ಕೆ ಒಪ್ಪದೆ ಹೋಟೆಲ್ ಮಾಲೀಕರ ವಿರುದ್ಧ ಕಠಿಣ ಕ್ರಮ ಜಾರಿ ಯಾಗಬೇಕು ಎಂದಿದ್ದಾರೆ. ಬಳಕೆದಾರರೊಬ್ಬರು ಹಿಂದುಗಳ ಧಾರ್ಮಿಕ ನಂಬಿಕೆಗೆ ದಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.