ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ರೈಲಿನಿಂದ ನೀರಿನ ಬಾಟಲಿ ಎಸೆದ ಪ್ರಯಾಣಿಕ; ಪುಟ್ಟ ಬಾಲಕನ ಪ್ರಾಣಕ್ಕೆ ಸಂಚಕಾರ- ಅಷ್ಟಕ್ಕೂ ನಡೆದಿದ್ದೇನು?

ಗುಜರಾತ್‍ನ ರಾಜ್‌ಕೋಟ್‌ನಲ್ಲಿ ಚಲಿಸುವ ರೈಲಿನಿಂದ ಬಿಸಾಡಿದ ನೀರಿನ ಬಾಟಲಿಯಿಂದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಬಾಟಲಿಯು ಹೊರಗಡೆ ಆಟವಾಡುತ್ತಿದ್ದ 14 ವರ್ಷದ ಬಾಲಕನಿಗೆ ತಗುಲಿ ಆತ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸುದ್ದಿ ಇದೀಗ ವೈರಲ್‌(Viral News) ಆಗಿದೆ.

ರೈಲಿನಿಂದ ವಸ್ತುಗಳನ್ನು ಎಸೆಯೋ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ

Profile pavithra Apr 3, 2025 2:14 PM

ಗಾಂಧಿನಗರ: ಸಾಮಾನ್ಯವಾಗಿ ಜನರು ವಾಹನಗಳಲ್ಲಿ ಪ್ರಯಾಣಿಸುವಾಗ ಎಲ್ಲೆಂದರಲ್ಲಿ ತಮಗೆ ಬೇಡವಾದ ವಸ್ತುಗಳನ್ನು ಕಿಟಿಕಿಯ ಮೂಲಕ ಹೊರಗೆ ಎಸೆದುಬಿಡುತ್ತಾರೆ. ಹೀಗೆ ಎಸೆದ ನೀರಿನ ಬಾಟಲಿಯೊಂದು ಬಾಲಕನೊಬ್ಬನ ಜೀವಕ್ಕೆ ತುತ್ತು ತಂದಿದೆ ಎಂದರೆ ನೀವು ನಂಬುತ್ತೀರಾ...? ಹೌದು ಇಂತಹದ್ದೊಂದು ದಾರುಣವಾದ ಘಟನೆ ಗುಜರಾತ್‍ನ ರಾಜ್‌ಕೋಟ್‌ನಲ್ಲಿ ಬೆಳಕಿಗೆ ಬಂದಿದೆ. ಚಲಿಸುವ ರೈಲಿನಿಂದ ಎಸೆದ ನೀರಿನ ಬಾಟಲಿಯೊಂದು ಹೊರಗಡೆ ಆಟವಾಡುತ್ತಿದ್ದ 14 ವರ್ಷದ ಬಾಲಕನಿಗೆ ತಗುಲಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದೀಗ ಎಲ್ಲೆಡೆ ವೈರಲ್‌(Viral News) ಆಗಿದೆ.

ಬಾದಲ್ ಸಂತೋಷಭಾಯ್ ಠಾಕೂರ್(14) ನೀರಿನ ಬಾಟಲಿ ತಗುಲಿ ಮೃತಪಟ್ಟ ದುರ್ದೈವಿ ಬಾಲಕ. ಈತ ಬಾದಲ್ ರೈಲ್ವೆ ಹಳಿಗಳ ಬಳಿ ಸ್ನೇಹಿತರ ಜೊತೆ ಆಟವಾಡುತ್ತಿದ್ದಾಗ ನೀರಿನ ಬಾಟಲಿ ಇದ್ದಕ್ಕಿದ್ದಂತೆ ಬಂದು ಬಲವಾಗಿ ಆತನಿಗೆ ಬಡಿದಿದೆ. ತಕ್ಷಣ ಆತ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವರದಿಗಳ ಪ್ರಕಾರ, ವೆರಾವಲ್-ಬಾಂದ್ರಾ ಟರ್ಮಿನಸ್ (ಮುಂಬೈ) ರೈಲಿನ ಮೊದಲ ಬೋಗಿಯಲ್ಲಿದ್ದ ಪ್ರಯಾಣಿಕರೊಬ್ಬರು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ರೈಲು ಹಳಿಗಳ ಕಡೆಗೆ ನೀರಿನ ಬಾಟಲಿಯನ್ನು ಎಸೆದಿದ್ದಾರೆ. ದುರದೃಷ್ಟವಶಾತ್ ಅದು ಬಾದಲ್ ಎದೆಗೆ ಬಲವಾಗಿ ಹೊಡೆದು ಅವನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಶಾಪರ್ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಬಾಲಕನ ದೇಹವನ್ನು ರಾಜ್‌ಕೋಟ್‌ ಸಿವಿಲ್ ಆಸ್ಪತ್ರೆಯಲ್ಲಿ ವಿಧಿವಿಜ್ಞಾನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಾದಲ್ ಒಬ್ಬನೇ ಮಗನಾಗಿದ್ದು, ಆತನ ಕುಟುಂಬವು ಮಧ್ಯಪ್ರದೇಶದಿಂದ ಬಂದವರಂತೆ. ಮೃತನ ತಂದೆ ರಾಜ್‌ಕೋಟ್‌ನಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:Viral News: ಕುಡುಕರೇ ಎಚ್ಚರ; ಅಮಲಿನಲ್ಲಿ ಮಲಗಿದ್ದ ವ್ಯಕ್ತಿಯ ಜನನಾಂಗಕ್ಕೆ ನಟ್ ಸಿಲುಕಿಸಿದ ಕಿಡಿಗೇಡಿಗಳು; ಕೊನೆಗೆ ತೆಗೆದಿದ್ದು ಹೇಗೆ?

ಇದೇ ರೀತಿಯ ಘಟನೆ ಈ ವರ್ಷದ ಆರಂಭದಲ್ಲಿ ಮುಂಬೈ ಸ್ಥಳೀಯ ರೈಲು ಬೋಗಿಯಲ್ಲಿ ನಡೆದಿತ್ತು. ಟಿಟ್ವಾಲಾ ಸ್ಥಳೀಯ ರೈಲಿನಲ್ಲಿ ಮಹಿಳಾ ಪ್ರಯಾಣಿಕರಿದ್ದ ಕಂಪಾರ್ಟ್‍ಮೆಂಟ್‍ಗೆ ಖಾಲಿ ಮದ್ಯದ ಬಾಟಲಿಯನ್ನು ಎಸೆದ ಪರಿಣಾಮ ಬಾಟಲಿ ಒಡೆದು ಚೂರಾಗಿ ಅದರ ಒಂದು ಪೀಸ್‍ 18 ವರ್ಷದ ಪ್ರಯಾಣಿಕಳಿಗೆ ತಗುಲಿತ್ತು. ಆದರೆ ಆಕೆಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಈ ಬಗ್ಗೆ ಅಲ್ಲಿದ್ದ ಮಹಿಳಾ ಪೊಲೀಸರಿಗೆ ತಿಳಿಸಿದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗಿತ್ತು. ಈ ಘಟನೆಯನ್ನು ಬೋಗಿಯಲ್ಲಿದ್ದ ಪತ್ರಕರ್ತೆ ಒಬ್ಬಳು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು.