ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 52ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ; ಮಗ ನೀಡಿದ ಸರ್ಪೈಸ್ ಹೇಗಿತ್ತು ಗೊತ್ತಾ?

Man throws surprise party: ವ್ಯಕ್ತಿಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದುಕೊಂಡು ಮನೆಗೆ ವಾಪಸ್ ಆದಾಗ ಅವರ ಪುತ್ರ ಅಚ್ಚರಿಯ ಉಡುಗೊರೆ ನೀಡಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊ ಪೋಸ್ಟ್ ಮಾಡಿದಾಗಿನಿಂದ, ಇದು 3,16,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

52ನೇ ವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆಗೆ ಮಗನ ಸರ್ಪೈಸ್!

-

Priyanka P Priyanka P Sep 8, 2025 5:31 PM

ಮುಂಬೈ: ಕಲಿಕೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಇಲ್ಲೊಬ್ಬರು ಸಾಧಿಸಿ ತೋರಿಸಿದ್ದಾರೆ. ಇಲ್ಲೊಬ್ಬ ವ್ಯಕ್ತಿಗೆ ವಯಸ್ಸು 52 ಆದರೂ ಓದುವ ಹಂಬಲ. ತಮ್ಮ ಇಳಿ ವಯಸ್ಸಿನಲ್ಲಿ ಎಂಬಿಎ (MBA) ಪದವಿ ಪಡೆದುಕೊಂಡು ಮನೆಗೆ ವಾಪಸ್ ಆದಾಗ ಅವರ ಪುತ್ರ ಅಚ್ಚರಿಯ ಉಡುಗೊರೆ ನೀಡಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಈ ವಿಡಿಯೊವನ್ನು ಮೈತ್ರೇಯ ಸಾಥೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ‘ಪದವಿ ಪಡೆದಿದ್ದೇನೆ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೊ ಪೋಸ್ಟ್ ಮಾಡಿದಾಗಿನಿಂದ, ಇದು 3,16,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ವಿಡಿಯೊದಲ್ಲಿ, ಆ ವ್ಯಕ್ತಿ ತನ್ನ ಮನೆಗೆ ಪ್ರವೇಶಿಸುತ್ತಾರೆ. ಈ ವೇಳೆ ಅವರ ಮುಖವನ್ನು ಹೋಲುವ ಮುಖವಾಡಗಳನ್ನು ಧರಿಸಿದ ಸಂಬಂಧಿಕರು ಅವರನ್ನು ಸ್ವಾಗತಿಸಿದ್ದಾರೆ. ಗೋಡೆಗಳನ್ನು ವರ್ಣರಂಜಿತವಾಗಿ ಅಲಂಕರಿಸಲಾಗಿದೆ. ಕುಟುಂಬ ಮತ್ತು ಸ್ನೇಹಿತರು ಅವರನ್ನು ಹುರಿದುಂಬಿಸುತ್ತಿದ್ದಂತೆ ಮುಖದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಡಿಯೊ ವೀಕ್ಷಿಸಿ:

ಈ ಆಚರಣೆ ಎಷ್ಟು ಮನೋಹರವಾಗಿತ್ತೋ ಅಷ್ಟೇ ಹೃದಯಸ್ಪರ್ಶಿ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮದಲ್ಲಿ ಬಂದಿವೆ. ಇಂದು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಅತ್ಯಂತ ಆರೋಗ್ಯಕರ ವಿಷಯ ಇದು ಎಂದು ಒಬ್ಬ ಬಳಕೆದಾರರು ಹೇಳಿದರೆ, ಇನ್ನೊಬ್ಬರು ಅವರ ಮುಖದಲ್ಲಿರುವ ಸಂತೋಷವೇ ಎಲ್ಲವನ್ನೂ ಹೇಳುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಮಾವ-ಸೊಸೆಯ ಮುದ್ದಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಸೊಸೆ ತಾನು ಹಚ್ಚಿದ ಮೆಹೆಂದಿ ಯನ್ನು ಸಂತೋಷದಿಂದ ಪ್ರದರ್ಶಿಸುತ್ತಿರುವಾಗ, ಆಕೆಯ ಮಾವ ಅಡುಗೆಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದನ್ನು ತೋರಿಸುತ್ತದೆ. ಇಬ್ಬರ ನಡುವಿನ ಈ ಮುದ್ದಾದ ವಿನಿಮಯವು ಸಂಬಂಧಗಳು ಮತ್ತು ಜವಾಬ್ದಾರಿಗಳನ್ನು ತಿಳಿಸುತ್ತದೆ. ಇದು ನೆಟ್ಟಿಗರ ಮನಗೆದ್ದಿತ್ತು.

ವಿಡಿಯೊದಲ್ಲಿರುವ ವೃದ್ಧ ವ್ಯಕ್ತಿಯನ್ನು ಹೊಗಳುತ್ತಾ ಒಬ್ಬ ವ್ಯಕ್ತಿ, ಅವರು ತುಂಬಾ ಸಂಭಾವಿತ ವ್ಯಕ್ತಿ ಎಂದು ಬರೆದಿದ್ದರು. ಮತ್ತೊಬ್ಬರು, ನಿಮ್ಮ ಮಾವನನ್ನು ಪಡೆಯಲು ನಿಜಕ್ಕೂ ಅದೃಷ್ಟ ಮಾಡಿರುವಿರಿ. ಅವರು ನಿಮ್ಮನ್ನು ನಿಮ್ಮನ್ನು ಮಗಳಂತೆ ಪ್ರೀತಿಸುತ್ತಾರೆ ಎಂದು ಹೇಳಿದ್ದರು. ಇಂತಹ ಮಾವನನ್ನು ಪಡೆದ ನೀವು ನಿಜವಾಗಿಯೂ ಅದೃಷ್ಟಶಾಲಿ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Viral Video: ಕ್ಷುಲ್ಲಕ ಕಾರಣಕ್ಕೆ ಜಗಳ; ಗ್ರಾಹಕರ ಮೇಲೆ ಹಲ್ಲೆ- ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ದೂರು