ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಲೆಹೆಂಗಾ ವಿಚಾರಕ್ಕೆ ಕಸ್ಟಮ್ಸ್ ಅಧಿಕಾರಿಗಳ ಜೊತೆ ಮಹಿಳೆಯರ ಬಿಗ್‌ ಫೈಟ್‌; ಶಾಕಿಂಗ್‌ ವಿಡಿಯೊ ವೈರಲ್

ದುಬಾರಿ ಲೆಹೆಂಗಾಗಳು ಮತ್ತು ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೊಂಡ ಬ್ಯಾಗ್‍ ತಪಾಸಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಬುಧಾಬಿಯಿಂದ ಆಗಮಿಸಿದ ಇಬ್ಬರು ಮಹಿಳೆಯರು ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಸಿಬ್ಬಂದಿಗಳ ಜೊತೆ ಜಗಳವಾಡಿದ್ದಾರೆ. ಅದರ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಲೆಹೆಂಗಾ ವಿಚಾರಕ್ಕೆ ಏರ್‌ಫೋರ್ಟ್‌ನಲ್ಲಿ ನಡೆಯಿತು ಮಾರಾಮಾರಿ!

Profile pavithra Apr 8, 2025 3:22 PM

ಲಾಹೋರ್: ಅಬುಧಾಬಿಯಿಂದ ಆಗಮಿಸಿದ ಇಬ್ಬರು ಮಹಿಳೆಯರು ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ವರದಿಯಾಗಿದೆ. ದುಬಾರಿ ಲೆಹೆಂಗಾಗಳು ಮತ್ತು ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೊಂಡ ಅವರ ಬ್ಯಾಗ್‍ ತಪಾಸಣೆಯ ವೇಳೆ ಈ ಗಲಾಟೆ ಭುಗಿಲೆದ್ದಿದೆ ಎಂದು ಹೇಳಲಾಗುತ್ತಿದೆ. ವರದಿ ಪ್ರಕಾರ, ಈ ಜಗಳ ತಾರಕಕ್ಕೇರಿದ್ದು ಹೊಡೆದಾಟಕ್ಕೆ ತಿರುಗಿದೆಯಂತೆ. ಇದರ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ವರದಿಯ ಪ್ರಕಾರ, ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯರ ಬ್ಯಾಗ್‍ಗಳನ್ನು ತೆರವುಗೊಳಿಸಲು ವಿಳಂಬ ಮಾಡಿದ್ದಾರೆ. ಇದು ಆ ಮಹಿಳೆಯರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ತಮ್ಮ ಬ್ಯಾಗ್‍ಗಳನ್ನು ತೆರವುಗೊಳಿಸಲು ಅಧಿಕಾರಿಗಳು ವಿನಾಃಕಾರಣ ತನಿಖೆಯ ನೆಪ ಹೇಳಿ ಅನಗತ್ಯವಾಗಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿ ಮಹಿಳೆಯರು ಪ್ರತಿಭಟಿಸಲು ಶುರುಮಾಡಿದಾಗ ಅಲ್ಲಿ ವಾಗ್ವಾದ ಭುಗಿಲೆದ್ದಿದೆ. ಕೊನೆಗೆ ಅದು ಹೊಡೆದಾಟಕ್ಕೆ ತಿರುಗಿದೆಯಂತೆ.

ವಿಮಾನ ನಿಲ್ದಾಣದಲ್ಲಿ ನಡೆದ ಹೊಡೆದಾಟದ ದೃಶ್ಯ ಇಲ್ಲಿದೆ ನೋಡಿ...



ವೈರಲ್ ವಿಡಿಯೊದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ಪ್ರಯಾಣಿಕರು ಪರಸ್ಪರ ಹೊಡೆದಾಡಿಕೊಂಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಮಹಿಳಾ ಕಸ್ಟಮ್ಸ್ ಅಧಿಕಾರಿಯೊಬ್ಬರು ಮಹಿಳಾ ಪ್ರಯಾಣಿಕರಲ್ಲಿ ಒಬ್ಬಳ ಕೂದಲನ್ನು ಹಿಡಿದು ಟರ್ಮಿನಲ್ ಮೂಲಕ ಎಳೆದುಕೊಂಡು ಹೋಗಿದ್ದಾರಂತೆ. ವರದಿಯ ಪ್ರಕಾರ, ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯರಲ್ಲಿ ಒಬ್ಬಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಷಯದ ಬಗ್ಗೆ ಔಪಚಾರಿಕ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಪ್ರಸ್ತುತ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆಯಂತೆ.

ಈ ಘಟನೆ ನಡೆಯುವುದಕ್ಕೂ ಮುನ್ನ ಇಂತಹ ಮತ್ತೊಂದು ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಕ್ವೆಟ್ಟಾ ಮಾಜಿ ಆಯುಕ್ತ ಇಫ್ತಿಕಾರ್ ಜೋಗೆಜೈ ಮತ್ತು ಅವರ ಮಗಳು ವಿಮಾನಯಾನ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕ್ವೆಟ್ಟಾ-ಇಸ್ಲಾಮಾಬಾದ್ ವಿಮಾನದಿಂದ ಇಳಿಸಲಾಗಿತ್ತು.

ವಿಮಾನಯಾನ ಮೂಲಗಳ ಪ್ರಕಾರ, ಚೆಕ್-ಇನ್ ಸಮಯದಲ್ಲಿ ಅವರ ನಡುವೆ ಜಗಳ ಶುರುವಾಗಿದೆ. ವಿಮಾನದ ಪರಿಚಾರಕರೊಬ್ಬರು ತಮ್ಮ ಸೀಟ್ ಬೆಲ್ಟ್‌ಗಳನ್ನು ಬಿಗಿಗೊಳಿಸುವ ಮೊದಲು ಊಟದ ಸೇವೆ ಶುರುವಾಗುವರೆಗೆ ಕಾಯುವಂತೆ ವಿನಂತಿಸಿದಾಗ ಪರಿಸ್ಥಿತಿ ಹದಗೆಟ್ಟಿತ್ತು. ಅಧಿಕಾರಿಯ ಮಗಳು ವಿಮಾನ ಪರಿಚಾರಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾಳೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:Viral News: ರೈಲಿನಿಂದ ನೀರಿನ ಬಾಟಲಿ ಎಸೆದ ಪ್ರಯಾಣಿಕ; ಪುಟ್ಟ ಬಾಲಕನ ಪ್ರಾಣಕ್ಕೆ ಸಂಚಕಾರ- ಅಷ್ಟಕ್ಕೂ ನಡೆದಿದ್ದೇನು?

ಪೈಲಟ್ ತಕ್ಷಣ ವಿಮಾನವನ್ನು ರನ್‌ವೇಗೆ ಹಿಂದಿರುಗಿಸಿ ಕೊನೆಗೆ ವಿಮಾನ ನಿಲ್ದಾಣ ಭದ್ರತಾ ಪಡೆ (ಎಎಸ್ಎಫ್) ಗೆ ಕರೆ ಮಾಡಿದರು. ಅವರನ್ನು ವಿಮಾನದಿಂದ ಹೊರಗೆ ಕರೆದೊಯ್ಯಲು ಪ್ರಯತ್ನಿಸಿದಾಗ ಮಹಿಳೆ ಸಹಕರಿಸಲು ನಿರಾಕರಿಸಿ ಪರಿಚಾರಕನಿಗೆ ಒದ್ದಿದ್ದಾಳೆ. ಇದರಿಂದಾಗಿ ಅವರಿಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.