Viral Video: 'ಚೌಧರಿ' ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ ಜೋಡಿ; ಇಲ್ಲಿದೆ ನೋಡಿ ಅದ್ಭುತ ಪ್ರೇಮಕಥೆ
ಕಳೆದ ವಾರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೊ ಒಂದರಲ್ಲಿ ತಮ್ಮ ಮದುವೆಯ ದಿನ ದಂಪತಿ ಮಾಮೆ ಖಾನ್ ಚಾರ್ಟ್ ಬಸ್ಟರ್ ಚೌಧರಿ ಹಾಡಿಗೆ ನೃತ್ಯ ಮಾಡಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 35 ಮಿಲಿಯನ್ ವ್ಯೂವ್ಸ್ ಗಳಿಸಿತ್ತು. ಆದರೆ ಈ ದಂಪತಿಯ ಹಿಂದೆ ಒಂದು ಅದ್ಭುತವಾದ ಪ್ರೇಮಕಥೆಯೇ ಅಡಗಿದೆಯಂತೆ. ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಅಹ್ಮದಾಬಾದ್: ಪ್ರೀತಿಸಿದ ಜೀವಗಳು ಹೆಸೆಮಣೆ ಏರುವಾಗ ಅದರ ಖುಷಿಯೇ ಬೇರೆ. ಇಲ್ಲೊಂದು ಜೋಡಿಯ ಅದ್ಭುತವಾದ ಪ್ರೇಮ ಕತೆಯಿದೆ. ಇವರಿಬ್ಬರೂ ಒಂದೇ ಶಾಲೆಯಲ್ಲಿ, ಒಂದೇ ಬೆಂಚಿನಲ್ಲಿ ಕುಳಿತ ಸಹಪಾಠಿಗಳು. ಸ್ನೇಹದಿಂದ ಪ್ರೀತಿ ಹುಟ್ಟಿ ಅದು ಅವರನ್ನು ಮದುವೆಯ ಬಂಧನಕ್ಕೆ ಒಳಪಡಿಸಿದೆಯಂತೆ. ಮದುವೆಯ ದಿನದಂದು ಈ ಜೋಡಿ ಮಾಮೆ ಖಾನ್ ಚಾರ್ಟ್ ಬಸ್ಟರ್ ಚೌಧರಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ಹಾಗೇ ಇವರ ಪ್ರೇಮಕತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಈ ವಿಡಿಯೊದಲ್ಲಿ ಮದುವೆಯ ದಿನದಂದು ಹಸಿರು ಉಡುಪಿನಲ್ಲಿ ಮಿಂಚಿದ ವಧು ವರನ ಬಳಿಗೆ ಬಂದು, ಅವನ ಕೈಗಳನ್ನು ಹಿಡಿದುಕೊಂಡು, ಮಾಮೆ ಖಾನ್ ಚಾರ್ಟ್ ಬಸ್ಟರ್ ಚೌಧರಿ ಹಾಡಿಗೆ ನೃತ್ಯ ಮಾಡಿ ಪತಿಯನ್ನು ತಮಾಷೆಯಾಗಿ ಮುಂದೆ ಎಳೆದಿದ್ದಾಳೆ. ವರನು ಹೆಂಡತಿಯ ಡ್ಯಾನ್ಸ್‌ಗೆ ಫಿದಾ ಆಗಿ ಕೊನೆಗೆ ಅವಳ ಜೊತೆ ಹೆಜ್ಜೆ ಹಾಕಿದ್ದಾನೆ. ಇದನ್ನು ಕಂಡ ಅಲ್ಲಿದ್ದ ಅತಿಥಿಗಳು ಚಪ್ಪಾಳೆಯ ಸುರಿಮಳೆ ಸುರಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೊ ಕಳೆದ ವಾರ ಪೋಸ್ಟ್ ಮಾಡಿದಾಗಿನಿಂದ ಇನ್‌ಸ್ಟಾಗ್ರಾಂನಲ್ಲಿ 35 ಮಿಲಿಯನ್ ವ್ಯೂವ್ಸ್ ಗಳಿಸಿದೆ.
ಗುಜರಾತಿ-ಮಾರ್ವಾಡಿ ದಂಪತಿಯ ಪ್ರೇಮಕಥೆ
ನೃತ್ಯ ವಿಡಿಯೊದಲ್ಲಿ ಇದ್ದ ದಂಪತಿ ಮೀತ್ ಮತ್ತು ಜಿನಾಲ್ ಶಾ ಎನ್ನಲಾಗಿದ್ದು, ಇವರಿಬ್ಬರು ಶಾಲೆಯಲ್ಲಿ ಭೇಟಿಯಾಗಿದ್ದರು ಮತ್ತು ಅವರ ನಡುವೆ ಪ್ರೀತಿ ಅರಳುವವರೆಗೂ ಸ್ನೇಹಿತರಾಗಿದ್ದರಂತೆ. ಮಾಹಿತಿ ಪ್ರಕಾರ, ರಾಜಸ್ಥಾನ ಮೂಲದ ಮೀತ್ ಶಾ ಕುಟುಂಬವು ಗುಜರಾತ್‍ನ ಸೂರತ್‍ನಲ್ಲಿ ಬದುಕು ಕಟ್ಟಿಕೊಂಡಿತಂತೆ. ಮೀತ್ ಹಾಗೂ ಜಿನಾಲ್ ಶಾಲೆಯಲ್ಲಿ ಒಂದೇ ಬೆಂಚ್‍ನಲ್ಲಿ ಕುಳಿತುಕೊಂಡ ಸಹಪಾಠಿಗಳಾಗಿದ್ದರಂತೆ. ಜಿನಾಲ್ ಗುಜರಾತಿ ಜೈನ ಕುಟುಂಬಕ್ಕೆ ಸೇರಿದವಳು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದರಂತೆ. ಕಾಲೇಜಿನ ನಂತರ ಬೇರೆ ಬೇರೆಯಾದರು.ಅವರಲ್ಲಿ ಪ್ರೀತಿ ಇದ್ದರೂ ಸ್ನೇಹವನ್ನು ಅಪಾಯಕ್ಕೆ ತಳ್ಳಬಾರದು ಎಂದು ಅವರು ಒಬ್ಬರಿಗೊಬ್ಬರು ಹೇಳಿಕೊಂಡಿರಲಿಲ್ಲವಂತೆ. ಕೊನೆಗೆ ಜಿನಾಲ್ ಪ್ರಪೋಸ್ ಮಾಡಿದ್ದಾಳಂತೆ.
ಈ ಸುದ್ದಿಯನ್ನೂ ಓದಿ:Viral Video: ಇದು ‘ಲವ್ ಇನ್ ಪಾಕಿಸ್ತಾನ್’- ಪಾಕ್ ಯುವಕನನ್ನು ಮದುವೆಯಾಗಲು ಅಮೆರಿಕದಿಂದ ಹಾರಿಬಂದ ಮಹಿಳೆ!
ಅವನು ರಾಜಸ್ಥಾನದ ಮಾರ್ವಾಡಿ. ಅವಳು ಗುಜರಾತಿ. ಆದರೆ ಅವರ ಪ್ರೇಮಕಥೆ ಸಾಂಸ್ಕೃತಿಕ ಕಟ್ಟುಪಾಡುಗಳನ್ನು ಮೀರಿದೆ. ಆದರೆ ಜಿನಾಲ್ ಮೀತ್‌ನ ಮಾರ್ವಾಡಿ ಸಂಸ್ಕೃತಿಯನ್ನು ಖುಷಿಯಿಂದ ಸ್ವೀಕರಿಸಿದ್ದಾಳೆ ಹಾಗೂ ಅವನು ಅವಳ ಗುಜರಾತಿ ಸಂಸ್ಕೃತಿಯನ್ನು ಆಚರಿಸುತ್ತಾನಂತೆ.