ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಫಾರೆಸ್ಟ್‌ ಆಫೀಸರ್‌ಗಳನ್ನೇ ಅಟ್ಟಾಡಿಸಿದ ಕಾಡಾನೆ; ಅಷ್ಟಕ್ಕೂ ಆಗಿದ್ದೇನು? ವಿಡಿಯೊ ಇದೆ

ಕಾಡಾನೆಯೊಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬೆನ್ನಟ್ಟಿದ ಘಟನೆ ಹಾಸನದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

ಕೃಷಿ ಭೂಮಿಗೆ ನುಗ್ಗಿದ ಆನೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಡಿದ್ದೇನು?

Profile pavithra Mar 20, 2025 11:40 AM

ಹಾಸನ: ಕಾಡಾನೆಯ ದಾಳಿಯ ಬಗ್ಗೆ ಸಾಕಷ್ಟು ಪ್ರಕರಣಗಳು ಈ ಹಿಂದೆ ನಡೆದಿತ್ತು. ಇತ್ತೀಚೆಗೆ ದಾರಿ ತಪ್ಪಿ ಕೃಷಿ ಭೂಮಿಗೆ ನುಗ್ಗಿದ ಕಾಡಾನೆಯೊಂದು(Elephant Attack) ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬೆನ್ನಟ್ಟಿದ ಘಟನೆ ಹಾಸನದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆನೆ ತನ್ನ ಕಡೆಗೆ ಓಡಿ ಬರುತ್ತಿದ್ದಂತೆ ಕ್ಯಾಮೆರಾಮನ್ ಧೈರ್ಯದಿಂದ ನಿಂತು ತನ್ನ ಪ್ರಾಣವನ್ನು ಲೆಕ್ಕಿಸದೆ ಘಟನೆಯ ವಿಡಿಯೊ ಮಾಡಿದ್ದಾನೆ. ಆದರೆ ಈ ಘಟನೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರಂತೆ.

ಅಧಿಕಾರಿಗಳ ಮೇಲೆ ಆನೆ ಕೋಪಗೊಂಡಿದ್ದೇಕೆ?

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆಯೊಂದು ದಾರಿ ತಪ್ಪಿ ಕೃಷಿ ಭೂಮಿಗೆ ನುಗ್ಗಿದೆ. ಹೀಗಾಗಿ ಈ ಬಗ್ಗೆ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಇಬ್ಬರು ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯನ್ನು ಮರಳಿ ಕಾಡಿಗೆ ಕರೆದೊಯ್ಯಲು ಸ್ಥಳಕ್ಕೆ ಬಂದಾಗ ಆನೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಂಡು ಕೆರಳಿ ಕೆಂಡಮಂಡಲವಾಗಿದೆ. ನಂತರ ಅದು ಅಲ್ಲಿಂದ ಹೊರಡುವ ಬದಲು, ಕೋಪಗೊಂಡು ಅಧಿಕಾರಿಗಳನ್ನು ಬೆನ್ನಟ್ಟಲು ಶುರುಮಾಡಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

ಕಾಡಾನೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಓಡಿಸಿಕೊಂಡು ಹೋಗುತ್ತಿರುವ ವಿಡಿಯೊ ಇಲ್ಲಿದೆ ನೋಡಿ...



ವೈರಲ್ ಆಗಿರುವ ವಿಡಿಯೊದಲ್ಲಿ ಪ್ರಶಾಂತ್ ಮತ್ತು ಸುನಿಲ್ ಎಂದು ಗುರುತಿಸಲ್ಪಟ್ಟ ಇಬ್ಬರು ಅಧಿಕಾರಿಗಳನ್ನು ಆನೆ ಬೆನ್ನಟ್ಟಿದ್ದು, ಅವರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ದಿಕ್ಕೆಟ್ಟು ಓಡುವುದು ಸೆರೆಯಾಗಿದೆ. ಅವರು ತಪ್ಪಿಸಿಕೊಳ್ಳಲು ಮುಂದೆ ಓಡುವಾಗ ಆನೆ ಅವರನ್ನು ಹಿಂಬಾಲಿಸಿಕೊಂಡು ಹೋಗಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಧಿಕಾರಿಗಳು ಆನೆಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ನೆಟ್ಟಿಗರು ನಿರಾಳರಾಗಿದ್ದಾರೆ. ಆದರೆ ಇಂತಹ ಭಯಾನಕ ಕ್ಷಣವನ್ನು ಸೆರೆಹಿಡಿದಿದ್ದಕ್ಕಾಗಿ ನೆಟ್ಟಿಗರು ಕ್ಯಾಮೆರಾಮನ್ ಅನ್ನು ಹೊಗಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ಕ್ಯಾಮೆರಾಮನ್ ಯಾವಾಗಲೂ ಸುರಕ್ಷಿತವಾಗಿರುತ್ತಾನೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Elephant Attack: ಕೇರಳದಲ್ಲಿ ಉತ್ಸವದ ವೇಳೆ ಕೆರಳಿದ ಆನೆಗಳು; ಕಾಲ್ತುಳಿತದಲ್ಲಿ ಮೂವರು ಸಾವು

ಆನೆಗಳು ಮಾನವನ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಆನೆ ದಾಳಿ ಮಾಡಿದ ಹಲವು ಘಟನೆಗಳು ವರದಿಯಾಗಿದ್ದವು. ಈ ಹಿಂದಿನ ಘಟನೆಯೊಂದರಲ್ಲಿ , ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಕೃಷಿ ಭೂಮಿಗೆ ಬಂದ ಆನೆಯನ್ನು ಜನರು ಜೆಸಿಬಿ ಯಂತ್ರವನ್ನು ಬಳಸಿ ಹೊಡೆದೊಡಿಸಲು ಪ್ರಯತ್ನಿಸಿದ ಕಾರಣ ಕೋಪಗೊಂಡ ಆನೆ ನಂತರ ಜೆಸಿಬಿ ಯಂತ್ರದ ಮೇಲೆ ದಾಳಿ ಮಾಡಿತು. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಆನೆ ತನ್ನ ಸೊಂಡಿಲಿನಿಂದ ಜೆಸಿಬಿ ಯಂತ್ರವನ್ನು ಎತ್ತುವುದನ್ನು ಸೆರೆಯಾಗಿತ್ತು. ವಿಡಿಯೊ ನೋಡಿ ಅನೇಕರು ಬೆಚ್ಚಿಬಿದ್ದಿದ್ದಾರೆ.