Viral Video: ಅಂಗಡಿಯಲ್ಲಿ ನಿಂತಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ; ಏನಿದು ಘಟನೆ?
ವ್ಯಕ್ತಿಯೊಬ್ಬ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗೆ ಹೋಗಿ ಯಾವುದೇ ಕಾರಣವಿಲ್ಲದೆ ಇನ್ನೊಬ್ಬ ವ್ಯಕ್ತಿಗೆ ಹೊಡೆದಿದ್ದಾನೆ.ಹಲ್ಲೆಗೊಳಗಾದ ವ್ಯಕ್ತಿ ಅಲ್ಲಿಯೇ ಕುಸಿದು ಬಿದ್ದಿದ್ದಾನೆ ಈ ದೃಶ್ಯ ಸ್ಟೋರ್‌ನೊಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Video Viral) ಆಗಿದೆ.


ನವದೆಹಲಿ: ಇತ್ತೀಚೆಗೆ ವ್ಯಕ್ತಿಯೊಬ್ಬ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗೆ ಹೋಗಿ ಯಾವುದೇ ಕಾರಣವಿಲ್ಲದೆ ಇನ್ನೊಬ್ಬ ವ್ಯಕ್ತಿಗೆ ಥಳಿಸಿದ್ದಾನೆ. ಈ ದೃಶ್ಯ ಸ್ಟೋರ್‌ನೊಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಜನರಿಗೆ ಆಸಕ್ತಿದಾಯಕವಾದ ಜಿಟಿಎ ಗೇಮ್ ಬೇಸರವೆನಿಸಿದ್ದಕ್ಕೆ ಆ ವ್ಯಕ್ತಿ ಈ ರೀತಿ ವರ್ತಿಸಿದ್ದಾನೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಡಿಪಾರ್ಟ್‌ಮೆಂಟಲ್ ಸ್ಟೋರ್‌ನ ಕೌಂಟರ್‌ನಲ್ಲಿ ಇಬ್ಬರು ಪುರುಷರು ನಿಂತಿರುವಾಗ ಇದ್ದಕ್ಕಿದ್ದಂತೆ, ವ್ಯಕ್ತಿಯೊಬ್ಬ ಒಳಗೆ ಬಂದು ಸರದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನಂತರ ಆತ ಬಾಗಿಲು ತೆರೆದು ಹೊರಟು ಹೋಗಿದ್ದಾನೆ. ಹಲ್ಲೆಗೊಳಗಾದ ವ್ಯಕ್ತಿ ಕುಸಿದು ಬಿದ್ದಿದ್ದಾನೆ. ಅವನ ಮುಂದೆ ಇದ್ದ ಮತ್ತೊಬ್ಬ ವ್ಯಕ್ತಿಗೆ ಏನಾಯ್ತು ಎಂಬುದೇ ತಿಳಿಯದೇ ಕಕ್ಕಾಬಿಕ್ಕಿಯಾಗಿ ಅವನನ್ನು ನೋಡುತ್ತಾ ನಿಂತಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಏಪ್ರಿಲ್ 17 ರಂದು ಶೇರ್ ಮಾಡಲಾದ ಈ ವಿಡಿಯೊ ಇದುವರೆಗೆ 15,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಈ ವಿಡಿಯೊದ ಸತ್ಯಾಸತ್ಯತೆಯನ್ನು ಇನ್ನೂ ದೃಢಪಡಿಸಲಾಗಿಲ್ಲ. ಹಾಗೂ ವ್ಯಕ್ತಿ ಆತನಿಗೆ ಹೊಡೆಯಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಒಟ್ಟಾರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೊ ನೋಡಿದವರು ಶಾಕ್ ಆಗಿದ್ದಾರೆ.
ಇಂತಹ ಘಟನೆಗಳು ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ 81 ವರ್ಷದ ಗ್ಲೋರಿಯಾ ಎಂಬ ಮಹಿಳೆ ಸಂಜೆ ವೇಳೆ ನಾಯಿಯನ್ನು ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ, ಅಪಾರ್ಟ್‌ಮೆಂಟ್ ಬಳಿಯ ಪಾದಚಾರಿ ಮಾರ್ಗದಲ್ಲಿ ವ್ಯಕ್ತಿಯೊಬ್ಬ ಅವಳ ಹಿಂದೆ ಬಂದು ಆಕೆಯ ತಲೆಯನ್ನು ಕಟ್ಟಡದ ಗೋಡೆಗೆ ಹೊಡೆದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದ್ದು, ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿತ್ತು. ಆಘಾತಕಾರಿ ಘಟನೆಯಲ್ಲಿ, ಕಪ್ಪು ಬಟ್ಟೆ ಧರಿಸಿದ ವ್ಯಕ್ತಿ ಮಹಿಳೆಯ ಹಿಂದೆ ನಡೆದು ಬಂದು ಆಕೆಯ ತಲೆಯನ್ನು ಕಟ್ಟಡದ ಬದಿಗೆ ಹೊಡೆಯುವುದು ಸೆರೆಯಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಸಾವಿನ ಜೊತೆ ಸೆಣಸಾಟ ಅಂದ್ರೆ ಇದಪ್ಪಾ! ವಿಡಿಯೊ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
ನಂತರ ಅವಳು ತನ್ನ ಸಮತೋಲನವನ್ನು ಕಳೆದುಕೊಂಡು ನೆಲಕ್ಕೆ ಬಿದ್ದಿದ್ದಾಳೆ. ಹಲ್ಲೆಯ ನಂತರ ಸಂತ್ರಸ್ತೆಯ ಮುಖ ಮತ್ತು ತಲೆಗೆ ಮತ್ತು ಕುತ್ತಿಗೆಗೆ ಗಾಯಗಳಾಗಿತ್ತು. ನಂತರ ಗ್ಲೋರಿಯಾ ಅವಳನ್ನು ಚಿಕಿತ್ಸೆಗಾಗಿ ಮೌಂಟ್ ಸಿನಾಯ್ ಮಾರ್ನಿಂಗ್ ಸೈಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತಂತೆ.