ಒಂಟಿ ಕಾಲಿನಲ್ಲೇ 400 ಮೀಟರ್ ನಡೆಯುತ್ತ ಶಾಲೆಗೆ ತೆರಳುವ 7 ವರ್ಷದ ವಿದ್ಯಾರ್ಥಿನಿ; ತ್ರಿಚಕ್ರದ ಸೈಕಲ್‌ಗೆ ಕೊಡಿಸುವಂತೆ ಡಿಸಿಗೆ ಮನವಿ
Viral Video: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರಾಗಿಣಿ ಎಂಬ ಬಾಲಕಿ ತನ್ನ ಮನೆಯಿಂದ ಪ್ರತಿದಿನ 400 ಮೀಟರ್ ದೂರದಲ್ಲಿರುವ ಶಾಲೆಗೆ ಒಂದು ಕಾಲಿನಲ್ಲಿಯೇ ತೆರಳುತ್ತಿದ್ದಾಳೆ. ಕಾಲು ಕಳೆದುಕೊಂಡರೂ ಶಾಲೆಗೆ ಹೋಗುವ 7 ವರ್ಷದ ಬಾಲಕಿಯ ಆಸಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆಕೆ "ಓಡಾಡಲು ಒಂದು ತ್ರಿಚಕ್ರ ಸೈಕಲ್ ಕೊಡಿಸಿ, ನಾನು ಪ್ರತಿದಿನ ಶಾಲೆಗೆ ಓದಲು ಬರುತ್ತೇನೆ" ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಒಂದು ಕಾಲಿನಲ್ಲಿ 400 ಮೀಟರ್ ನಡೆಯುತ್ತ ಶಾಲೆಗೆ ತೆರಳುವ ವಿದ್ಯಾರ್ಥಿನಿ ರಾಗಿಣಿ -
ಲಖನೌ, ಸೆ. 2: ಒಂದು ಕಾಲನ್ನು ಕಳೆದುಕೊಂಡ 7 ವರ್ಷದ ಬಾಲಕಿಯೊಬ್ಬಳು ಶಿಕ್ಷಣದೆಡೆಗೆ ತೋರುತ್ತಿರುವ ಆಸಕ್ತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರಾಗಿಣಿ ಎಂಬ ಬಾಲಕಿ ತನ್ನ ಮನೆಯಿಂದ ಪ್ರತಿದಿನ 400 ಮೀಟರ್ ದೂರದಲ್ಲಿರುವ ಶಾಲೆಗೆ ಒಂಟಿ ಕಾಲಿನಲ್ಲಿಯೇ ತೆರಳುತ್ತಾಳೆ. ಕಾಲು ಕಳೆದುಕೊಂಡರೂ ಶಾಲೆಗೆ ಹೋಗುವ ಆಕೆಯ ಛಲಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇತ್ತೀಚೆಗೆ ಆಕೆ "ಓಡಾಡಲು ಒಂದು ತ್ರಿಚಕ್ರ ಸೈಕಲ್ ಕೊಡಿಸಿ, ನಾನು ಪ್ರತಿದಿನ ಶಾಲೆಗೆ ಓದಲು ಬರುತ್ತೇನೆ" ಎಂದು ಜಿಲ್ಲಾಧಿಕಾರಿಯನ್ನು ಕೇಳುತ್ತಿರುವ ವಿಡಿಯೊ ವೈರಲ್ (Viral News) ಆಗಿದೆ.
ರಾಗಿಣಿ ಆರು ತಿಂಗಳ ಮಗುವಾಗಿದ್ದಾಗ ರಸ್ತೆ ಅಪಘಾತದಲ್ಲಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದಳು. ಅಂಗವೈಕಲ್ಯದ ಹೊರತಾಗಿಯೂ, ಅವಳು ಶಾಲೆಗೆ ಹೋಗಿ ಶಿಕ್ಷಣವನ್ನು ಮುಂದುವರಿಸಲು ದೃಢಸಂಕಲ್ಪ ಹೊಂದಿದ್ದಾಳೆ. ಅವಳು ಉತ್ತರ ಪ್ರದೇಶದ ಬಲ್ಲಿಯಾದಲ್ಲಿರುವ ಸರ್ಕಾರಿ ಶಾಲೆಗೆ ತೆರಳುತ್ತಿದ್ದಾಳೆ. ಅವಳಿಗೆ ಶಾಲಾ ಶಿಕ್ಷಣವನ್ನು ಮುಂದುವರಿಸಲು ಬೇಕಾಗಿರುವುದು ತ್ರಿಚಕ್ರ ವಾಹನ. ಪ್ರಸ್ತುತ ಒಂದನೇ ತರಗತಿ ಓದುತ್ತಿರುವ ಈಕೆ, ಪ್ರತಿದಿನ ತನ್ನ ಮನೆಯಿಂದ ಒಂದು ಕಾಲಿನಲ್ಲಿಯೇ ಜಿಗಿಯುತ್ತ ಶಾಲೆಗೆ ತೆರಳುತ್ತಿದ್ದಾಳೆ.
ವಿಡಿಯೊ ನೋಡಿ:
Every time a poor girl needs a tricycle she should have received long ago, we first have to create a social media revolution. Why is the local administration so incompetent that it is never seen doing even the least that is expected of it?
— Piyush Rai (@Benarasiyaa) September 1, 2026
📍 Ballia, UP https://t.co/UnfUdUGNgt pic.twitter.com/xGtLj94fSU
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಬಾಲಕಿ ರಾಗಿಣಿ ಜಿಲ್ಲಾಧಿಕಾರಿಗೆ ಭಾವುಕ ಮನವಿ ಮಾಡಿಕೊಂಡಿದ್ದಾಳೆ. "ಡಿಎಂ ಅಂಕಲ್, ನಾನು ಒಂದು ಕಾಲಿನಲ್ಲಿ ನಡೆಯುತ್ತಿದ್ದೇನೆ. ದಿನ ಶಾಲೆಗೆ ಬರಲು ಸೈಕಲ್ ಕೊಡಿಸಿʼʼ ಎಂದಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸ್ಥಳೀಯ ಆಡಳಿತ ಮತ್ತು ಶಾಲಾ ಆಡಳಿತದ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ
ಮಗುವಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳಬೇಕಾದ ಸ್ಥಿತಿ ಬಂದಿರುವುದು ದುರದೃಷ್ಟ ಎಂದು ಕಿಡಿಕಾರಿದ್ದಾರೆ. ಕೆಲವರು ಆಕೆಗೆ ಕೇವಲ ತ್ರಿಚಕ್ರ ವಾಹನವಲ್ಲದೆ, ಕೃತಕ ಕಾಲು ಅಳವಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ವಿಡಿಯೊ ನೋಡಿ ದಾನಿಯೊಬ್ಬರು ಸೈಕಲ್‌ನ ಸಂಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ. ವಿಡಿಯೋ ವೈರಲ್ ಆದ ತಕ್ಷಣವೇ ಬಲ್ಲಿಯಾ ಜಿಲ್ಲಾಡಳಿತ ಸ್ಪಂದಿಸಿದ್ದು, ಬಾಲಕಿಗೆ ತಕ್ಷಣವೇ ತ್ರಿಚಕ್ರ ವಾಹನವನ್ನು ತಲುಪಿಸಿರುವ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.