ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಚ್ಛೇದಿತ ಮಗಳಿಗೆ ಹಾರ ಹಾಕಿ ಮನೆಗೆ ಸ್ವಾಗತ ಮಾಡಿದ ನಿವೃತ ನ್ಯಾಯಾಧೀಶ; ವಿಡಿಯೋ ನೋಡಿ

ಮಕ್ಕಳ ಸಂಸಾರದಲ್ಲಿ ಬಿರುಕು ಮೂಡಿ ವಿಚ್ಛೇದನವಾದರೆ ವಿಷಯವು ಬಹಿರಂಗವಾಗದಂತೆ ಕಾಯ್ದುಕೊಳ್ಳಲು ಯತ್ನಿಸುವ ಜನರ ನಡುವೆ ಇಲ್ಲೊಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ವಿಚ್ಛೇದಿತ ಮಗಳನ್ನು ತಮ್ಮ ಮನೆಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಮನೆಗೆ ಬಂದ ಮಗಳಿಗೆ ಹಾರ ಹಾಕಿ ಅವರು ಸಂಭ್ರಮಿಸಿದರು.

ವಿಚ್ಛೇದಿತ ಮಗಳಿಗೆ ಹಾರ ಹಾಕಿ ಮನೆಗೆ ಸ್ವಾಗತ ಮಾಡಿದ ನಿವೃತ ನ್ಯಾಯಾಧೀಶ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 6, 2026 10:32 AM

ಲಖನೌ: ಮಕ್ಕಳ ಸಂಸಾರದಲ್ಲಿ ಬಿರುಕು ಮೂಡಿ ವಿಚ್ಛೇದನವಾದರೆ ವಿಷಯವು ಬಹಿರಂಗವಾಗದಂತೆ ಕಾಯ್ದುಕೊಳ್ಳಲು ಯತ್ನಿಸುವ ಜನರ ನಡುವೆ ಇಲ್ಲೊಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ವಿಚ್ಛೇದಿತ ಮಗಳನ್ನು (Viral Video) ತಮ್ಮ ಮನೆಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಹೌದು ಉತ್ತರ ಪ್ರದೇಶದ ಮೀರತ್‌ನ ನಿವೃತ್ತ ನ್ಯಾಯಾಧೀಶರೊಬ್ಬರು ತಮ್ಮ ಮಗಳ ವಿಚ್ಛೇದನವನ್ನು ಆಚರಿಸಿದ್ದಾರೆ.

ವಕೀಲ ಜ್ಞಾನೇಂದ್ರ ಕುಮಾರ್‌ರ ಪುತ್ರಿ ಪ್ರಣಿತಾ ವಸಿಷ್ಠ, ಭಾರತೀಯ ಸೇನೆಯ ಮೇಜರ್‌ ಒಬ್ಬರನ್ನು 2018ರಲ್ಲಿ ವಿವಾಹವಾಗಿದ್ದರು. ಆದರೆ ವರ್ಷ ಕಳೆದಂತೆ ಪ್ರಣೀತಾ ತಮ್ಮ ಪತಿಯ ಮನೆಯಲ್ಲಿ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಗು ಜನನದ ಬಳಿಕವೂ ಪರಿಸ್ಥಿತಿ ಸುಧಾರಿಸದಾಗ ಮೇರಠ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದರು.



ಡಿವೋರ್ಸ್‌ ಪಡೆದ ಪ್ರಣೀತಾರನ್ನು ಪರಿವಾರದವರೆಲ್ಲಾ ಡ್ರಮ್‌ಗಳೊಂದಿಗೆ ಕುಣಿಯುತ್ತಾ ಮನೆಗೆ ಕರೆತಂದಿದ್ದಾರೆ. ಬಳಿಕ ತಂದೆ ಜ್ಞಾನೇಂದ್ರ ಕುಮಾರ್‌ ಮಗಳಿಗೆ ಹಾರ ಹಾಕಿ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು, ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ' ಎಂದು ಬರೆದಿದ್ದ ಕಪ್ಪು ಟೀಶರ್ಟ್‌ ಧರಿಸಿದ್ದ ಜ್ಞಾನೇಂದ್ರ, 'ನನ್ನ ಪುತ್ರಿಯ ವೈವಾಹಿಕ ಜೀವನ ಸುಖಕರವಾಗಿರದಿದ್ದರೆ ಆಕೆಯನ್ನು ಆ ವಾತಾವರಣದಿಂದ ಪಾರು ಮಾಡುವುದು ನನ್ನ ಕರ್ತವ್ಯ. ಯಾವುದೇ ಜೀವನಾಂಶ ಕೇಳದೆ ಆಕೆಯನ್ನು ಕರೆತಂದಿದ್ದೇನೆ. ಹೆಣ್ಣುಮಕ್ಕಳು ಆಸ್ತಿಯಲ್ಲ. ಸಮಾಜಕ್ಕಿಂತ ಅವರ ಖುಷಿ ಮತ್ತು ಘನತೆಗೆ ಆದ್ಯತೆ ನೀಡಬೇಕು'. ನನ್ನ ಮಗಳು ಸುಮಾರು ಏಳು ವರ್ಷಗಳ ಕಾಲ ತಮ್ಮ ಅತ್ತೆಯ ಮನೆಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳವನ್ನು ಅನುಭವಿಸಿದ್ದಾಳೆ. ಅದರಿಂದ ಮುಕ್ತಿ ನೀಡಬೇಕು ಮತ್ತು ಆಕೆಗೆ ಮಾನಸಿಕ ಸ್ಥೈರ್ಯ ನೀಡಬೇಕೆಂದು ಈ ನಿರ್ಣಯ ಕೈಗೊಂಡೆವು ಎಂದು ಅವರು ಹೇಳಿದ್ದಾರೆ.