Viral Video: ಅಳಿಯನಿಗೆ ಅತ್ತೆ-ಮಾವನಿಂದಲೇ ತಾಲಿಬಾನ್ ಶೈಲಿಯಲ್ಲಿ ಶಿಕ್ಷೆ- ವಿಡಿಯೊ ಇದೆ
ವ್ಯಕ್ತಿಯೊಬ್ಬರಿಗೆ ತಾಲಿಬಾನ್ ಶೈಲಿಯಲ್ಲಿ ( Taliban-Style’ Punishment ) ಶಿಕ್ಷೆ ನೀಡಿರುವ ಘಟನೆ ಉತ್ತರ ಪ್ರದೇಶದ (uttar pradesh) ಪಿಲಿಭಿತ್ ಜಿಲ್ಲೆಯಲ್ಲಿ (Pilibhit District) ನಡೆದಿದೆ. ಅಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾ ಮಜ್ಲಿಯಾ ಗ್ರಾಮದಲ್ಲಿ ಮೊಹಮ್ಮದ್ ಯಾಮೀನ್ ಎಂಬವರಿಗೆ ಅವರ ಅತ್ತೆ ಮತ್ತು ಮಾವ ಸೇರಿ ತಾಲಿಬಾನ್ ಶೈಲಿಯಲ್ಲಿ ಶಿಕ್ಷೆ ನೀಡಿದ್ದಾರೆ.


ಲಖನೌ: ವ್ಯಕ್ತಿಯೊಬ್ಬರಿಗೆ ತಾಲಿಬಾನ್ ಶೈಲಿಯಲ್ಲಿ ( Taliban-Style’ Punishment ) ಶಿಕ್ಷೆ ನೀಡಿರುವ ಘಟನೆ ಉತ್ತರ ಪ್ರದೇಶದ (uttar pradesh) ಪಿಲಿಭಿತ್ ಜಿಲ್ಲೆಯಲ್ಲಿ (Pilibhit District) ನಡೆದಿದೆ. ಅಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾ ಮಜ್ಲಿಯಾ ಗ್ರಾಮದಲ್ಲಿ ಮೊಹಮ್ಮದ್ ಯಾಮೀನ್ ಎಂಬವರಿಗೆ ಅವರ ಅತ್ತೆ ಮತ್ತು ಮಾವ ಸೇರಿ ತಾಲಿಬಾನ್ ಶೈಲಿಯಲ್ಲಿ ಶಿಕ್ಷೆ ನೀಡಿದ್ದಾರೆ. ಮೊಹಮ್ಮದ್ ಯಾಮೀನ್ ಅವರನ್ನು ನೆಲದ ಮೇಲೆ ಮಲಗಿಸಿ ಬೆಲ್ಟ್ ನಿಂದ ಹೊಡೆದಿದ್ದು, ಗಂಟಿಲಿನ ಮೇಲೆ ಕಾಲಿಟ್ಟು ತುಳಿಯುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ (Viral Video) ಆಗಿದೆ.
ಪಿಲಿಭಿತ್ ಜಿಲ್ಲೆಯ ಅಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾ ಮಜ್ಲಿಯಾ ಗ್ರಾಮದಲ್ಲಿ ಮೊಹಮ್ಮದ್ ಯಾಮೀನ್ ಎಂಬವರಿಗೆ ಅವರ ಹೆಂಡತಿಯ ತಂದೆ ಮತ್ತು ತಾಯಿ ಹಿಂಸಾತ್ಮಕವಾಗಿ ಶಿಕ್ಷೆ ನೀಡಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
ಮೊಹಮ್ಮದ್ ಯಾಮೀನ್ ಅವರನ್ನು ಅವರ ಅತ್ತೆ ಮತ್ತು ಮಾವ ಸೇರಿ ಕುಟುಂಬ ಸದಸ್ಯರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಯಾಮೀನ್ ಅವರನ್ನು ನೆಲದ ಮೇಲೆ ಮಲಗಿಸಿ ಬೆಲ್ಟ್‌ನಿಂದ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಹೊಡೆಯುತ್ತಿರುವುದನ್ನು ಕಾಣಬಹುದು. ಈ ಕೃತ್ಯವನ್ನು "ತಾಲಿಬಾನ್ ಶೈಲಿಯ" ಶಿಕ್ಷೆ ಎಂದು ಕರೆಯಲಾಗಿದೆ.
#Pilibhit #Up
— Local Update News (@localupdatenews) July 15, 2025
Video of bullying goes viral.... in Pilibhit.
🔹 According to the information received, the video is said to be from a village in Amaria police station area.#up #Viral_video @pilibhitpolice pic.twitter.com/9ZU9khJg2a
ಈ ವಿಡಿಯೊದಲ್ಲಿ ಮೌಲಾನಾ ಅವರನ್ನು ಹೋಲುವ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ಯಾಮೀನ್‌ಗೆ ಪದೇ ಪದೇ ಚಾಟಿಯೇಟು ನೀಡುತ್ತಿರುವುದನ್ನು ಕಾಣಬಹುದು. ಒಂದು ಬಾರಿ ಆತ ಯಾಮೀನ್‌ನ ಗಂಟಲಿನ ಮೇಲೆ ಬಲವಾಗಿ ತನ್ನ ಪಾದವನ್ನು ಒತ್ತುತ್ತಿರುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಯಾಮೀನ್ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾರೂ ಅವರ ಸಹಾಯಕ್ಕೆ ಬರಲಿಲ್ಲ.
ಅಲ್ಲದೇ ಈ ವಿಡಿಯೊದಲ್ಲಿ ಇನ್ನಿಬ್ಬರು ವ್ಯಕ್ತಿಗಳೂ ಕೂಡ ಯಾಮೀನ್ ಮೇಲೆ ಹಲ್ಲೆ ನಡೆಸಿರುವುದು ಕೂಡ ಸೆರೆಯಾಗಿದೆ.
ಇದನ್ನೂ ಓದಿ: Murder Case: ವಿಜಯಪುರದಲ್ಲಿ ಬಾಗಪ್ಪ ಹರಿಜನ ಆಪ್ತನ ಹತ್ಯೆ, ಗುಂಡು ಹಾರಿಸಿ ಆರೋಪಿಗಳ ಸೆರೆ
ಯಾಮೀನ್‌ನನ್ನು ಹೊಡೆಯುತ್ತಿರುವ ವ್ಯಕ್ತಿಯನ್ನು ಅವರ ಮಾವ ಎಂದು ಗುರುತಿಸಲಾಗಿದೆ. ಯಾಮೀನ್ ಮಾದಕ ವ್ಯಸನಿಯಾಗಿದ್ದು, ಇದು ಅವರ ದಾಂಪತ್ಯದಲ್ಲಿ ನಿರಂತರ ಉದ್ವಿಗ್ನತೆಗೆ ಕಾರಣವಾಗಿತ್ತು ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೊ ಗಮನಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಮೂವರನ್ನು ಬಂಧಿಸಿದ್ದಾರೆ. ಆದರೆ ಇನ್ನು ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.