Viral Video: ಈ ಪ್ರವಾಸಿಗನ ಧೈರ್ಯಕ್ಕೆ ನೋಡುಗರೇ ಶಾಕ್! ಚಾಕು ಹಿಡಿದು ಪುಂಡಾಟ ಮೆರೆದವನಿಗೆ ಈ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ
ಆಮ್‌ಸ್ಟರ್‌ಡ್ಯಾಮ್ ನಡುರಸ್ತೆಯಲ್ಲಿ ಜನರನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ ವ್ಯಕ್ತಿಯೊರ್ವನನ್ನು ಇಂಗ್ಲೆಂಡ್ ಪ್ರವಾಸಿಯೊಬ್ಬ ಏಕಾಂಗಿಯಾಗಿ ಆತನಿಗೆ ಹೊಡೆದು ಬಂಧಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆತನ ಧೈರ್ಯ ಕಂಡು ಜನರು ಹಾಗೂ ಅಧಿಕಾರಿಗಳು ಆತನನ್ನು 'ಬ್ರಿಟ್ ಹೀರೋ' ಎಂದು ಹೊಗಳಿದ್ದಾರೆ.


ಆಮ್‌ಸ್ಟರ್‌ಡ್ಯಾಮ್: ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಚಾಕು ಹಿಡಿದು ಓಡಾಡುತ್ತಿದ್ದು, ಈ ವೇಳೆ ಐವರಿಗೆ ಇರಿದು ಗಾಯಗೊಳಿಸಿದ್ದಾನೆ. ಹೀಗಾಗಿ ಅವನನ್ನು ಕಂಡು ಹೆದರಿದ ಜನರು ಯಾರು ಅವನ ಹತ್ತಿರ ಬರಲು ಹೆದರಿದ್ದಾರಂತೆ. ಆದರೆ ಪ್ರವಾಸಿಗನೊಬ್ಬ ಅವನನ್ನು ತಡೆದು ಬಂಧಿಸಿದ ಘಟನೆ ನಡೆದಿದೆ. ಹೀಗಾಗಿ ಅವನ ಧೈರ್ಯವನ್ನು ಕಂಡು ಜನರು ಹಾಗೂ ಅಧಿಕಾರಿಗಳು ಅವನನ್ನು 'ಬ್ರಿಟ್ ಹೀರೋ' ಎಂದು ಹೊಗಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಪ್ರವಾಸಿಯು ಹಲ್ಲೆಕೋರನ ಜೊತೆ ಹೋರಾಡಿ ಅವನನ್ನು ರಸ್ತೆಗೆ ತಳ್ಳಿ ಗಟ್ಟಿಯಾಗಿ ಹಿಡಿದುಕೊಂಡಿರುವುದು ಸೆರೆಯಾಗಿದೆ. ನಂತರ, ಪೊಲೀಸರು ಬರುವವರೆಗೂ ಅಲ್ಲಿದ್ದ ಜನರು ಹಲ್ಲೆಕೋರನನ್ನು ನಿಗ್ರಹಿಸಲು ಸಹಾಯ ಮಾಡಿದ್ದಾರಂತೆ.ವರದಿ ಪ್ರಕಾರ, ಪೊಲೀಸರು ಸ್ಥಳಕ್ಕೆ ಬಂದು ಹಲ್ಲೆಕೋರನನ್ನು ಬಂಧಿಸಿದ್ದಾರೆ. ಹಾಗೇ ವ್ಯಕ್ತಿಯ ಧೈರ್ಯವನ್ನು ಮೆಚ್ಚಿಕೊಂಡು ಅವನು ಉತ್ತಮ ಕೆಲಸ ಮಾಡಿದ್ದಾನೆ ಎಂದು ಹೊಗಳಿದ್ದಾರೆ.
ಚಾಕು ಹಿಡಿದು ದಾಳಿ ಮಾಡಿದ ವ್ಯಕ್ತಿಯ ವಿಡಿಯೊ ಇಲ್ಲಿದೆ ನೋಡಿ...
This guy stopped the knifeman in Amsterdam before the police arrived. Europe desperately needs more guys like him. A true hero. pic.twitter.com/JQITVuF7Ke
— RadioGenoa (@RadioGenoa) March 27, 2025
ಹಲ್ಲೆಕೋರನ ದಾಳಿಯಿಂದ ಇಬ್ಬರು ಹಿರಿಯ ಅಮೆರಿಕನ್ ಪ್ರವಾಸಿಗರು, ಬೆಲ್ಜಿಯಂ ಮಹಿಳೆ ಮತ್ತು 19 ವರ್ಷದ ಆಮ್‌ಸ್ಟರ್‌ಡ್ಯಾಮ್ ನಿವಾಸಿ ಸೇರಿದಂತೆ ಐದು ಜನರು ಗಾಯಗೊಂಡಿದ್ದಾರೆ.ಶಂಕಿತ ಡಚ್ ಪ್ರಜೆಯಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ದಾಳಿಯ ಹಿಂದಿನ ಕಾರಣಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ತನಿಖೆ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ನಡುರಸ್ತೆಯಲ್ಲಿ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದ ಮಂಗಳಮುಖಿಯರು- ಶಾಕಿಂಗ್ ವಿಡಿಯೊ ಎಲ್ಲೆಡೆ ವೈರಲ್
ಜನರನ್ನು ಪೆನ್ಸಿಲ್‍ನಿಂದ ಇರಿದ ಮಹಿಳೆ
ಇತ್ತೀಚೆಗೆ ಟೆಕ್ಸಾಸ್ ವಿಮಾನ ನಿಲ್ದಾಣದಲ್ಲಿ ಸಮಂತಾ ಪಾಲ್ಮಾ ಎಂಬ ಮಹಿಳೆಯೊಬ್ಬಳು ಬೆತ್ತಲೆಯಾಗಿ ಓಡಾಡುತ್ತಾ ಜನರನ್ನು ಪೆನ್ಸಿಲ್‍ನಿಂದ ಇರಿದು ಗಾಯಗೊಳಿಸಿದಲ್ಲದೇ ಕೆಲವು ಸಿಬ್ಬಂದಿಯನ್ನು ಕಚ್ಚಿಗಾಯಗೊಳಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಅವರು ಆಕೆಯನ್ನು ಬಂಧಿಸಿದ್ದಾರೆ.ವಿಚಾರಣೆಯ ವೇಳೆ ಆಕೆ ಮಾನಸಿಕ ಅಸ್ವಸ್ಥಳಾಗಿದ್ದು, ಆ ದಿನ ತನ್ನ ಔಷಧಿಗಳನ್ನು ತೆಗೆದುಕೊಂಡಿಲ್ಲ ಎಂದು ಆಕೆಯೇ ಒಪ್ಪಿಕೊಂಡಿದ್ದಾಳೆ. ಸದ್ಯಕ್ಕೆ ಆಕೆಯನ್ನು ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಬಂಧಿಸಲಾಗಿದೆಯಂತೆ.