Viral News: ಲವ್ ಬ್ರೇಕಪ್ ಆಗಿದೆ, ಎರಡು ವಾರ ರಜೆ ಕೊಡಿ ಎಂದ ಉದ್ಯೋಗಿ; ಬಾಸ್ ರಿಪ್ಲೈ ಹೇಗಿತ್ತು ಗೊತ್ತಾ?
Employee emails CEO requesting leave: ಜನರಲ್ ಝಡ್ ತಮ್ಮ ನೇರ ಮಾತು ಮತ್ತು ನೇರ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಜನರಲ್ ಝಡ್ ಉದ್ಯೋಗಿಯೊಬ್ಬರು ತಮ್ಮ ಬಾಸ್‌ಗೆ ರಜಾ ಅರ್ಜಿಯ ಇಮೇಲ್ ಕಳುಹಿಸಿದ್ದು, ಅದನ್ನು ಸಾಮಾಜಿಕ ಹಂಚಿಕೊಳ್ಳಲಾಗಿದೆ. ಸದ್ಯ, ಪೋಸ್ಟ್ ಭಾರಿ ವೈರಲ್ ಆಗಿದೆ.
-
Priyanka P
Oct 29, 2025 4:39 PM
ನವದೆಹಲಿ: ಜನರಲ್ ಝಡ್ ತಮ್ಮ ನೇರ ಮಾತು ಮತ್ತು ನೇರ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ಪ್ರಾಮಾಣಿಕತೆ ಕೆಲವೊಮ್ಮೆ ಅವರನ್ನು ಕಾಡಬಹುದಾದರೂ, ಕೆಲವೊಂದು ಬಾರಿ ಅದು ಅವರ ಪರವಾಗಿ ಕೆಲಸ ಮಾಡುತ್ತದೆ. ಕಚೇರಿಯಲ್ಲಿ ಜನರಲ್ ಝಡ್ (Gen Z) ಉದ್ಯೋಗಿಗಳು ತಮ್ಮ ನಿರ್ಧಾರಗಳ ಬಗ್ಗೆ ಪ್ರಾಮಾಣಿಕವಾಗಿರಲು ಅಥವಾ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಅವರ ನೇರ ಸಂವಹನ ಶೈಲಿಯು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬಹಳ ಹಿಂದಿನಿಂದಲೂ ಆಕರ್ಷಿಸಿದೆ ಧ್ರುವೀಕರಿಸುತ್ತಿದೆ. ಇದೀಗ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ವೈರಲ್ (Viral News) ಆಗುತ್ತಿದ್ದು, ಅದು ಚರ್ಚೆಯ ವಿಷಯವಾಗಿದೆ.
ಹೌದು, ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಜನರಲ್ ಝಡ್ ಉದ್ಯೋಗಿಯೊಬ್ಬ CEO ಗೆ ರಜೆ ಬೇಕಾಗಿ ಮೇಲ್ ಮಾಡಿದ್ದಾನೆ. ಪ್ರಾಮಾಣಿಕ ಮತ್ತು ಹಾಸ್ಯಮಯವಾಗಿರುವ ರಜೆ ಮೇಲ್ ಅನ್ನು ಬಾಸ್ ಕೂಡ ಅನುಮೋದಿಸಿದ್ದಾರೆ. ನಾಟ್‌ಡೇಟಿಂಗ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಜಸ್ವೀರ್ ಸಿಂಗ್ ಅವರು ಎಕ್ಸ್‌ನಲ್ಲಿ ಈ ಅನುಭವದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದನ್ನು ಅವರು ನೋಡಿದ ಅತ್ಯಂತ ಪ್ರಾಮಾಣಿಕ ರಜೆ ಅರ್ಜಿ ಎಂದು ಬಣ್ಣಿಸಿದ್ದಾರೆ.
ಇಲ್ಲಿದೆ ಪೋಸ್ಟ್:
Got the most honest leave application yesterday. Gen Z doesn’t do filters! pic.twitter.com/H0J27L5EsE
— Jasveer Singh (@jasveer10) October 28, 2025
ಸಿಇಒ ಜಸ್ವೀರ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ- ನಮಸ್ಕಾರ ಸರ್, ನಾನು ಇತ್ತೀಚೆಗೆ ಬ್ರೇಕ್‌ಅಪ್ ಮಾಡಿಕೊಂಡೆ. ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ನನಗೆ ಸ್ವಲ್ಪ ವಿರಾಮ ಬೇಕು. ನಾನು ಇಂದು ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ನಾನು 28 ರಿಂದ 8 ರವರೆಗೆ ರಜೆ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಬರೆಯಲಾಗಿದೆ.
ಇದನ್ನೂ ಓದಿ: Viral News: ಅಜೀರ್ಣವೆಂದು ENO ಕುಡಿಯೋ ಅಭ್ಯಾಸ ಇದ್ಯಾ? ಹಾಗಿದ್ರೆ ಎಚ್ಚರ... ಎಚ್ಚರ!
ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡುತ್ತಾ ಸಿಂಗ್ ಬರೆದಿದ್ದಾರೆ, ನಿನ್ನೆ ಅತ್ಯಂತ ಪ್ರಾಮಾಣಿಕ ರಜೆ ಅರ್ಜಿ ಸಿಕ್ಕಿತು. ಜನರಲ್ ಝಡ್ ಮಂದಿ ಫಿಲ್ಟರ್ ಮಾಡುವುದಿಲ್ಲ. ನೇರಾ ನೇರಾ ವಿಷಯವನ್ನು ಹೇಳಿಬಿಡುತ್ತಾರೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಅದು 4.2 ಮಿಲಿಯನ್ ವೀಕ್ಷಣೆಗಳು ಮತ್ತು 91,000 ಲೈಕ್‌ಗಳನ್ನು ಗಳಿಸಿತು. ಬಳಕೆದಾರರು ತಮ್ಮ ಅಭಿಪ್ರಾಯಗಳಿಂದ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ.
ಜನರಲ್ ಝಡ್ ಬ್ರೇಕಪ್ ಮಾಡಿಕೊಳ್ಳುತ್ತಾರೆ ಮತ್ತು ರಜೆಗೆ ಅರ್ಜಿ ಸಲ್ಲಿಸುತ್ತಾರೆ. ಮಿಲೇನಿಯಲ್ಸ್ ಲವ್ ಬ್ರೇಕಪ್ ಆದಾಗ ಶೌಚಾಲಯದಲ್ಲಿ ಅಳುತ್ತಿದ್ದರು. ಜೊತೆಗೆ ಕೆಲಸವನ್ನು ಮಾಡುತ್ತಿದ್ದರು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರ ಪ್ರಾಮಾಣಿಕತೆಗೆ ವೇತನ ಸಹಿತ ರಜೆ ನೀಡಬೇಕು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.