ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಸ್ಪೀಡಾಗಿ ಬಂದು ಮಹಿಳೆ ಸೇರಿ 5 ಮಕ್ಕಳ ಮೇಲೆ ಹರಿದ ಕಾರು; ಡೆಡ್ಲಿ ಅಪಘಾತದ ವಿಡಿಯೊ ವೈರಲ್

ದೆಹಲಿಯ ಹಳೆಯ ರಾಜೇಂದ್ರ ನಗರದ ಬಡಾ ಬಜಾರ್ ರಸ್ತೆಯಲ್ಲಿ ಮಂಗಳವಾರ (ಏಪ್ರಿಲ್ 8) ರಾತ್ರಿ ವೇಗವಾಗಿ ಬಂದ ಕಾರೊಂದು ಮಹಿಳೆ, 5 ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವರೆಲ್ಲರೂ ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಚಾಲಕ ಮಾಡಿದ ಅವಾಂತರವೇನು ನೋಡಿ!

Profile pavithra Apr 9, 2025 4:33 PM

ನವದೆಹಲಿ: ಅತಿವೇಗ ಅಪಘಾತಕ್ಕೆ ಕಾರಣ ಎಂಬ ವಿಚಾರ ಎಲ್ಲರಿಗೂ ತಿಳಿದಿದ್ದರೂ ಕೂಡ ಜನರು ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಿ ತಮ್ಮ ಜೀವದ ಜೊತೆಗೆ ಇತರರ ಜೀವಕ್ಕೂ ಅಪಾಯ ತರುತ್ತಾರೆ. ಇದೀಗ ಅಂತಹದೊಂದು ದುರಂತ ಘಟನೆ ದೆಹಲಿಯ ಹಳೆಯ ರಾಜೇಂದ್ರ ನಗರದಲ್ಲಿ ನಡೆದಿದೆ. ವೇಗವಾಗಿ ಬಂದ ಕಾರೊಂದು ಮಂಗಳವಾರ (ಏಪ್ರಿಲ್ 8) ರಾತ್ರಿ ಮಹಿಳೆ, 5 ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವರೆಲ್ಲರೂ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಘಟನೆಯ ನಂತರದ ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಘಟನೆ ನಡೆದ ನಂತರ ಪೊಲೀಸರು ಸ್ಥಳಕ್ಕೆ ತಲುಪಿ ಈ ಬಗ್ಗೆ ತನಿಖೆ ನಡೆಸಿದ್ದಾರೆ.

ವೈರಲ್ ವಿಡಿಯೊದಲ್ಲಿ ಅಪಘಾತಕ್ಕೀಡಾದ ಕಾರು ಬಿಳಿ ಬಣ್ಣದ ಹ್ಯುಂಡೈ ಹ್ಯಾಚ್ ಬ್ಯಾಕ್ ಆಗಿದೆ. ಪೊಲೀಸರು ವಾಹನದ ಪರಿಶೀಲನೆ ಮಾಡಿದ್ದಾರೆ. ತನಿಖೆ ಮುಗಿದ ನಂತರ ಅಪಘಾತಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿದ್ದಾರಂತೆ.

ವಿಡಿಯೊ ಇಲ್ಲಿದೆ ನೋಡಿ...



ವರದಿ ಪ್ರಕಾರ, ಕಾರಿನ ಚಾಲಕನನ್ನು 45 ವರ್ಷದ ಪ್ರೇಮ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಹಳೆಯ ರಾಜೇಂದ್ರ ನಗರದ ಬಡಾ ಬಜಾರ್ ರಸ್ತೆಯಲ್ಲಿ ಈ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಅದರಲ್ಲಿ ಐವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಒಬ್ಬಳು ಮಹಿಳೆ ಎನ್ನಲಾಗಿದೆ. ಗಾಯಗೊಂಡವರನ್ನು ಲೋಕೇಶ್, ಬೇಬಿ, ಶಿವಂ, ಹರ್ಷಿತಾ, ಸ್ಟೀಫನ್, ವಿಪುಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 24 ರಿಂದ 30 ವರ್ಷದೊಳಗಿನವರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ; ರೈಲಿನಲ್ಲಿ ಅಧಿಕಾರಿಗಳು, ಸಹಪ್ರಯಾಣಿಕರಿಗೆ ಬೆದರಿಕೆ ಹಾಕಿದ ಬುರ್ಕಾಧಾರಿ ಮಹಿಳೆ

ಕಾರಿಗೆ ಬೆಂಕಿ ತಗುಲಿ ವ್ಯಕ್ತಿಯೊಬ್ಬನ ಸಜೀವ ದಹನ

ದೆಹಲಿಯಲ್ಲಿ ಸೋಮವಾರ(ಏಪ್ರಿಲ್ 7) ಮತ್ತೊಂದು ಘಟನೆ ನಡೆದಿದ್ದು, ರಾಷ್ಟ್ರ ರಾಜಧಾನಿಯ ಚಾಣಕ್ಯಪುರಿ ಪ್ರದೇಶದ ಬಿಜ್ವಾಸನ್ ರಸ್ತೆ ಫ್ಲೈಓವರ್‌ನಲ್ಲಿ ಕಾರಿಗೆ ಬೆಂಕಿ ತಗುಲಿ ವ್ಯಕ್ತಿಯೊಬ್ಬ ಸಜೀವವಾಗಿ ದಹನವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ 10:32 ರ ಸುಮಾರಿಗೆ ಈ ಘಟನೆ ನಡೆದಿದ್ದು, ಈ ಬಗ್ಗೆ ಮಾಹಿತಿ ತಿಳಿಸಿದ ನಂತರ ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿ ತ್ವರಿತವಾಗಿ ಪ್ರತಿಕ್ರಿಯಿಸಿ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಡಿಎಫ್ಎಸ್ ಅಧಿಕಾರಿಗಳು ಬೆಂಕಿಯನ್ನು ನಂದಿಸಿ, ಸುಟ್ಟ ವಾಹನವನ್ನು ಪರಿಶೀಲಿಸಿದಾಗ, ಕಾರಿನೊಳಗೆ ಸುಟ್ಟ ದೇಹವೊಂದು ಕಂಡುಬಂದಿದೆ. ಕಾರಿನ ಗುರುತು ಮತ್ತು ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದನ್ನು ತಿಳಿದುಕೊಳ್ಳಲು ಪ್ರಸ್ತುತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.