ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮತ್ತೊಂದು ಚಿತ್ರ-ವಿಚಿತ್ರ ರೆಸಿಪಿ! ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ವಿಡಿಯೊ

ಸಿಂಗಾಪುರದ ಇನ್‌ಸ್ಟಾಗ್ರಾಮರ್‌ ಕ್ಯಾಲ್ವಿನ್ ಲೀ ವೇಫರ್‌ ಅನ್ನು ಚಾಕೋಲೇಟ್ ಮತ್ತು ಹಾಲಿನಲ್ಲಿ ಬೇಯಿಸಿ ತಿಂದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊ ಈಗಾಗಲೇ 29,000 ಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ.

ಮತ್ತೊಂದು ಚಿತ್ರ-ವಿಚಿತ್ರ ರೆಸಿಪಿ ಫುಲ್‌ ವೈರಲ್‌! ವಿಡಿಯೊ ನೋಡಿ

Profile pavithra May 13, 2025 2:55 PM

ಬಿಸಿ ಟೀಗೆ ಮ್ಯಾಗಿ ಹಾಕುವುದು, ಆಮ್ಲೆಟ್‌ಗೆ ಬಿಸ್ಕೆಟ್‌ ಸೇರಿಸುವುದು ಹೀಗೆ ವಿಚಿತ್ರವಾದ ಪಾಕಪದ್ಧತಿಯ ರೀಲ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಿರುತ್ತದೆ.ಇದೀಗ ಸಿಂಗಾಪುರದ ಇನ್‌ಸ್ಟಾಗ್ರಾಮರ್‌ ಕ್ಯಾಲ್ವಿನ್ ಲೀ ವೇಫರ್‌ ಅನ್ನು ಚಾಕೋಲೇಟ್ ಮತ್ತು ಹಾಲಿನಲ್ಲಿ ಬೇಯಿಸಿ ಸೇವಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ
ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ರೀತಿಯ ವಿಚಿತ್ರವಾದ ರೀತಿಯಲ್ಲಿ ಅಡುಗೆಗಳನ್ನು ತಯಾರಿಸುವುದರಲ್ಲಿ ಕ್ಯಾಲ್ವಿನ್ ಲೀ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್! ಈ ಹಿಂದೆ ಆತ ಕಾಫಿಗೆ ಕಾರ್ನ್‌, ಚೀಸ್‍ ಮಿಕ್ಸ್ ಮಾಡಿದಂತಹ ರೀಲ್ಸ್‌ ವೈರಲ್ ಆಗಿ ನೆಟ್ಟಿಗರ ಗಮನಸೆಳೆದಿತ್ತು.

ವೈರಲ್ ಆದ ವಿಡಿಯೊದಲ್ಲಿ ಲೀ ಒಂದು ಪ್ಯಾನ್‌ನಲ್ಲಿ ಕುದಿಯುತ್ತಿದ್ದ ಸಕ್ಕರೆ ನೀರಿಗೆ ವೇಫರ್‌ಗಳನ್ನು ಹಾಕಿ, ಅದಕ್ಕೆ ಕಂಡೆನ್ಸಡ್‌ ಮೀಲ್ಕ್‌ ಮತ್ತು ಚಾಕೊಲೇಟ್ ಸೀರಪ್‌ ಅನ್ನು ಸೇರಿಸಿದ್ದಾನೆ. ನಂತರ ನಿಧಾನವಾಗಿ ಮಿಕ್ಸ್‌ ಮಾಡಿ ಅದನ್ನು ಚೆನ್ನಾಗಿ ಕುದಿಸಿದ್ದಾನೆ. ಇದನ್ನು "ಬಾಯಲ್ಡ್‌ ಲೋಕರ್ ವೇಫರ್ಸ್" ಎಂದು ಹೆಸರಿಟ್ಟಿದಾನೆ. ಹಾಗೇ ಇದರ ರುಚಿ ಕೂಡ ಅದ್ಭುತವಾಗಿದೆ ಎಂದು ಕರೆದಿದ್ದಾನೆ.

ಈ ವಿಚಿತ್ರ ಅಡುಗೆಯ ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ಈಗಾಗಲೇ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ 29,000 ಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಸಿಂಗಾಪುರದ ಖ್ಯಾತ ಇನ್‌ಸ್ಟಾಗ್ರಾಮರ್‌ ಕ್ಯಾಲ್ವಿನ್ ಲೀ ಈ ರೀತಿಯ ವಿಚಿತ್ರವಾದ ಪಾಕವಿಧಾನವನ್ನು ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಈತನ ಕಾಫಿ ತಯಾರಿಕೆಯ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಕಾಫಿಗೆ ಸಕ್ಕರೆ, ಹಾಲು ಸೇರಿಸುವ ಬದಲು ಚೀಸ್ ಮಿಕ್ಸ್ ಮಾಡಿದ್ದನು.

ವೈರಲ್ ಆದ ವಿಡಿಯೊದಲ್ಲಿ ಆತ ಬಿಸಿಯಾದ ಕಾಫಿಗೆ ಒಂದು ಪೀಸ್ ಚೀಸ್ ಅನ್ನು ಸೇರಿಸಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸವಿದಿದ್ದನು. ಹಾಗೇ ಈ ಕಾಫಿ ತುಂಬಾ ಟೇಸ್ಟಿ ಆಗಿದೆ ಎಂದು ಕೂಡ ಹೇಳಿದ್ದನು. ಈ ವಿಡಿಯೊ ವೈರಲ್ ಆಗಿ 25,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿತ್ತು. ನೆಟ್ಟಿಗರು ಕೂಡ ಈ ಚೀಸ್‌ ಕಾಫಿಯನ್ನು "ಯಮ್ಮಿ" ಎಂದು ಕರೆದಿದ್ದರು.

ಈ ಸುದ್ದಿಯನ್ನೂ ಓದಿ:Viral Video: ಕಾರಿನ ಮೇಲೆ ನಿಂತು ಸ್ಟಂಟ್ ಮಾಡಿದ ವಧು-ವರ; ಮುಂದೇನಾಯ್ತು? ವಿಡಿಯೊ ನೋಡಿ!

ಇಷ್ಟೇ ಅಲ್ಲದೇ ಈ ಹಿಂದೆ ಆತ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಜಾಮೂನಿನ ಪರೋಟಾ, ಓರಿಯೋ ವೈನ್ , ಪಾನ್ ಆಮ್ಲೆಟ್ ಇತ್ಯಾದಿ ಹಲವು ಬಗೆಯ ಆಹಾರ ತಯಾರಿಕೆಯ ವಿಡಿಯೊವನ್ನು ಹಂಚಿಕೊಂಡಿದ್ದ.