ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹೆರಿಗೆ ನೋವಿನಿಂದ ಮಹಿಳೆ ಒದ್ದಾಡ್ತಿದ್ರೆ ಇತ್ತ ಡಾಕ್ಟರ್‌ ಮೇಲೆಯೇ ಹಲ್ಲೆ ಮಾಡಿದ್ರು! ಈ ವಿಡಿಯೊ ನೋಡಿ

Women Residents Abuse: ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹೆರಿಗೆ ಕೊಠಡಿಯಲ್ಲೇ ಇಬ್ಬರು ಯುವತಿಯರು ಹಲ್ಲೆ ಮಾಡಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

ಹೆರಿಗೆ ವಾರ್ಡ್‌ನಲ್ಲಿ ವೈದ್ಯರ ಮೇಲೆ ಹಲ್ಲೆ

-

Priyanka P Priyanka P Sep 18, 2025 2:31 PM

ಇಂದೋರ್: ಹೆರಿಗೆ ಕೊಠಡಿಯೊಳಗೆ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಯುವತಿಯರಿಬ್ಬರು ಹಲ್ಲೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶ (Madhya Pradesh) ದ ಶಹದೋಲ್ ಜಿಲ್ಲೆಯ ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ (Viral Video) ಆಗಿದೆ. ಹೆರಿಗೆ ನೋವು ಅನುಭವಿಸುತ್ತಿದ್ದ ಮಹಿಳೆಯನ್ನು ಕರೆದೊಯ್ಯುತ್ತಿರುವುದನ್ನು ಮತ್ತು ಇಬ್ಬರು ಯುವತಿಯರು ಇದ್ದಕ್ಕಿದ್ದಂತೆ ವೈದ್ಯರ ಮೇಲೆ ಎರಗಿ, ಅವರ ಕೂದಲನ್ನು ಎಳೆದಾಡುತ್ತಿರುವುದನ್ನು ಕಾಣಬಹುದು.

ಸೆಪ್ಟೆಂಬರ್ 11 ರ ರಾತ್ರಿ ಈ ಘಟನೆ ನಡೆದಿದ್ದು, ಡಾ. ಶಿವಾನಿ ಲಾರಿಯಾ ಕರ್ತವ್ಯದಲ್ಲಿದ್ದರು. ಪುರುಷ ವೈದ್ಯರೊಬ್ಬರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಯುವತಿಯರು (ಇಂಟರ್ನ್‌ಗಳು/ತರಬೇತಿ ಪಡೆಯುತ್ತಿರುವವರು) ಅವರಿಗೆ ಬೆದರಿಕೆ ಹಾಕಿದರು. ಈ ಜಗಳವು ಆಸ್ಪತ್ರೆಯ ವಾರ್ಡ್‌ನೊಳಗೆ ರೋಗಿಯ ಸುರಕ್ಷತೆ ಮತ್ತು ವೃತ್ತಿಪರತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ವರದಿಗಳ ಪ್ರಕಾರ. ರಾತ್ರಿ ಕರ್ತವ್ಯದ ನಿಯೋಜನೆಗಳ ಕುರಿತು ಇಂಟರ್ನ್‌ಗಳ ನಡುವೆ ಕೆಲ ದಿನಗಳಿಂದ ಉದ್ವಿಗ್ನತೆ ಉಂಟಾಗಿತ್ತು. ಸೆಪ್ಟೆಂಬರ್ 11 ರಂದು ರಾತ್ರಿ 9:30 ರ ಸುಮಾರಿಗೆ, ಡಾ. ಯೋಗಿತಾ ತ್ಯಾಗಿ ಮತ್ತು ಡಾ. ಶಾನು ಅಗರ್ವಾಲ್ ಅವರು ಹೆರಿಗೆ ಕೋಣೆಗೆ ನುಗ್ಗಿ ಡಾ. ಶಿವಾನಿ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಸಂತ್ರಸ್ತೆ ವೈದ್ಯಕೀಯ ಕಾಲೇಜು ಆಡಳಿತಕ್ಕೆ ಲಿಖಿತ ದೂರು ನೀಡಿ, ತಮಗೆ ಹಲ್ಲೆ ನಡೆಸಿದ ಬ್ಯಾಚ್‌ಮೇಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಿಡಿಯೊ ವೀಕ್ಷಿಸಿ:



ಈ ಘಟನೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ನಾಗೇಂದ್ರ ಸಿಂಗ್ ದೃಢಪಡಿಸಿದ್ದಾರೆ. ಮೂವರು ವೈದ್ಯರು ಒಂದೇ ಬ್ಯಾಚ್‌ನ ಎಂಬಿಬಿಎಸ್ ಇಂಟರ್ನ್‌ಗಳು. ಗುರುವಾರ ರಾತ್ರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಡಾ. ಶಿವಾನಿ ಲಾರಿಯಾ ತಮ್ಮ ಬ್ಯಾಚ್‌ಮೇಟ್‌ಗಳಾದ ಡಾ. ಶಾನು ಅಗರ್ವಾಲ್ ಮತ್ತು ಡಾ. ಯೋಗಿತಾ ತ್ಯಾಗಿ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಶುಕ್ರವಾರ ದೂರು ಸ್ವೀಕರಿಸಲಾಗಿದ್ದು, ತಕ್ಷಣವೇ ನಾಲ್ವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಜಗಳದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಜೀವಗಳನ್ನು ಉಳಿಸುವ ಜವಾಬ್ದಾರಿಯುತ ವೈದ್ಯಕೀಯ ಇಂಟರ್ನ್‌ಗಳು ಹೆರಿಗೆಯ ಸಮಯದಲ್ಲಿ ರೋಗಿಯ ಮುಂದೆ ಹೀಗೆ ಹೋರಾಡಿದ್ದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಅವರು ಅಮಾನತುಗೊಳ್ಳಲು ಅರ್ಹರು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಮಗು ಹೊರ ಜಗತ್ತಿಗೆ ಕಾಲಿಡಲು ಸಜ್ಜಾಗುತ್ತಿದ್ದರೆ, ವೈದ್ಯರು ಹೊಡೆದಾಡಿಕೊಳ್ಳುತ್ತಿದ್ದಾರೆ. ಈ ಮೂರ್ಖರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು WWE ಫೈಟ್ ಅಲ್ಲ. ಇದು ರಕ್ತಸಿಕ್ತ ಹೆರಿಗೆ ಕೊಠಡಿ ಎಂಬುದು ನೆನಪಿರಲಿ ಎಂದು ಮತ್ತೊಬ್ಬ ಬಳಕೆದಾರರು ಖಾರವಾಗಿ ಪ್ರತಿಕ್ರಿಯಿಸಿದರು. ಆರೋಪಿ ಇಂಟರ್ನ್‌ಗಳ ಪರವಾನಗಿಗಳನ್ನು ರದ್ದುಗೊಳಿಸಬೇಕೆಂದು ಕೆಲವರು ಒತ್ತಾಯಿಸಿದರು.

ಇದನ್ನೂ ಓದಿ: ವಿಕೃತಿಯ ಪರಾಕಾಷ್ಠೆ; ಬೀದಿ ನಾಯಿಯ ಕೊಂದು ಕಣ್ಣಗುಡ್ಡೆ ಕಿತ್ತು ಅದರಲ್ಲಿ ಆಟವಾಡಿದ ಪಾಪಿ