Viral Video: ಕ್ಷುಲ್ಲಕ ಕಾರಣಕ್ಕೆ ಜಗಳ; ಗ್ರಾಹಕರ ಮೇಲೆ ಹಲ್ಲೆ- ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ದೂರು
ನಹರ್‌ಗಢದ ಐತಿಹಾಸಿಕ ಕೋಟೆಯಲ್ಲಿರುವ ಜೈಪುರದ ಪದವ್ ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ ಮಹಿಳಾ ಗ್ರಾಹಕರೊಬ್ಬರು ಆಸನ ವ್ಯವಸ್ಥೆ ಕುರಿತು ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೆ ಜಗಳ ಪ್ರಾರಂಭಿಸಿದ್ದು, ಇದು ಮಾತಿನ ಚಕಮಕಿಗೆ ಕಾರಣವಾಗಿದೆ. ಬಳಿಕ ಗ್ರಾಹಕರು ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಹೊಡೆದಾಟವಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

-

ಜೈಪುರ: ರೆಸ್ಟೋರೆಂಟ್ (restaurant) ವೊಂದರಲ್ಲಿ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಹೊಡೆದಾಟ ನಡೆದಿರುವ ಘಟನೆ ಜೈಪುರದಲ್ಲಿ (Jaipur restaurant) ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral Video) ಆಗಿದೆ. ನಹರ್‌ಗಢದ ಐತಿಹಾಸಿಕ ಕೋಟೆಯಲ್ಲಿರುವ (Nahargarh Fort) ಜೈಪುರದ ಪದವ್ ರೆಸ್ಟೋರೆಂಟ್‌ನಲ್ಲಿ (Jaipur's Padav Restaurant) ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮಹಿಳೆಯರ ಗುಂಪು ಮತ್ತು ರೆಸ್ಟೋರೆಂಟ್ ಸಿಬ್ಬಂದಿಯ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಪ್ರಾರಂಭವಾದ ಜಗಳವು ತೀವ್ರ ವಾಗ್ವಾದಕ್ಕೆ ತಿರುಗಿ ಪರಸ್ಪರ ಹೊಡೆದಾಟಕ್ಕೆ ಕಾರಣವಾಯಿತು.
ಮಹಿಳಾ ಗ್ರಾಹಕರೊಬ್ಬರು ಆಸನ ವ್ಯವಸ್ಥೆ ಕುರಿತು ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೆ ಜಗಳ ಪ್ರಾರಂಭಿಸಿದ್ದು, ಇದು ಮಾತಿನ ಚಕಮಕಿಗೆ ಕಾರಣವಾಯಿತು. ಇದು ಹೊಡೆದಾಟಕ್ಕೆ ಕಾರಣವಾಯಿತು. ರೆಸ್ಟೋರೆಂಟ್ ಸಿಬ್ಬಂದಿ ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಜೈಪುರದ ಪದವ್ ರೆಸ್ಟೋರೆಂಟ್‌ನಲ್ಲಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದ ಈ ಘಟನೆ ನಡೆದಿದ್ದು, ಅನೇಕರು ಇದನ್ನು ತಮ್ಮ ಮೊಬೈಲ್ ಕೆಮರಾದಲ್ಲಿ ಚಿತ್ರಿಸಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರೆಸ್ಟೋರೆಂಟ್ ಸಿಬ್ಬಂದಿ ಮಹಿಳೆಯರನ್ನು ಎಳೆದು ಥಳಿಸುತ್ತಿರುವ ದೃಶ್ಯಗಳ ಬಗ್ಗೆ ಅನೇಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರವಾಸಿಗರ ಗುಂಪು ಬ್ರಹ್ಮಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರೆಸ್ಟೋರೆಂಟ್ ಉದ್ಯೋಗಿಯೊಬ್ಬರು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಕೆ ವಿರೋಧಿಸಿದಾಗ ಆಕೆ ಮತ್ತು ಆಕೆಯ ಸಹಚರರ ಮೇಲೆ ಹಲವಾರು ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
Warning : *Fight Scene*
— Avdhesh Pareek (@Zinda_Avdhesh) September 8, 2025
• जयपुर के नाहरगढ स्थित पड़ाव रेस्टोरेंट में कल रात भारी बवाल
• रेस्टोरेंट कर्मचारियों पर वहां आई युवतियों से छेड़छाड़ का लगा आरोप, इसके बाद की गई मारपीट#Jaipur pic.twitter.com/uWziNN7dYu
ಇದಕ್ಕೆ ಪ್ರತಿಯಾಗಿ ಪದವ್ ರೆಸ್ಟೋರೆಂಟ್‌ನ ಜನರಲ್ ಮ್ಯಾನೇಜರ್ ಭಗತ್ ಸಿಂಗ್, ಗ್ರಾಹಕರ ಗುಂಪು ಪೊಲೀಸ್ ಅಧಿಕಾರಿಯ ಶಿಫಾರಸಿನ ಮೇರೆಗೆ ರೆಸ್ಟೋರೆಂಟ್ ಗೆ ಆಗಮಿಸಿತ್ತು. ಮಹಿಳೆ ನಮ್ಮ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದರಿಂದ ಜಗಳ ಉಂಟಾಗಿದೆ ಎಂದು ಪ್ರತಿದೂರು ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬ್ರಹ್ಮಪುರಿ ಪೊಲೀಸ್ ಠಾಣೆಯ ಉಸ್ತುವಾರಿ ರಾಜೇಶ್ ಗೌತಮ್, ಎರಡೂ ಕಡೆಯಿಂದ ದೂರುಗಳು ಬಂದಿವೆ. ಇದು ಕಾಯ್ದಿರಿಸಿದ ಆಸನದ ಬಗ್ಗೆ ಉಂಟಾದ ವಿವಾದವಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ವಿಡಿಯೊ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ರಾಜಸ್ಥಾನ ಪ್ರವಾಸೋದ್ಯಮ ಇಲಾಖೆಯಿಂದ ನಿರ್ವಹಿಸಲ್ಪಡುವ ಈ ರೆಸ್ಟೋರೆಂಟ್ ಸ್ಥಳೀಯರು ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿರುವುದರಿಂದ ಈ ಕುರಿತು ಪಾರದರ್ಶಕ ತನಿಖೆಗೆ ಒತ್ತಡ ಹೆಚ್ಚಾಗಿದೆ ಎನ್ನಲಾಗಿದೆ.