Viral Video: ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಮೊಳಗಿದ ಬಾಲಿವುಡ್‍ನ ಐಕಾನಿಕ್ ಹಾಡು 'ಧೂಮ್ ಮಚಾಲೆ'
ಬ್ರಿಟನ್‌ನ ಅತ್ಯಂತ ಪ್ರಸಿದ್ಧವಾದ ರಾಜಮನೆತನದ ಸ್ಥಳಗಳಲ್ಲಿ ಒಂದಾದ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಸ್ವಾಮಿ ಬಾಪ ಪೈಪ್ ಬ್ಯಾಂಡ್ ಬಾಲಿವುಡ್ ಹಾಡಾದ "ಧೂಮ್ ಮಚಾಲೆ" ಹಾಡನ್ನು ನುಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ಲಂಡನ್: ರಾಜಮನೆತನವೆಂದರೆ ಅದಕ್ಕೆ ಅದರದ್ದೇ ಆದ ರೀತಿ ರಿವಾಜುಗಳು ಇರುತ್ತದೆ. ಅಲ್ಲಿನ ಪದ್ಧತಿಗಳನ್ನು ಮೀರಿ ಹೋಗುವುದಿಲ್ಲ ಎಂಬ ನಂಬಿಕೆ ಕೆಲವರದ್ದು. ಆದರೆ ಈಗ ಬಿಟನ್ನಿನ ವೆಸ್ಟ್ ಮಿನಿಸ್ಟರ್ ಅಬೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದೆ. ಯಾಕೆಂದರೆ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಬಾಲಿವುಡ್ ಹಾಡಾದ "ಧೂಮ್ ಮಚಾಲೆ" ಹಾಡನ್ನು ನುಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ಅನೇಕ ನೆಟ್ಟಿಗರು ಶಾಕ್ ಆಗಿದ್ದಾರೆ. ಕೆಲವರು ಇದನ್ನು ಫೇಕ್ ಎಂದು ತಳ್ಳಿಹಾಕಿದ್ದಾರೆ. ಶ್ರೀ ಮುಕ್ತಜೀವನ್ ಸ್ವಾಮಿಬಾಪ ಪೈಪ್ ಬ್ಯಾಂಡ್ ತಮ್ಮ ಅಧಿಕೃತ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಈ ವಿಡಿಯೊವನ್ನು(Viral Video) ಪೋಸ್ಟ್ ಮಾಡಿದಾಗ ಇದು ನಿಜವೇ...? ಎಂಬ ಭಾವನೆ ಎಲ್ಲರಲ್ಲೂ ಮೂಡಿತ್ತು.
ಬ್ರಿಟಿಷ್ ಪರಂಪರೆ ಮತ್ತು ರಾಜ ಮನೆತನದ ಸಂಪ್ರದಾಯದ ಸಂಕೇತವಾಗಿದ್ದ ವೆಸ್ಟ್ ಮಿನಿಸ್ಟರ್ ಅಬೆ, ಪ್ರತಿಷ್ಠಿತ ಸಮಾರಂಭದಲ್ಲಿ ಭಾರತೀಯ ಚಲನಚಿತ್ರ ಗೀತೆಯನ್ನು ಸೇರಿಸುವ ಮೂಲಕ ಬಹುಸಾಂಸ್ಕೃತಿಕತೆಯನ್ನು ಅಳವಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. ಈ ಕ್ಷಣವು ಸಾಂಸ್ಕೃತಿಕ ಬದಲಾವಣೆಯನ್ನು ಒತ್ತಿ ಹೇಳುತ್ತದೆ. ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಬಾಲಿವುಡ್ ಹಾಡಿನ ಪ್ರದರ್ಶನವು ಎಲ್ಲರ ಗಮನ ತನ್ನತ್ತ ಸೆಳೆಯುವಂತೆ ಮಾಡಿದೆ. ಹಾಗಾಗಿ ಇದು ವಿಶ್ವಾದ್ಯಂತ ಪ್ರೇಕ್ಷಕರ ಗಮನವನ್ನು ಸೆಳೆದ ಸಾಂಸ್ಕೃತಿಕ ಸಮ್ಮಿಳನಕ್ಕೆ ಉದಾಹರಣೆಯಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಸಾಂಪ್ರದಾಯಿಕ ಸ್ಕಾಟಿಷ್ ಪೈಪಿಂಗ್ ಅನ್ನು ಭಾರತೀಯ ಸಂಗೀತ ಅಂಶಗಳೊಂದಿಗೆ ಬೆರೆಸುವ ಸ್ವಾಮಿನಾರಾಯಣ ಗಾಡಿ ಪೈಪ್ ಬ್ಯಾಂಡ್ ದೀರ್ಘಕಾಲದಿಂದ ಇಂಡೋ-ಬ್ರಿಟಿಷ್ ಸಾಮರಸ್ಯದ ಸಂಕೇತವಾಗಿದೆ. ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ನಡೆಸಿದ ಅವರ ಧೂಮ್ ಮಚಾಲೆ ಹಾಡಿನ ಪ್ರದರ್ಶನವು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral News: 45 ಅಡಿ ಎತ್ತರದ ನಗ್ನ ಮಹಿಳೆ ಶಿಲ್ಪ ಲೋಕಾರ್ಪಣೆ; ಇದರ ವಿಶೇಷತೆ ಕೇಳಿದ್ರೆ ನೀವೂ ಬೆರಗಾಗ್ತೀರಾ!
ಇದರ ಜೊತೆಗೆ ಬಾಡಿಗಾರ್ಡ್ (2011) ಚಲನಚಿತ್ರದ ತೇರಿ ಮೇರಿ ಮುಂತಾದ ಹಲವಾರು ಬಾಲಿವುಡ್ ಹಾಡುಗಳನ್ನು ಪ್ರದರ್ಶನದಲ್ಲಿ ಸೇರಿಸಲಾಯಿತು. ಬ್ಯಾಂಡ್ ದೀರ್ಘಕಾಲದಿಂದ ಬಾಲಿವುಡ್, ಹಾಲಿವುಡ್ ಮತ್ತು ಸ್ಕಾಟಿಷ್ ರಾಗಗಳನ್ನು ರಾಯಲ್ ಕಾರ್ಯಕ್ರಮಗಳಲ್ಲಿ ಸಂಯೋಜಿಸಿದೆ.