Viral Video: ರೈಲಿನಲ್ಲಿ ಪ್ರಯಾಣಿಸುವಾಗ ಎಚ್ಚರ... ಎಚ್ಚರ! ಈ ವಿಡಿಯೊ ನೋಡಿದ್ರೆ ಬೆಚ್ಚಿ ಬೀಳ್ತೀರಿ
ಫಲಕಟಾದಲ್ಲಿ ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಹಾವೊಂದು ಕಂಡುಬಂದಿದೆ. ಪ್ರಯಾಣಿಕರೊಬ್ಬರು ಹಾವನ್ನು ಕಂಡು ಹೆದರಿ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಹಾವನ್ನು ಹಿಡಿದು ರೈಲಿನಿಂದ ಹೊರಗೆ ಎಸೆದಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಮುಂಬೈ: ಚಲಿಸುತ್ತಿದ್ದ ರೈಲಿನ ಶೌಚಾಲಯದಲ್ಲಿ ಹಾವೊಂದು ಕಂಡುಬಂದ ಘಟನೆ ಮುಂಬೈನಲ್ಲಿ ನಡೆದಿದೆ. ಹಾವನ್ನು ಕಂಡು ಪ್ರಯಾಣಿಕರು ಹೌಹಾರಿದ್ದಾರೆ. ರೈಲಿನ ಸಿಬ್ಬಂದಿಯೊಬ್ಬರು ಹಾವನ್ನು ಹಿಡಿದು ಅದನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿದ್ದಾರೆ. ಈ ಘಟನೆಯ ವಿಡಿಯೊವನ್ನು ಪತ್ರಕರ್ತರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊ ಈಗ ವೈರಲ್(Viral Video) ಆಗಿದೆ. ಫಲಕಟಾದಲ್ಲಿ ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಶೌಚಾಲಯದ ಮೇಲ್ಛಾವಣಿಯಲ್ಲಿರುವ ಟ್ಯೂಬ್ ಲೈಟ್ ಮೇಲೆ ಹಾವು ತೆವಳುತ್ತಿರುವುದನ್ನು ವಿಡಿಯೊದಲ್ಲಿ ಸೆರೆಯಾಗಿದೆ. ರೈಲಿನ ಸಿಬ್ಬಂದಿ ಕೈಗೆ ಪ್ಲಾಸ್ಟಿಕ್ ಕವರ್ ಅನ್ನು ಸುತ್ತಿಕೊಂಡು ಹಾವನ್ನು ಕೈಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
#अमृतकाल ??@RailwayNorthern @RailMinIndia @drm_dli @RailNf@Clwrailindia @drm_tsk #Assam#snake#Delhi #Maharashtra#IndianRailways#rajdhani_train https://t.co/8E1riJCas1
— SATISH SINGH (@satishsingh789) May 6, 2025
ವರದಿ ಪ್ರಕಾರ, ವೇಗವಾಗಿ ಚಲಿಸುತ್ತಿದ್ದ ರೈಲಿನ ಶೌಚಾಲಯದೊಳಗೆ ಪ್ರಯಾಣಿಕರೊಬ್ಬರು ಹೋದಾಗ ಅಲ್ಲಿ ಅಪಾಯಕಾರಿ ಹಾವನ್ನು ಶಾಕ್ ಆಗಿದ್ದಾರೆ. ಭಯಭೀತರಾದ ಪ್ರಯಾಣಿಕ ಶೌಚಾಲಯದಿಂದ ಹೊರಬಂದು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ರೈಲಿನ ಸಿಬ್ಬಂದಿ ಹಾವನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಹಿಡಿದು ಹೊರಗೆ ಎಸೆದಿದ್ದಾರೆ.
ಇಡೀ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾವು ರೈಲಿನ ಶೌಚಾಲಯದೊಳಗೆ ಹೇಗೆ ತಲುಪಿತು ಮತ್ತು ರೈಲಿನ ಛಾವಣಿಯವರೆಗೆ ತೆವಳಿತು ಎಂಬ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವರು ವೈರಲ್ ವಿಡಿಯೊಗೆ ತಮಾಷೆಯ ಕಾಮೆಂಟ್‍ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರೊಬ್ಬರು,"ಬಿಹಾರಿ ಹಾವು ಬಾತ್ರೂಮ್‍ನಲ್ಲಿದ್ದುಕೊಂಡು ಪ್ರಯಾಣಿಸುತ್ತಿದೆ" ಎಂದು ಬರೆದಿದ್ದಾರೆ. ಇನ್ನೊಬ್ಬರು ರೈಲ್ವೆ ಸಿಬ್ಬಂದಿಯ ಸಾಹಸವನ್ನು ಹೊಗಳಿದ್ದಾರೆ ಮತ್ತು “ಅದ್ಭುತ ಕೆಲಸ ಮಾಡಿದ್ದೀರಿ”ಎಂದು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಭಾರತದಲ್ಲಿ ರೈಲು ಪ್ರಯಾಣ ನಂತರ ಅಮೆರಿಕ ಪ್ರವಾಸಿಗನಿಗೆ ಆಗಿದ್ದೇನು? ಈತ ಬದುಕುಳಿದ್ದಿದ್ದೇ ಪವಾಡ ಅಂತೆ!
ಈ ಹಿಂದೆ ಸೌತ್ ಬಿಹಾರ್ ಎಕ್ಸ್‌ಪ್ರೆಸ್ ರೈಲಿನ ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಇಲಿಗಳ ಹಾವಳಿ ಇರುವುದಾಗಿ ವರದಿಯಾಗಿತ್ತು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಶಾಂತ್ ಕುಮಾರ್ ಎಂಬ ಪ್ರಯಾಣಿಕ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ 3000ರೂ ಕೊಟ್ಟು ಪ್ರಯಾಣಿಸುತ್ತಿದ್ದಾಗ ಇಲಿಗಳು ಹಾವಳಿಯಿಂದ ಕಂಗೆಟ್ಟು, ಆರ್‌ಪಿಎಫ್‌ಗೆ ಇಲಿಗಳಿರುವ ಬಗ್ಗೆ ದೂರು ನೀಡಿದ್ದನು. ಆದರೆ ಅಧಿಕಾರಿಗಳು ಇದರ ವಿರುದ್ಧ ಯಾವುದೇ ಕ್ರಮ ಕೂಡ ತೆಗೆದುಕೊಳ್ಳಲಿಲ್ಲ ಎಂದು ವರಿದಿಯಾಗಿದೆ. ರೈಲಿನಲ್ಲಿ ಇಲಿಗಳು ಸೀಟು, ನೆಲದ ಮೇಲೆ ಓಡಾಡಿದ್ದು ಮಾತ್ರವಲ್ಲದೇ, ಮಲಗಿಕೊಂಡಿದ್ದ ವ್ಯಕ್ತಿಯ ಮೈ ಮೇಲೂ ಹರಿದಾಡುವುದು ವಿಡಿಯೊದಲ್ಲಿ ಸೆರೆಯಾಗಿತ್ತು.