Viral Video: ರೆಸ್ಟೋರೆಂಟ್ ಉದ್ಯೋಗಿಗಳ ಮೇಲೆ ಖಾಕಿಗಳ ಅಟ್ಟಹಾಸ- ಶಾಕಿಂಗ್ ವಿಡಿಯೊ ಇಲ್ಲಿದೆ
Cop Assaulting Restaurant Employees: ಕೇರಳದಲ್ಲಿ ಮತ್ತೊಂದು ಲಾಕಪ್ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಠಾಣೆಗೆ ಕರೆಸಿ ರೆಸ್ಟೋರೆಂಟ್ ಉದ್ಯೋಗಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಾವಳಿಯ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ 2023ರ ಮೇ ತಿಂಗಳಲ್ಲಿ ಸಂಭವಿಸಿದೆ.

-

ತಿರುವನಂತಪುರ: ಕೇರಳದಲ್ಲಿ ಮತ್ತೊಂದು ಲಾಕಪ್ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಅಧಿಕಾರಿಗಳು ರೆಸ್ಟೋರೆಂಟ್ ಉದ್ಯೋಗಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಪೋಲೀಸರು ರೆಸ್ಟೋರೆಂಟ್ ಉದ್ಯೋಗಿಗಳ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ. ವರದಿಗಳ ಪ್ರಕಾರ, ಈ ಘಟನೆ 2023ರ ಮೇ ತಿಂಗಳಲ್ಲಿ ಸಂಭವಿಸಿದೆ. ಈ ವಿಡಿಯೊವನ್ನು ಲಾಲೀಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ತ್ರಿಶೂರ್‌ನ ಉದ್ಯಮಿ ಕೆ.ಪಿ. ಊಸಫ್ ಅವರು, ಮಾಹಿತಿ ಹಕ್ಕು ಕಾಯ್ದೆಯ (RTI Act) ಅಡಿಯಲ್ಲಿ ಪಡೆದ ನಂತರ ಬಹಿರಂಗಪಡಿಸಿದರು.
ವರದಿಗಳ ಪ್ರಕಾರ, ಪತ್ತಿಕಾಡ್‌ನಲ್ಲಿ ಪಾಳಕ್ಕಾಡ್‌ನ ದಿನೇಶ್ ಎಂಬುವವರು ಮತ್ತು ರೆಸ್ಟೋರೆಂಟ್ ಕಾರ್ಮಿಕರ ನಡುವೆ ಜಗಳ ನಡೆದಿದೆ. ನಂತರ ದಿನೇಶ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ, ಪೀಚಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ (ಎಸ್‌ಐ) ರತೀಶ್ ಅವರು ರೆಸ್ಟೋರೆಂಟ್ ಮ್ಯಾನೇಜರ್ ರೋನಿ ಮತ್ತು ಮತ್ತೊಬ್ಬ ಉದ್ಯೋಗಿಯನ್ನು ಠಾಣೆಗೆ ಕರೆಸಿ, ಹಲ್ಲೆ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
ഹോട്ടലുടമയെയും ജീവനക്കാരെയും തൃശൂർ പീച്ചി പൊലീസ് മർദ്ദിക്കുന്നതിന്റെ സിസിടിവി ദൃശ്യങ്ങൾ പുറത്ത് pic.twitter.com/ZB8xfBnHoX
— Samakalika Malayalam (@samakalikam) September 7, 2025
ಸಿಸಿಟಿವಿ ವಿಡಿಯೋದಲ್ಲಿ ರೋನಿಗೆ ಎಸ್‌ಐ ಕ್ಯಾಬಿನ್‌ನಲ್ಲಿ ಕಪಾಳಮೋಕ್ಷ ಮಾಡಲಾಗುತ್ತಿರುವುದು ಮತ್ತು ಮತ್ತೊಬ್ಬ ಪೊಲೀಸ್ ಅಧಿಕಾರಿ ಆತನ ಜೊತೆಗಿದ್ದ ನೌಕರನನ್ನು ಥಳಿಸುತ್ತಿರುವುದು ಕಂಡುಬಂದಿದೆ. ಈ ವಿಷಯ ತಿಳಿದ ಮೇಲೆ ಊಸಫ್ ಮತ್ತು ಅವರ ಪುತ್ರ ಪಾಲ್ ಜೋಸೆಫ್ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ, ಪೊಲೀಸರು ಪಾಲ್ ಜೋಸೆಫ್ ಅವರನ್ನು ಹೋಟೆಲ್ ಸಿಬ್ಬಂದಿಯೊಂದಿಗೆ ಲಾಕ್‌ಅಪ್‌ನಲ್ಲಿ ಬಂಧಿಸಿದ್ದರು. ನಂತರ ಔಸೆಫ್ ಅವರ ಬಳಿ ರಾಜಿ ಮಾಡಿಕೊಳ್ಳುವಂತೆ ಕೇಳಿಕೊಂಡರು.
ಎಸ್‌ಐ ರತೀಶ್ ಅವರು ತಮ್ಮ ಉದ್ಯಮವನ್ನು ಮುಚ್ಚಿಸುವ ಬೆದರಿಕೆ ಹಾಕಿದರು ಮತ್ತು ದಿನೇಶ್ ಅವರ ಅಪ್ರಾಪ್ತ ಪುತ್ರ ರೆಸ್ಟೋರೆಂಟ್‌ನಲ್ಲಿ ಇದ್ದ ಎಂದು ಸುಳ್ಳು ಆರೋಪಗಳನ್ನು ಫೈಲ್ ಮಾಡುತ್ತೇನೆ ಎಂದು ಎಚ್ಚರಿಸಿದರು. ಸಿವಿಲ್ ಪೊಲೀಸ್ ಅಧಿಕಾರಿ ಮಹೇಶ್ ಮತ್ತು ಎಸ್‌ಐ ಜಯೇಶ್ ಕೂಡ ಕಸ್ಟಡಿಯಲ್ಲಿ ನಡೆದ ಹಲ್ಲೆಯಲ್ಲಿ ಪಾಲ್ಗೊಂಡಿದ್ದರು ಎಂದು ಔಸೆಫ್ ಆರೋಪಿಸಿದ್ದಾರೆ.
ಈ ಘಟನೆಯ ಹಿಂದೆ ವೈಷಮ್ಯವಿದೆ ಎಂಬುದನ್ನೂ ಅವರು ದೂರಿದರು. ಪೀಚಿ ಪೊಲೀಸ್ ಠಾಣೆಯ ಪೊಲೀಸರೊಬ್ಬರ ಸಹೋದರಿಯ ಮಗಳು ತನ್ನ ಅಂಗಡಿಯಿಂದ ವಸ್ತುಳನ್ನು ಕದಿಯುವಾಗ ಸಿಕ್ಕಿಬಿದ್ದಿದ್ದಾಳೆ. ಇದರಿಂದ ಪ್ರತೀಕಾರದ ಮನೋಭಾವದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ನಂತರ, ರಾಜಿ ಸಂಧಾನವಾಗಿ, ದೂರುದಾರರಿಗೆ ಐದು ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಔಸೆಫ್ ಹೇಳಿದರು. ಹಣವನ್ನು ಪಡೆದ ನಂತರ, ದೂರುದಾರರು ಠಾಣೆಗೆ ಹಿಂತಿರುಗಿ ತಮ್ಮ ದೂರನ್ನು ಹಿಂತೆಗೆದುಕೊಂಡರು.
ಸಿಸಿಟಿವಿ ದೃಶ್ಯಾವಳಿಗಳಿಗಾಗಿ ಆರ್‌ಟಿಐ ವಿನಂತಿಗಳನ್ನು ಸಲ್ಲಿಸುವ ಮೂಲಕ ಈ ವಿಷಯವನ್ನು ಕಾನೂನುಬದ್ಧವಾಗಿ ಮುಂದುವರಿಸಿದ್ದೇನೆ ಎಂದು ಔಸೆಫ್ ಹೇಳಿದರು. ಕೇರಳ ರಾಜ್ಯ ಮಾಹಿತಿ ಹಕ್ಕು ಆಯೋಗವು ಅಂತಿಮವಾಗಿ ಆಗಸ್ಟ್ 2024 ರಲ್ಲಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲು ಆದೇಶಿಸಿತು.
2023 ರಲ್ಲಿ ಯುವ ಕಾಂಗ್ರೆಸ್ ನಾಯಕ ವಿ.ಎಸ್. ಸುಜಿತ್ ಎಂಬವರ ಮೇಲೆ ನಡೆದ ಲಾಕಪ್ ಹಲ್ಲೆಯನ್ನು ಆರ್‌ಟಿಐ ಕಾಯ್ದೆಯ ಮೂಲಕ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಿಸಿಟಿವಿ ದೃಶ್ಯ ವೈರಲ್ ಆದ ಬಳಿಕ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ: Brutal Murder Case: ಮದ್ವೆಗಿಂತ ಮುನ್ನ ಸೆಕ್ಸ್‌ಗೆ ಒಪ್ಪದ ಅಪ್ರಾಪ್ತ ವಧುವಿನ ಮೇಲೆ ಅತ್ಯಾಚಾರವೆಸಗಿ ಬರ್ಬರ ಕೊಲೆ