Viral Video: ಟಿವಿ ಲೈವ್‌ನಲ್ಲೇ ಕುಸಿದು ಬಿದ್ದ ಟ್ರಂಪ್ ಸರ್ಕಾರದ ಮಾಜಿ ಅಧಿಕಾರಿ; ಅಷ್ಟಕ್ಕೂ ಆಗಿದ್ದೇನು?
ಟಿವಿ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದ ಮಾಜಿ ಅಧಿಕಾರಿಯೊಬ್ಬರು ಮೂರ್ಛೆ ತಪ್ಪಿ ಬಿದ್ದ ವಿಡಿಯೊವೊಂದು ಸೆರೆಹಿಡಿಯಲಾಗಿದೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ನೆಟ್ಟಿಗರು ಟಿವಿ ನಿರೂಪಕನ ವಿರುದ್ಧ ಕಿಡಿಕಾರಿದ್ದಾರೆ.


ವಾಷಿಂಗ್ಟನ್: ಟಿವಿ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಮಾಜಿ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧ ಟೀಕೆಗಳು ಬಂದಾಗ ಡೊನಾಲ್ಡ್ ಟ್ರಂಪ್ ಆಡಳಿತದ ಮಾಜಿ ಅಧಿಕಾರಿ ಕ್ಯಾಮ್ರಿನ್ ಕಿನ್ಸೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ವಿರುದ್ಧ ಮಾತನಾಡಿದ ಕ್ಯಾಮ್ರಿನ್ ಕಿನ್ಸೆ, “ಅವರು ಪ್ರಚಾರ ಮತ್ತು ಅಧ್ಯಕ್ಷತೆಯನ್ನು ನಿರ್ವಹಿಸಲು ವಿಫಲವಾಗಿದ್ದಾರೆ. ಆದ್ದರಿಂದ ಅವರು ಇತಿಹಾಸವನ್ನು ಪುನಃ ಬರೆಯಬೇಕಾಗಿದೆ" ಎಂದು ಹೇಳಿ ಸ್ಟುಡಿಯೋದಲ್ಲಿ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಕಿನ್ಸೆ ಪ್ರಜ್ಞೆ ತಪ್ಪುವಾಗ ಕಾರ್ಯಕ್ರಮದ ನಿರೂಪಕ ಜೋನಾಥನ್ ಸಹಾಯ ಮಾಡಲು ಅಲ್ಲಿದ್ದ ಸಿಬ್ಬಂದಿಗಳಿಗೆ ಹೇಳಿದ್ದಾರಂತೆ.
X ನಲ್ಲಿ ಪೋಸ್ಟ್ ಮಾಡಿದ ಕಿನ್ಸೆ, ಫಾಕ್ಸ್ ನ್ಯೂಸ್ ತಂಡ ಮತ್ತು ತುರ್ತು ವೈದ್ಯಕೀಯ ತಂಡಗಳಿಗೆ (EMTs) ಇಷ್ಟು ವೇಗವಾಗಿ ಮತ್ತು ಕಾಳಜಿಯಿಂದ ಪ್ರತಿಕ್ರಿಯಿಸಿದವರಿಗೆ ಧನ್ಯವಾದಗಳನ್ನು ಸಲ್ಲಿಸಿ, ಈಗ ಚೆನ್ನಾಗಿದ್ದೇನೆ ಮತ್ತು ವಿಶ್ರಾಂತಿಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
“ಇದು ಅನಿರೀಕ್ಷಿತ ಮತ್ತು ಭಯಾನಕ ಕ್ಷಣವಾಗಿತ್ತು, ಆದರೆ ಅವರ ವೃತ್ತಿಪರತೆ ಮತ್ತು ದಯೆಗೆ ಧನ್ಯವಾದಗಳು, ನಾನು ಚೆನ್ನಾಗಿದ್ದೇನೆ. ಕರೆ ಮಾಡಿದ, ಸಂದೇಶ ಕಳುಹಿಸಿದ, ಪ್ರಾರ್ಥಿಸಿದ ಅಥವಾ ಚೆಕ್ ಇನ್ ಮಾಡಿದ ಎಲ್ಲರಿಗೂ, ನನ್ನ ಧನ್ಯವಾದಗಳು. ನಿಮ್ಮ ಬೆಂಬಲವು ಜಗತ್ತನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಿದೆ. ನಾನು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದೇನೆ. ಕಮಲಾ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಸಾಕಷ್ಟು ಸಮಯ ಇದೆ ಎಂದು ನಾನು ಭಾವಿಸುತ್ತೇನೆ!" ಎಂದು X ನಲ್ಲಿ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸತ್ತವನು ಮತ್ತೆ ಎದ್ದು ಬಂದು ಕೋರ್ಟ್‌ನಲ್ಲಿ ಹೇಳಿಕೆ ಕೊಟ್ಟ! ಏನಿದು ಘಟನೆ? ವಿಡಿಯೊ ವೈರಲ್
ನಿರೂಪಕನಿಗೆ ಟೀಕೆ
ಕಿನ್ಸೆ ಮೂರ್ಛೆ ಹೋದ ನಂತರವೂ ನಿರೂಪಕ ಹಂಟ್ ತನ್ನ ವರದಿಯನ್ನು ಮುಂದುವರಿಸಿದ್ದಕ್ಕಾಗಿ ಕೆಲವು ನೆಟಿಜನ್‌ಗಳು ಅವರನ್ನು ಟೀಕಿಸಿದ್ದಾರೆ. ಅಮೆರಿಕ ತನ್ನ ಸಹಾನುಭೂತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದು ನೆಟ್ಟಿಗನೊಬ್ಬ ಹೇಳಿದ್ದೇನೆ.ಇನ್ನು ಕೆಲವು ನೆಟ್ಟಿಗರು ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.