Viral Video: ಬೆಡ್‍ರೂಂಗೇ ನುಗ್ಗಿದ ಹಸು ಮತ್ತು ಗೂಳಿ- ವಿಡಿಯೊ ಫುಲ್ ವೈರಲ್
ಹರಿಯಾಣದ ಫರಿದಾಬಾದ್‍ನ ಎನ್ಐಟಿ ಪ್ರದೇಶದ ದಬುವಾ ಕಾಲೋನಿಯಲ್ಲಿ 33 ಅಡಿ ರಸ್ತೆಯಲ್ಲಿ ನಿರ್ಮಿಸಲಾದ ಮನೆಯ ಬೆಡ್‍ರೂಂಗೆ ಗೂಳಿ ಮತ್ತು ಹಸು ಪ್ರವೇಶಿಸಿದೆ. ನಂತರ ಅವುಗಳನ್ನು ಪಟಾಕಿ ಸಿಡಿಸಿ ಮನೆಯಿಂದ ಹೊರಗೆ ಕರೆತರಲಾಗಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(viral Video) ಆಗಿದೆ.


ಚಂಡೀಗಢ್: ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಮನೆಯೊಂದಕ್ಕೆ ಹಸು ಮತ್ತು ಗೂಳಿ ನುಗ್ಗಿ ಸೀದಾ ಬೆಡ್‍ರೂಂಗೆ ಹೋಗಿವೆ. ಹರಿಯಾಣದ ಫರಿದಾಬಾದ್‍ನ ಎನ್ಐಟಿ ಪ್ರದೇಶದ ದಬುವಾ ಕಾಲೋನಿಯಲ್ಲಿ ಮನೆಯ ಬೆಡ್‍ರೂಂಗೆ ಗೂಳಿ ಮತ್ತು ಹಸು ಪ್ರವೇಶಿಸಿದೆ. ಗೂಳಿ ಮತ್ತು ಹಸುವನ್ನು ಬೆಡ್‍ರೂಂನಲ್ಲಿ ನೋಡಿದ ಮನೆಯ ಮಹಿಳೆ ಗಾಬರಿಗೊಂಡು ತನ್ನ ರಕ್ಷಣೆಗಾಗಿ ಒಂದು ಗಂಟೆ ಕಾಲ ಕಬೋಡ್‍ನ ಹಿಂದೆ ಅಡಗಿಕೊಂಡಿದ್ದಾಳೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನೆರೆಹೊರೆಯವರು ಆಕೆಯ ಮನೆಗೆ ಬಂದು ಹಸು ಮತ್ತು ಗೂಳಿಯನ್ನು ಓಡಿಸಲು ಹರಸಾಹಸ ಮಾಡಿದ್ದಾರೆ. ಆದರೆ ಅವೆರಡು ಸುಮಾರು ಒಂದು ಗಂಟೆಗಳ ಕಾಲ ಮನೆಯ ಬೆಡ್‍ರೂಂ ಬಿಟ್ಟು ಕದಲಿಲ್ಲವಂತೆ. ನಂತರ, ಜನರು ಕೋಲುಗಳೊಂದಿಗೆ ಬೆಡ್‍ರೂಂಗೆ ಹೋಗಿ ಅವುಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ!
ಹಸು ಹಾಗೂ ಗೂಳಿ ಬೆಡ್ ರೂಂಗೆ ನುಗ್ಗಿದ ವಿಡಿಯೊ ಇಲ್ಲಿದೆ
#फरीदाबाद में बुधवार को गाय और सांड एक घर में घुस गए।महिला ने आलमारी में 2 घंटे तक छिपकर अपनी जान बचाई। बड़ी मुश्किल से पशुओं को घर से निकाला जा सका।#faridabad pic.twitter.com/TxpvmKnQ01
— ITM MEDIA 24 (@itmmedia24) March 27, 2025
ಮಾಹಿತಿ ಪ್ರಕಾರ, ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯ ಎಲ್ಲಾ ಸದಸ್ಯರು ತಮ್ಮ ಕೆಲಸದಲ್ಲಿ ನಿರತರಾಗಿದ್ದರಂತೆ. ಈ ಸಮಯದಲ್ಲಿ ಮನೆಯ ಬಾಗಿಲು ತೆರೆದಿತ್ತು. ಮನೆಯ ಗೃಹಿಣಿ ಸಪ್ನಾ ಕೋಣೆಯಲ್ಲಿ ದೇವರಿಗೆ ಪೂಜೆ ಮಾಡುತ್ತಿದ್ದಳಂತೆ. ಆಗ ಒಂದು ಹಸು ನೇರವಾಗಿ ಅವರ ಬೆಡ್‍ರೂಂಗೆ ಓಡಿದೆ. ಅದರ ಹಿಂದೆ ಒಂದು ಗೂಳಿ ಕೂಡ ಹೋಗಿದೆ. ಇವುಗಳನ್ನು ನೋಡಿ ಕುಟುಂಬ ಸದಸ್ಯರು ಶಾಕ್ ಆಗಿದ್ದಾರಂತೆ. ನಂತರ ಸುತ್ತಮುತ್ತಲಿನ ಜನರು ಅವುಗಳನ್ನು ಕೋಲುಗಳಿಂದ ಓಡಿಸಲು ಪ್ರಯತ್ನಿಸಿದ್ದಾರೆ. ಇದಲ್ಲದೆ, ಅವುಗಳ ಮೇಲೆ ನೀರನ್ನು ಎಸೆದರಂತೆ. ಸುಮಾರು ಒಂದು ಗಂಟೆಯ ಪ್ರಯತ್ನದ ಬಳಿಕ ಪಟಾಕಿಗಳನ್ನು ಸಿಡಿಸಿ ಅವೆರಡನ್ನು ಯಶಸ್ವಿಯಾಗಿ ಮನೆಯಿಂದ ಹೊರಗೆ ಓಡಿಸಲಾಯಿತಂತೆ.
ಈ ಸುದ್ದಿಯನ್ನೂ ಓದಿ:Viral Video: ನೆಚ್ಚಿನ ಶಿಕ್ಷಕನಿಗೆ ವಿದಾಯ ಹೇಳಲು ಈ ವಿದ್ಯಾರ್ಥಿಗಳು ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್
ಈ ಹಿಂದೆಯೂ ಈ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ಮನೆಯ ಮಾಲೀಕ ಹೇಳಿದ್ದಾನೆ. ದಾರಿತಪ್ಪಿದ ಎತ್ತುಗಳು ಮತ್ತು ಹಸುಗಳ ಹಿಂಡು ಆಗಾಗ್ಗೆ ಬೀದಿಯಲ್ಲಿ ಗುದ್ದಾಡುತ್ತವೆ. ಇದರಿಂದಾಗಿ ಬೀದಿಗಳಲ್ಲಿ ನಿಲ್ಲಿಸಿರುವ ವಾಹನಗಳು ಹಾಗೂ ಅಲ್ಲಿರುವ ಅಂಗಡಿಗಳು ಹಾನಿಗೊಳಗಾಗಿವೆಯಂತೆ. ಮಹಾನಗರ ಪಾಲಿಕೆಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ದೃಢವಾದ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.ಬಿಡಾಡಿ ಹಸುಗಳು ಮತ್ತು ಎತ್ತುಗಳನ್ನು ಹಿಡಿಯಬೇಕು ಎಂದು ಜನರು ಮುನ್ಸಿಪಲ್ ಕಾರ್ಪೊರೇಷನ್‍ಗೆ ಒತ್ತಾಯಿಸಿದ್ದಾರೆ. ಇದರಿಂದ ಅಂತಹ ಘಟನೆಗಳನ್ನು ತಪ್ಪಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.