Viral Video: ಪಾಕ್ ಹಾರಿಸಿದ ಕ್ಷಿಪಣಿ ಹಿಡಿದುಕೊಂಡು ಈ ವ್ಯಕ್ತಿ ಮಾಡಿದ್ದೇನು? ವಿಡಿಯೊ ನೋಡಿ!
India-Pak Tensions ಲೊಕ್ ಪ್ರದೇಶದ ಬಳಿ ಬಿದ್ದ ಸ್ಫೋಟಗೊಳ್ಳದ ಕ್ಷಿಪಣಿಯ ಸಾಧನವನ್ನು ವ್ಯಕ್ತಿಯೊಬ್ಬ ಹಿಡಿದುಕೊಂಡು ಅದರೊಂದಿಗೆ ಫೋಟೋಗಳು ಮತ್ತು ವಿಡಿಯೊಗಳನ್ನು ತೆಗೆದುಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಮೂಲಕ ಇಂತಹ ವಸ್ತುಗಳನ್ನು ಮುಟ್ಟುವುದು ಅಪಾಯಕಾರಿ ಎಂದು ತಿಳಿಸಲಾಗಿದೆ.


ಚಂಡೀಗಢ: ಭಾರತ-ಪಾಕ್ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನತೆಯ ವಾತಾವರಣವಿದೆ. ಪಾಕಿಸ್ತಾನವು ಕ್ಷಿಪಣಿಗಳನ್ನು ಹಾರಿಸುತ್ತಿವೆ. ಪಂಜಾಬ್‍ನ ಅನೇಕ ಹಳ್ಳಿಗಳಲ್ಲಿ ಕ್ಷಿಪಣಿಗಳು ಬಿದ್ದ ಕಾರಣದಿಂದ ಅಲ್ಲಿನ ಜನರು ಗಾಬರಿ ಬಿದ್ದಿದ್ದಾರೆ. ಹೀಗಿರುವಾಗ ಲೊಕ್ ಪ್ರದೇಶದ ಬಳಿ ಬಿದ್ದ ಕ್ಷಿಪಣಿಯೊಂದನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ಅದರೊಂದಿಗೆ ಫೋಟೋಗಳು ಮತ್ತು ವಿಡಿಯೊಗಳನ್ನು ತೆಗೆದುಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆದರೆ ಯಾರಿಗಾದರೂ ಇಂತಹ ಸ್ಫೋಟಕ ವಸ್ತುಗಳು ಸಿಕ್ಕರೆ ಅದನ್ನು ಮುಟ್ಟದಂತೆ ಎಚ್ಚರಿಕೆ ನಿಡಲಾಗಿದೆ. ಏಕೆಂದರೆ ಅದು ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವೈರಲ್ ಆದ ವಿಡಿಯೋದಲ್ಲಿ ಯುವಕನೊಬ್ಬ ಕ್ಷಿಪಣಿಯನ್ನು ಹಿಡಿದುಕೊಂಡು ಅದನ್ನು ತಾನೇ ನಿರ್ವಹಿಸುವಂತೆ ನಟಿಸಿದ್ದಾನೆ. ಇನ್ನೊಬ್ಬ ಯುವಕ ಅದನ್ನು ವಿಡಿಯೊ ಮಾಡಿದ್ದಾನೆ. ಅಲ್ಲಿದ್ದ ಕೆಲವು ಜನರು ತಮಾಷೆ ಮಾಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
Request: Please do not touch or handle any such explosive material, as it can cause serious injury or loss of life. pic.twitter.com/bURDZaoRhm
— Gagandeep Singh (@Gagan4344) May 9, 2025
ಇಂಡಿಯಾ ಮತ್ತು ಪಾಕ್ ನಡುವೆ ನಡೆಯುತ್ತಿರುವ ಯುದ್ಧ ಹಿನ್ನಲೆಯಲ್ಲಿ, ಲೈನಿಂಗ್ ಆಫ್ ಕಂಟ್ರೋಲ್ (ಎಲ್ಒಸಿಯಲ್ಲಿ) ಪಂಜಾಬ್ ಪ್ರದೇಶದ ಸಮೀಪದಲ್ಲಿ ಒಂದು ಮಿಸೈಲ್ ಬಿಡುಗಡೆ ಮಾಡಲಾಗಿದೆ. ಪತ್ರಕರ್ತರೊಬ್ಬರು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದಯವಿಟ್ಟು ಯಾವುದೇ ಸ್ಫೋಟಕ ಸಾಮಗ್ರಿಗಳನ್ನು ಸ್ಪರ್ಶಿಸಬೇಡಿ ಇದರಿಂದ ಜೀವಕ್ಕೆ ಅಪಾಯವಾಗಬಹುದು ಎಂಬುದಾಗಿ ತಿಳಿಸಿದ್ದಾರೆ.
ಈ ನಡುವೆ ಇಸ್ಲಾಮಾಬಾದ್ ಹಾರಿಸಿದ ಎಲ್ಲಾ ಕ್ಷಿಪಣಿಗಳು ಮತ್ತು ಡ್ರೋನ್‍ಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ತಡೆದ ಒಂದು ದಿನದ ನಂತರ ಪಾಕಿಸ್ತಾನ ಸೇನೆಯು ಹಾರಿಸಿದ ಕ್ಷಿಪಣಿಯ ಅವಶೇಷಗಳು ಪಂಜಾಬ್‍ನ ಹೋಶಿಯಾರ್ಪುರದಲ್ಲಿ ಶುಕ್ರವಾರ(ಮೇ 9) ಪತ್ತೆಯಾಗಿವೆ ಎಂದು ವರದಿಯಾಗಿದೆ.
ಅಲ್ಲದೇ ಕಳೆದ ತಿಂಗಳು ಭಾರತ ನಿಯಂತ್ರಿತ ಕಾಶ್ಮೀರದಲ್ಲಿ ಭಾರತೀಯ ಪ್ರವಾಸಿಗರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಕ್ಷಿಪಣಿ ದಾಳಿಯಿಂದ ಅನೇಕರು ಸಾವನ್ನಪ್ಪಿದ್ದು, ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಾಕಿಸ್ತಾನ ಹೇಳಿದೆ. ಪಾಕಿಸ್ತಾನವು ಈ ದಾಳಿಯನ್ನು ಯುದ್ಧದ ಕೃತ್ಯ ಎಂದು ಕರೆದಿದೆ ಮತ್ತು ಹಲವಾರು ಭಾರತೀಯ ಫೈಟರ್ ಜೆಟ್‍ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ.
ಈ ಸುದ್ದಿಯನ್ನೂ ಓದಿ:Viral Video: ಹಣೆ ತುಂಬಾ ಸಿಂದೂರ ಹಚ್ಚಿಕೊಂಡ ಬಿಹಾರಿ ವಧು; ವಿಡಿಯೊ ನೋಡಿ ನೆಟ್ಟಿಗರು ಹೇಳಿದ್ದೇನು?
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ದೇಶದ ಪಂಜಾಬ್ ಪ್ರಾಂತ್ಯದಲ್ಲಿ ಕ್ಷಿಪಣಿಗಳು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 31 ಜನರನ್ನು ಕೊಂದಿವೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಿರುವ ಕನಿಷ್ಠ ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ. ಎರಡು ಮಸೀದಿಗಳ ಮೇಲೆ ದಾಳಿ ನಡೆದಿದೆ.