Viral Video: ಆನೆಯ ಮರಿಯ ಈ ಕ್ಯೂಟ್ ವಿಡಿಯೊ ಎಷ್ಟು ನೋಡಿದ್ರೂ ಸಾಲಲ್ಲ! ನೀವೂ ನೋಡಿ ಖುಷಿ ಪಡಿ
ಆನೆಯೊಂದು ತನ್ನ ಮರಿಗೆ ಆಹಾರವನ್ನು ಸ್ವಚ್ಛ ಮಾಡಿ ತಿನ್ನುವಂತಹ ಕಲೆಯನ್ನು ಕಲಿಸುವ ವಿಡಿಯೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಇದರಲ್ಲಿ ಹುಲ್ಲನ್ನು ಕಿತ್ತುಕೊಂಡ ಆನೆ ಅದನ್ನು ತಿನ್ನುವ ಮೊದಲು, ಬೇರುಗಳಿಂದ ಮಣ್ಣನ್ನು ಸೊಂಡಿಲಿನಿಂದ ಅಲುಗಾಡಿಸಿ ಸ್ವಚ್ಛ ಮಾಡಿ ತಿಂದಿದೆ. ಇದನ್ನು ಕಂಡು ಮರಿ ಆನೆ ಕೂಡ ಹಾಗೇ ಮಾಡಿದೆ.


ಮನುಷ್ಯರಂತೆ ಎಲ್ಲಾ ಪ್ರಾಣಿ-ಪಕ್ಷಿಗಳು ಕೂಡ ತಮ್ಮ ಮರಿಗಳಿಗೆ ಬದುಕುವ ಕಲೆಯನ್ನು ಕಲಿಸುತ್ತವೆ. ಆಹಾರವನ್ನು ಹುಡುಕುವುದು, ಸ್ನಾನ ಮಾಡುವುದು, ಶತ್ರುಗಳಿಂದ ತಪ್ಪಿಸಿಕೊಳ್ಳುವುದು ಹೀಗೆ ಹಲವಾರು ಕಲೆಗಳನ್ನು ಅವು ತಮ್ಮ ಮರಿಗಳಿಗೆ ಕಲಿಸಿಕೊಡುತ್ತವೆ. ಅಂದಹಾಗೇ ಇತ್ತೀಚೆಗೆ ಆನೆಯೊಂದು ತನ್ನ ಮರಿಗೆ ಆಹಾರವನ್ನು ಸ್ವಚ್ಛ ಮಾಡಿ ತಿನ್ನುವಂತಹ ಕಲೆಯನ್ನು ಕಲಿಸುವ ವಿಡಿಯೊಂದು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಮರಿ ಆನೆ ಮತ್ತು ಅದರ ತಾಯಿಯ ನಡುವಿನ ಈ ಹೃದಯಸ್ಪರ್ಶಿ ವಿಡಿಯೊ ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ.
ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಆನೆ ತನ್ನ ಮರಿಗೆ ಹುಲ್ಲನ್ನು ಹೇಗೆ ತಿನ್ನಬೇಕೆಂಬುದನ್ನು ಕಲಿಸಿಕೊಟ್ಟಿದೆ. ಇಬ್ಬರೂ ಒಟ್ಟಿಗೆ ತಿರುಗಾಡುವಾಗ ಅಲ್ಲಿದ್ದ ಹುಲ್ಲನ್ನು ಕಿತ್ತುಕೊಂಡ ಆನೆ ಅದನ್ನು ತಿನ್ನುವ ಮೊದಲು, ಬೇರುಗಳಿಂದ ಮಣ್ಣನ್ನು ಅಲುಗಾಡಿಸಲು ತನ್ನ ಸೊಂಡಿಲು ಮತ್ತು ಪಾದವನ್ನು ಬಳಸಿದ್ದಾಳೆ. ಮಣ್ಣು ಎಲ್ಲಾ ಹೋದ ನಂತರ ಅದನ್ನು ಬಾಯಿಗೆ ಹಾಕಿಕೊಂಡು ತಿಂದಿದೆ. ಮರಿ ಆನೆ ಕೂಡ ಇದನ್ನು ಗಮನಿಸಿ ಅದೇ ರೀತಿ ಮಾಡಿದೆ.
ಹುಲ್ಲು ತಿಂದ ಆನೆ ಮರಿಯ ವಿಡಿಯೊ ಇಲ್ಲಿದೆ ನೋಡಿ...
That kiddo learning from mother the right way to eat grass. Not even small dirt should go in stomach. See. pic.twitter.com/0UIO3l2Ro3
— Parveen Kaswan, IFS (@ParveenKaswan) April 15, 2025
ಈ ದೃಶ್ಯವನ್ನು ನೆಟ್ಟಿಗರು "ನೇಚರ್ಸ್ ಕ್ಲಾಸ್ ರೂಂ ಇನ್ ಸೆಷನ್ಸ್” ಎಂದು ಕರೆದಿದ್ದಾರೆ. ಈ ವಿಡಿಯೊ ಹಂಚಿಕೊಂಡ ಅರಣ್ಯ ಅಧಿಕಾರಿ ಕಸ್ವಾನ್, "ಆ ಮರಿ ಆನೆಯ ಹೊಟ್ಟೆಯೊಳಗೆ ಸ್ವಲ್ಪವೂ ಕೊಳೆ ಹೋಗದಂತೆ ಹುಲ್ಲು ತಿನ್ನುವ ಸರಿಯಾದ ವಿಧಾನವನ್ನು ತಾಯಿಯಿಂದ ಕಲಿಯುತ್ತದೆ” ಎಂದು ಹೇಳುವ ಮೂಲಕ ಇಲ್ಲಿ ತಾಯಿಯ ಜವಾಬ್ದಾರಿ, ಮಹತ್ವವನ್ನು ತಿಳಿಸಿದ್ದಾರೆ.
ಈ ವಿಡಿಯೊ ಈಗಾಗಲೇ 29,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಮತ್ತು ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ, "ನಾನು ಆನೆಗಳ ಬಗ್ಗೆ ಹೆಚ್ಚು ಓದುತ್ತೇನೆ ಅಥವಾ ನೋಡುತ್ತೇನೆ, ಇದರಿಂದ ನಾನು ಆನೆಗಳ ಬಗ್ಗೆ ಹೆಚ್ಚು ವಿಸ್ಮಯಗೊಳ್ಳುತ್ತೇನೆ. ಅವು ಅತಿ ಬುದ್ಧಿವಂತ, ಉದಾತ್ತ, ಸುಂದರ ಪ್ರಾಣಿ." ಎಂದು ಹೇಳಿದ್ದಾರೆ. ಇನ್ನೊಬ್ಬರು, " ತಿನ್ನುವ ಮೊದಲು ಬೇರುಗಳಿಂದ ಕೊಳೆಯನ್ನು ತೆಗೆದುಹಾಕುವುದನ್ನು ನೋಡಲು ಬಹಳ ಅದ್ಭುತವಾಗಿದೆ." ಎಂದಿದ್ದಾರೆ. ಇನ್ನೊಬ್ಬರು " ಆ ಪುಟ್ಟ ಮಗು ತನ್ನ ತಾಯಿಯಿಂದ ಸ್ವಚ್ಛವಾಗಿ ಮೇಯುವ ಕಲೆಯನ್ನು ಕಲಿಯುವುದು ಸಹಜ ಬುದ್ಧಿವಂತಿಕೆಯಾಗಿದೆ." ಎಂದಿದ್ದಾರೆ. ಮತ್ತೊಬ್ಬರು, ತಾಯಿ ಆನೆಯನ್ನು ಬೆಸ್ಟ್ ಟ್ರೈನರ್ ಎಂದು ಕರೆದಿದ್ದಾರೆ. ಇನ್ನೂ ಅನೇಕರು ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿ "ಅದ್ಭುತ" ಮತ್ತು "ಸುಂದರ ಕ್ಷಣ" ಎಂದು ಕರೆದಿದ್ದಾರೆ.
ಇದೇ ರೀತಿ ತಾಯಿ ಆನೆ ಮತ್ತು ಮರಿ ಆನೆಗೆ ಸಂಬಂಧಪಟ್ಟ ವಿಡಿಯೊವೊಂದು ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ 5.2 ತೀವ್ರತೆಯ ಭೂಕಂಪ ಸಂಭವಿಸುತ್ತಿದ್ದಂತೆ, ಎಸ್ಕೊಂಡಿಡೊದ ಸ್ಯಾನ್ ಡಿಯಾಗೋ ಮೃಗಾಲಯ ಸಫಾರಿ ಪಾರ್ಕ್‍ನಲ್ಲಿ ಆಫ್ರಿಕನ್ ಆನೆಗಳು ತಮ್ಮ ಮರಿಗಳ ಸುತ್ತಲೂ ಒಂದು ವೃತ್ತವನ್ನು ರಚಿಸಿ ನಿಂತಿದ್ದವು. ಇದನ್ನು ʼಅಲರ್ಟ್ ಸರ್ಕಲ್ʼ ಎಂದು ಕರೆಯಲಾಗುತ್ತದೆ. ಇದು ಆನೆಗಳು ತಮ್ಮ ಮರಿಗಳ ರಕ್ಷಣೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.