ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇದು ಅಂತಿಂಥಾ ಐಸ್‌ಕ್ರೀಂ ಅಲ್ಲ... ಚಿನ್ನ ಲೇಪಿತ 'ಅಂಬಾನಿ ಐಸ್ ಕ್ರೀಂ! ವಿಡಿಯೊ ಇದೆ

ಹೈದರಾಬಾದ್‍ನಲ್ಲಿರುವ 'ಹ್ಯೂಬರ್ ಅಂಡ್ ಹಾಲಿ' ಎಂಬ ಹೆಸರಿನ ಐಸ್‍ ಕ್ರೀಂ ಪಾರ್ಲರ್‌ನಲ್ಲಿ ಚಿನ್ನದ ಲೇಪಿತ ಐಸ್ ಕ್ರೀಮ್ ಅನ್ನು ಮಾರಾಟ ಮಾಡಲಾಗಿದ್ದು, ಇದರ ಬೆಲೆ ರೂ. 1,200 ಆಗಿದೆ. ಈ ಐಸ್ ಕ್ರೀಂನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ಇದನ್ನು "ಅಂಬಾನಿ ಐಸ್ ಕ್ರೀಮ್" ಎಂದು ಕರೆದಿದ್ದಾರೆ.

ಚಿನ್ನ ಲೇಪಿತ 'ಅಂಬಾನಿ ಐಸ್ ಕ್ರೀಂʼ ರುಚಿ ನೋಡಿದ್ದಿರಾ?

Profile pavithra Apr 8, 2025 7:10 PM

ನವದೆಹಲಿ: ಬೇಸಿಗೆಗಾಲದಲ್ಲಿ ತಂಪಾದ ಐಸ್ ಕ್ರೀಂ ತಿಂದರೆ ಮೈ ಮನವೆಲ್ಲಾ ಹಾಯ್‌ ಅನಿಸುತ್ತದೆ. ಇದು ದೇಹವನ್ನು ತಂಪಾಗಿಸುತ್ತದೆ. ಬೇಸಿಗೆಯಲ್ಲಿ ಗ್ರಾಹಕರನ್ನು ಸೆಳೆಯಲು ಐಸ್‍ ಕ್ರೀಂ ಪಾರ್ಲರ್‌ಗಳಲ್ಲಿ ಹಲವು ವಿಭಿನ್ನ ರೀತಿಯ ಐಸ್ ಕ್ರೀಂಗಳು ಸಿಗುತ್ತವೆ. ಆದರೆ ಹೈದರಾಬಾದ್‍ನ ಐಸ್‍ ಕ್ರೀಂ ಪಾರ್ಲರ್‌ವೊಂದರಲ್ಲಿ ಚಿನ್ನದಿಂದ ಲೇಪಿಸಿದ ವೆನಿಲ್ಲಾ ಫ್ಲೆವರ್ ಐಸ್ ಕ್ರೀಮ್ ಸಿಗುತ್ತದೆಯಂತೆ. ಹೈದರಾಬಾದ್‍ನಲ್ಲಿರುವ 'ಹ್ಯೂಬರ್ ಅಂಡ್ ಹಾಲಿ' ಎಂಬ ಹೆಸರಿನ ಐಸ್‍ ಕ್ರೀಂ ಪಾರ್ಲರ್‍ನಲ್ಲಿ ಚಿನ್ನದ ಲೇಪಿತ ಐಸ್ ಕ್ರೀಮ್ ಅನ್ನು ನೀಡಲಾಗುತ್ತಿದ್ದು, ಈ ಐಸ್ ಕ್ರೀಂನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಬಿರುಗಾಳಿ ಎಬ್ಬಿಸಿದೆ. ಆದರೆ ಈ ಐಸ್ ಕ್ರೀಂ ಬೆಲೆ ರೂ. 1,200 ಆಗಿದ್ದು, ನೆಟ್ಟಿಗರು ಇದನ್ನು "ಅಂಬಾನಿ ಐಸ್ ಕ್ರೀಮ್" ಎಂದು ಕರೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಫುಡ್ ವ್ಲಾಗರ್ ಒಬ್ಬ ಹಂಚಿಕೊಂಡ ಈ ವಿಡಿಯೊದಲ್ಲಿನ ಈ ಐಸ್ ಕ್ರೀಂ ಅನ್ನು ಭಾರತದ "ಅತ್ಯಂತ ದುಬಾರಿ ಐಸ್ ಕ್ರೀಮ್" ಎಂದಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಐಸ್‍ ಕ್ರೀಂ ಪಾರ್ಲರ್‌ನ ಸಿಬ್ಬಂದಿಯೊಬ್ಬ ಐಸ್ ಕ್ರೀಮ್ ಕೋನ್ ಅನ್ನು ಕೈಯಲ್ಲಿ ಹಿಡಿದುಕೊಂಡು ಚಾಕೊಲೇಟ್ ತುಂಡುಗಳು, ಲಿಕ್ವಿಡ್ ಚಾಕೊಲೇಟ್, ಬಾದಾಮಿ ಮತ್ತು ಚಾಕೊಲೇಟ್ ಐಸ್ ಕ್ರೀಮ್ ಸ್ಕೂಪ್‌ಗಳನ್ನು ತುಂಬಿಸಿದ್ದಾನೆ. ನಂತರ ಅವನು ಅದನ್ನು ಕ್ರೀಂನ ದಪ್ಪ ಪದರದಿಂದ ಲೇಪಿಸಿದ್ದಾನೆ. ಕ್ರೀಂ ಪದರನ್ನು ಹಚ್ಚಿದ ಬಳಿಕ ಐಸ್‍ ಕ್ರೀಂಗೆ ಆಕರ್ಷಕ ನೋಟವನ್ನು ನೀಡಲು ಚಿನ್ನದ ಲೇಪನದಿಂದ ಅಲಂಕರಿಸಿದ್ದಾನೆ. ನಂತರ ಅದಕ್ಕೆ ಇತರ ರುಚಿಕರವಾದ ಟಾಪಿಂಗ್‍ಗಳನ್ನು ಹಾಕಿದ್ದಾನೆ. ಈ ವಿಶೇಷವಾದ ಐಸ್ ಕ್ರೀಂ ಅನ್ನು ಚಿನ್ನದ ಟ್ರೇಯಲ್ಲಿ ಬಡಿಸಲಾಯಿತು, ಇದು ಅದರ ಲುಕ್ ಅನ್ನು ಇನ್ನಷ್ಟು ಹೆಚ್ಚಿಸಿದೆಯಂತೆ.

ಅಂಬಾನಿ ಐಸ್‌ಕ್ರೀಂ ಮಾಡುವ ವಿಧಾನ ಇಲ್ಲಿದೆ ನೋಡಿ...

ಮಾರ್ಚ್ 6 ರಂದು ಅಪ್ಲೋಡ್ ಮಾಡಲಾದ ಈ ಪೋಸ್ಟ್‌ಗೆ 10 ಮಿಲಿಯನ್ ವ್ಯೂವ್ಸ್, ಮೂರು ಲಕ್ಷ ಲೈಕ್‍ಗಳು ಮತ್ತು ನೂರಾರು ಕಾಮೆಂಟ್‍ಗಳು ಬಂದಿವೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಇದು ಭಾರತೀಯ ಬಿಲಿಯನೇರ್ ಮತ್ತು ಉದ್ಯಮಿಗಳು ಸುಲಭವಾಗಿ ಖರೀದಿಸಬಹುದಾದ ಮತ್ತು ಆನಂದಿಸುವ ಐಸ್ ಕ್ರೀಮ್ ಎಂದು ಬಣ್ಣಿಸಿದ್ದಾರೆ. ಹಾಗೂ ಅವರು ಅದನ್ನು "ಅಂಬಾನಿ ಐಸ್ ಕ್ರೀಮ್" ಎಂದು ಕರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಲೆಹೆಂಗಾ ವಿಚಾರಕ್ಕೆ ಕಸ್ಟಮ್ಸ್ ಅಧಿಕಾರಿಗಳ ಜೊತೆ ಮಹಿಳೆಯರ ಬಿಗ್‌ ಫೈಟ್‌; ಶಾಕಿಂಗ್‌ ವಿಡಿಯೊ ವೈರಲ್

ಹೈದರಾಬಾದ್‍ನ 'ಹ್ಯೂಬರ್ ಅಂಡ್ ಹಾಲಿ' ಎಂಬ ಐಸ್‍ ಕ್ರೀಂ ಪಾರ್ಲರ್‌ ಇದೇ ರೀತಿಯ ವಿಭಿನ್ನ ಐಸ್ ಕ್ರೀಂ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ. ಈ ಹಿಂದೆ ಈ ಐಸ್ ಕ್ರೀಮ್ ಪಾರ್ಲರ್‌ನಲ್ಲಿ 24 ಕ್ಯಾರೆಟ್ ಗೋಲ್ಡ್ ಫಾಯಿಲ್ ಐಸ್ ಕ್ರೀಮ್ ಮಾರಾಟ ಮಾಡಲಾಗಿತ್ತು. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಚಿನ್ನದ ಲೇಪಿತ ಐಸ್ ಕ್ರೀಮ್ ತಯಾರಿಸುವುದು ರೆಕಾರ್ಡ್ ಆಗಿದೆ. ಈ ಐಸ್ ಕ್ರೀಂ ನಿಜವಾದ 24 ಕ್ಯಾರೆಟ್ ಗೋಲ್ಡ್ ಫಾಯಿಲ್ ಅನ್ನು ಹೊಂದಿತ್ತು.