ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻದೇಹದ ಖಾಸಗಿ ಭಾಗಗಳನ್ನು ಜೂಮ್ ಮಾಡೋದ್ಯಾಕೆʼ ಎಂದ ಜಾಹ್ನವಿ ಕಪೂರ್;‌ ಸ್ಯಾಂಡಲ್‌ವುಡ್‌ ಆಯ್ತು, ಈಗ ಬಾಲಿವುಡ್‌ನಲ್ಲೂ ಪಾಪರಾಜಿಗಳ ಮೇಲೆ ಅಸಮಾಧಾನ

ಜಾಹ್ನವಿ ಕಪೂರ್ ಅವರು ಪಾಪರಾಜಿಗಳು ಮಹಿಳಾ ನಟಿಯರನ್ನು ಚಿತ್ರೀಕರಿಸುವ ಅಸಭ್ಯ ವಿಧಾನದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಹದ ಖಾಸಗಿ ಭಾಗಗಳನ್ನು ಜೂಮ್ ಮಾಡುವುದು ಮತ್ತು ಅನುಮತಿ ಇಲ್ಲದೆ ಲೈಂಗಿಕವಾಗಿ ಬಿಂಬಿಸುವ ವಿಡಿಯೋಗಳನ್ನು ಹರಿಬಿಡುವುದು ಖಾಸಗಿತನದ ಉಲ್ಲಂಘನೆ ಎಂದು ಅವರು ಕಿಡಿಕಾರಿದ್ದಾರೆ.

ʻಖಾಸಗಿ ಭಾಗಗಳನ್ನು ಜೂಮ್ ಮಾಡೋದ್ಯಾಕೆ?ʼ; ಪಾಪರಾಜಿಗಳ ಮೇಲೆ ಜಾಹ್ನವಿ ಗರಂ!

-

Avinash GR
Avinash GR Apr 6, 2026 12:22 PM

ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್‌ವುಡ್‌ನಲ್ಲಿ ಪಾಪರಾಜಿಗಳ ಮೇಲೆ ನಟಿಯರು ಗರಂ ಆಗಿದ್ದ ಘಟನೆ ನಡೆದಿತ್ತು. ಖಾಸಗಿ ಅಂಗಗಳ ಮೇಲೆ ಜೂಮ್‌ ಮಾಡುತ್ತಾರೆ ಎಂದೆಲ್ಲಾ ಪಾಪರಾಜಿಗಳ ಮೇಲೆ ಆರೋಪ ಕೇಳಿಬಂದಿತ್ತು. ಇದೀಗ ಬಾಲಿವುಡ್‌ನಲ್ಲೂ ಈ ವಿಚಾರ ಸದ್ದು ಮಾಡುತ್ತಿದೆ. ನಟಿ ಜಾಹ್ನವಿ ಕಪೂರ್‌ ಅವರು ಪಾಪರಾಜಿಗಳ ಅತಿರೇಕದ ವರ್ತನೆಯನ್ನು ಖಂಡಿಸಿದ್ದಾರೆ.

ಜಾಹ್ನವಿ ಕಪೂರ್‌ ಅವರು ನಟಿಯರನ್ನು ಅನುಚಿತವಾಗಿ ಚಿತ್ರೀಕರಿಸುವ ಪದ್ಧತಿಯ ಬಗ್ಗೆ ಅವರು ನೇರವಾಗಿ ಪ್ರಶ್ನಿಸಿದ್ದಾರೆ. ಫೋಟೋ ಕ್ಲಿಕ್ಕಿಸುವುದು ವೃತ್ತಿಯ ಭಾಗ ಎಂಬುದನ್ನು ಒಪ್ಪಿಕೊಂಡರೂ, ದೇಹದ ಭಾಗಗಳನ್ನು 'ಜೂಮ್' ಮಾಡುವುದು ಅಥವಾ ಅನುಮತಿ ಇಲ್ಲದೆ ಬೇರೆ ಬೇರೆ ಕೋನಗಳಿಂದ ಫೋಟೋ ತೆಗೆಯುವುದು ಮುಜುಗರ ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಜಾನ್ವಿ ಕಪೂರ್‌ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ವಿಡಿಯೋ ಹಂಚಿಕೊಂಡ ʻಪೆದ್ದಿʼ ಟೀಮ್;‌ ಈ ಚಿತ್ರಕ್ಕಾಗಿ ʻಕಪೂರ್‌ ಕುಡಿʼ ಪಡೆದ ಸಂಭಾವನೆ ಎಷ್ಟು?

ಈಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಜಾಹ್ನವಿ ಕಪೂರ್‌ ಅವರು, "ನಾನು ಕೆಲವು ದಿನಗಳ ಹಿಂದೆ ಪಾಪರಾಜಿಗಳ ಜೊತೆ ಮಾತನಾಡಿದೆ. ಅವರನ್ನು ಖಾಸಗಿಯಾಗಿ ಭೇಟಿ ಮಾಡಿ, ಅವರು ಮಹಿಳೆಯರನ್ನು ಚಿತ್ರೀಕರಿಸುವ ವಿಧಾನದ ಬಗ್ಗೆ ಚರ್ಚಿಸಿದೆ. 'ಇದು ನಮಗೆ ಕೆಟ್ಟದಾಗಿ ಕಾಣುವುದಷ್ಟೇ ಅಲ್ಲ, ನಮಗೆ ಇಷ್ಟವಾಗುವುದಿಲ್ಲ ಕೂಡ. ಇದು ನಮ್ಮ ಖಾಸಗಿತನದ ಉಲ್ಲಂಘನೆ ಮತ್ತು ಇದಕ್ಕೆ ನಮ್ಮ ಸಮ್ಮತಿ ಇರುವುದಿಲ್ಲʼ ಅಂತ ಅವರಿಗೆ ನಾನು ಹೇಳಿದೆ" ಎಂದು ಹೇಳಿದ್ದಾರೆ.

ತಮ್ಮ ಮಾತನ್ನು ಮುಂದುವರಿಸಿ, "ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ಬಟ್ಟೆ ಧರಿಸಿ ಹೊರಗೆ ಬಂದರೂ, ಯಾರೋ ಕ್ಯಾಮೆರಾ ಹಾಕಿ ಒಂದು ನಿರ್ದಿಷ್ಟ ಜಾಗಕ್ಕೆ ಜೂಮ್ ಮಾಡುತ್ತಾರೆ ಎಂದು ನಾವು ನಿರೀಕ್ಷಿಸಿರುವುದಿಲ್ಲ. ನಮಗಿಂತ ಹೆಚ್ಚಾಗಿ, ಇದು ನಿಮ್ಮ (ಪಾಪರಾಜಿಗಳ) ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ. ನೀವು ಮಹಿಳೆಯ ದೇಹವನ್ನು ಅವಳ ಇಚ್ಛೆಗೆ ವಿರುದ್ಧವಾಗಿ ವಸ್ತುವಿನಂತೆ ಬಳಸುತ್ತಿದ್ದೀರಿ. ಕೇವಲ ಹಣಕ್ಕಾಗಿ, ವ್ಯೂಸ್‌ಗಾಗಿ ದೇಹದ ಭಾಗಗಳನ್ನು ಜೂಮ್ ಮಾಡುವಾಗ ನಿಮಗೆ ನಿಮ್ಮ ಮೇಲೆ ಗೌರವ ಹೇಗಿರುತ್ತದೆ ಎಂದು ನಾನು ಅವರಲ್ಲಿ ಕೇಳಿದೆ. ಅವರು ನನ್ನ ಮಾತನ್ನು ಗಮನವಿಟ್ಟು ಕೇಳಿಸಿಕೊಂಡರು, ಬಹುಶಃ ಅವರಿಗೆ ನನ್ನ ಮಾತಿನಿಂದ ಅರಿವಾಗಿದೆ ಎಂದು ಕಾಣಿಸುತ್ತದೆ" ಎಂದು ಜಾಹ್ನವಿ ತಿಳಿಸಿದ್ದಾರೆ.

Janhvi Kapoor: ತಿರುಪತಿಯಲ್ಲಿ ಬರಿಗಾಲಲ್ಲಿ 3550 ಮೆಟ್ಟಿಲು ಹತ್ತಿದ ಜಾನ್ವಿ ಕಪೂರ್; ಭಕ್ತಿಗೆ ಮೆಚ್ಚಿದ ಅಭಿಮಾನಿಗಳು

ಲೈಂಗಿಕವಾಗಿ ಬಿಂಬಿಸುವುದನ್ನು ಒಪ್ಪುವುದಿಲ್ಲ

"ಪ್ರತಿಯೊಂದು ಹಂತದಲ್ಲೂ ಸಮ್ಮತಿ ಎಂಬುದು ಬಹಳ ಮುಖ್ಯ. ಒಂದು ಹಾಡಿನಲ್ಲಿ ನಾನು ಒದ್ದೆಯಾದ ಸೀರೆಯಲ್ಲಿ ಮಾದಕವಾಗಿ ನೃತ್ಯ ಮಾಡಿದ್ದೇನೆ. ಅದು ಇಂದ್ರಿಯ ಪ್ರಚೋದಕ ಹಾಡಾಗಿತ್ತು. ಅದು ನನ್ನ ಸ್ವಇಚ್ಛೆಯಿಂದ ತೆಗೆದುಕೊಂಡ ನಿರ್ಧಾರವಾಗಿತ್ತು. ಆದರೆ, ಒಬ್ಬ ವ್ಯಕ್ತಿಯ ಅನುಮತಿ ಇಲ್ಲದೆ ಅವರನ್ನು ಲೈಂಗಿಕವಾಗಿ ಬಿಂಬಿಸುವುದು ಅದಕ್ಕಿಂತ ಭಿನ್ನವಾದದ್ದು. ಅದನ್ನು ನಾನು ಯಾವುದೇ ರೂಪದಲ್ಲಿ ಒಪ್ಪುವುದಿಲ್ಲ ಮತ್ತು ಅದು ನನಗೆ ತೊಂದರೆ ನೀಡುತ್ತದೆ" ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

"ನಾನು ಹೊರಗೆ ಹೋಗುವಾಗ ನನಗೆ ಇಷ್ಟ ಬಂದ ಬಟ್ಟೆ ಧರಿಸುವ ಸ್ವಾತಂತ್ರ್ಯ ನನಗಿದೆ. ಆದರೆ ನನ್ನ ಅರಿವಿಲ್ಲದೆ ಅಥವಾ ಸಮ್ಮತಿ ಇಲ್ಲದೆ ಕೆಲವು ಕೋನಗಳಲ್ಲಿ ಫೋಟೋಗಳನ್ನು ತೆಗೆದು ಹರಿಬಿಡಲಾಗುತ್ತದೆ. ಅದಕ್ಕೆ ಸ್ಲೋ ಮೋಷನ್ ಮತ್ತು ಮ್ಯೂಸಿಕ್ ಹಾಕಿ ಜೂಮ್ ಮಾಡಲಾಗುತ್ತದೆ. ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲ. ವೃತ್ತಿಪರವಲ್ಲದ ನಡವಳಿಕೆ ಕಂಡಾಗ ಅದರ ಬಗ್ಗೆ ಧ್ವನಿ ಎತ್ತಬೇಕು" ಎಂದು ಜಾಹ್ನವಿ ತಿಳಿಸಿದ್ದಾರೆ.