Viral Video: ಮಾಧುರಿಯ ಮಾರ್ ಡಾಲಾ ಹಾಡಿಗೆ ಶಾಲಾ ಬಾಲಕರ ಭರ್ಜರಿ ಡಾನ್ಸ್; ಜಬರ್ದಸ್ತ್ ವಿಡಿಯೊ ಇಲ್ಲಿದೆ
School Boys’ Dance: ಶಿಕ್ಷಕರ ದಿನದಂದು ಶಾಲಾ ಮಕ್ಕಳು ಮಾಡಿದ ನೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾಲಾ ಸಮವಸ್ತ್ರ ಧರಿಸಿ, ಮಕ್ಕಳು ದೇವದಾಸ್ ಚಿತ್ರದ ಮಾರ್ ದಾಲಾ ಎಂಬ ಪ್ರಸಿದ್ಧ ಹಾಡಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಈ ವಿಡಿಯೊ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

-

ಇಟಾನಗರ: ಶಾಲಾ ಮಕ್ಕಳ ಗುಂಪೊಂದು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರ ಹಾಡಿನ ನೃತ್ಯ ಮಾಡಿದ್ದಾರೆ. ಶಿಕ್ಷಕರ ದಿನ (Teacher’s Day) ದಂದು ಮಾಡಿದ ಅವರ ನಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಅರುಣಾಚಲ ಪ್ರದೇಶದ ಬಸಾರ್‌ನಲ್ಲಿರುವ ಶಾಲೆಯಲ್ಲಿ ರೆಕಾರ್ಡ್ ಮಾಡಲಾಗಿದೆ. ಇದರಲ್ಲಿ 15ಕ್ಕೂ ಹೆಚ್ಚು ಶಾಲಾ ಮಕ್ಕಳು ತಮ್ಮ ಶಿಕ್ಷಕರನ್ನು ಗೌರವಿಸುವ ಸಲುವಾಗಿ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.
ಶಾಲಾ ಸಮವಸ್ತ್ರ ಧರಿಸಿ, ಮಕ್ಕಳು ದೇವದಾಸ್ ಚಿತ್ರದ ಮಾರ್ ಡಾಲಾ ಎಂಬ ಪ್ರಸಿದ್ಧ ಹಾಡಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಈ ವಿಡಿಯೊದಲ್ಲಿ ವಿದ್ಯಾರ್ಥಿಗಳು ತುಂಬಾ ಸುಂದರವಾಗಿ ಕುಳಿತುಕೊಂಡಲ್ಲೇ ಸಮನ್ವಯದಿಂದ ನೃತ್ಯ ಪ್ರದರ್ಶಿಸಿದ್ದಾರೆ. ಶಿಕ್ಷಕರ ದಿನಾಚರಣೆ, ಈ ಮಕ್ಕಳು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಗಮನ ಸೆಳೆದಿದ್ದಾರೆ ಎಂದು ವಿಡಿಯೊದಲ್ಲಿ ಬರೆಯಲಾಗಿದೆ.
ನಿರೀಕ್ಷೆಯಂತೆ, ಈ ವಿಡಿಯೊ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಭಾರಿ ವೈರಲ್ (Viral Video) ಆಗಿದೆ. ವಿದ್ಯಾರ್ಥಿಗಳ ಕೌಶಲ್ಯ ಮಾತ್ರವಲ್ಲದೆ ಅವರು ತಮ್ಮ ಶಿಕ್ಷಕರ ದಿನಾಚರಣೆ ಆಚರಿಸಲು ಹಾಕಿದ ಶ್ರಮವೂ ನೆಟ್ಟಿಗರನ್ನು ಆಕರ್ಷಿಸಿತು. ಇದು ಶಿಕ್ಷಕರಿಗೆ ವಿದ್ಯಾರ್ಥಿಗಳು ನೀಡುವ ಇದುವರೆಗಿನ ಅತ್ಯುತ್ತಮ ಉಡುಗೊರೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
ಹುಡುಗರು ಏನು ಮಾಡಿದರೂ ಚೆನ್ನಾಗಿ ಮಾಡುತ್ತಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ತಾನು ನೋಡಿದ ಇದುವರೆಗಿನ ಅತ್ಯುತ್ತಮ ವಿಡಿಯೊ ಇದು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಈ ವಿಡಿಯೊ ನನ್ನ ದಿನವನ್ನು ಸುಂದರಗೊಳಿಸಿತು. ಶಿಕ್ಷಕರು ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ನಾನು ಪ್ರಮಾಣ ಮಾಡುತ್ತೇನೆ ಎಂದು ಮಗದೊಬ್ಬ ಬಳಕೆದಾರರು ಹೇಳಿದರು. ಮಾಧುರಿ ದೀಕ್ಷಿತ್ ನೀವು ಯಾವಾಗಲೂ ಸ್ಫೂರ್ತಿ, ಜನರು ಯಾವುದೇ ಪೀಳಿಗೆಯವರಾಗಿದ್ದರೂ ಸಹ ನೀವು ಎಲ್ಲರಿಗೂ ಸ್ಪೂರ್ತಿಯಾಗಿದ್ದೀರಿ ಎಂದು ಬರೆದಿದ್ದಾರೆ.
ಶಿಕ್ಷಕರ ದಿನಾಚರಣೆಯಲ್ಲಿ ಬಾಲಕರು ಗಮನಸೆಳೆದಿದ್ದರೂ ಕೂಡ, ಕೆಲವು ವಾರಗಳ ಹಿಂದೆ, ಒಬ್ಬ ಶಿಕ್ಷಕ ಕೂಡ ತನ್ನ ನೃತ್ಯ ಪ್ರದರ್ಶನದ ಮೂಲಕ ಪ್ರಸಿದ್ಧನಾಗಿದ್ದರು. ಪುರುಷ ಶಿಕ್ಷಕ ತನ್ನ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಹಾಯ ಮಾಡಲು ನೃತ್ಯ ಸವಾಲನ್ನು ಸ್ವೀಕರಿಸಿದರು. ವಿಡಿಯೊದಲ್ಲಿ, ಅವರು ತಮ್ಮ ವಿದ್ಯಾರ್ಥಿನಿಯರೊಂದಿಗೆ ತಾಲ್ ಚಿತ್ರದ ಪ್ರಸಿದ್ಧ ಹಾಡು ತಾಲ್ ಸೆ ತಾಲ್ ಮಿಲಾ ಹಾಡಿಗೂ ನೃತ್ಯ ಮಾಡಿದ್ದರು.
ವಿದ್ಯಾರ್ಥಿನಿಯರು ಕೂಡ ಅವರ ನೃತ್ಯ ಪ್ರದರ್ಶನವನ್ನು ಅನುಕರಿಸಿದರು. ಇದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆರಗುಗೊಳಿಸಿದ್ದು ಮಾತ್ರವಲ್ಲದೆ, ಶಿಕ್ಷಕರ ಆತ್ಮವಿಶ್ವಾಸ, ಅಭಿವ್ಯಕ್ತಿಶೀಲ ಸನ್ನೆಗಳು ಮತ್ತು ಆಕರ್ಷಕವಾದ ಚಲನೆಗಳನ್ನು ಒಳಗೊಂಡಿದೆ.
ಇದನ್ನೂ ಓದಿ: Viral Video: ರೆಸ್ಟೋರೆಂಟ್ ಉದ್ಯೋಗಿಗಳ ಮೇಲೆ ಖಾಕಿಗಳ ಅಟ್ಟಹಾಸ- ಶಾಕಿಂಗ್ ವಿಡಿಯೊ ಇಲ್ಲಿದೆ