Viral Video: ಸಾವಿನ ಜೊತೆ ಸೆಣಸಾಟ ಅಂದ್ರೆ ಇದಪ್ಪಾ! ವಿಡಿಯೊ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
ವೃತ್ತಿಪರ ಜೇನು ಸಾಕಣೆದಾರ ರಾಜು ಪಟೇಲ್ ಬರಿಗೈಯಿಂದ ಬೃಹತ್ ಜೇನುಗೂಡನ್ನು ಹಿಡಿದುಕೊಂಡಿದ್ದಾನೆ. ಆತ ಜೇನುಗೂಡನ್ನೇ ಬರಿಗೈಯಲ್ಲಿ ಹಿಡಿದುಕೊಂಡಿದ್ದು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
 
                                -
 pavithra
                            
                                Apr 23, 2025 7:40 PM
                                
                                pavithra
                            
                                Apr 23, 2025 7:40 PM
                            ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಚಿತ್ರವಾದ ವಿಡಿಯೊಗಳು ಹರಿದಾಡುತ್ತಿರುತ್ತವೆ. ಇದು ನೆಟ್ಟಿಗರ ಗಮನ ಸೆಳೆದು ವೈರಲ್ ಆಗುತ್ತಿರುತ್ತವೆ. ಅದೇರೀತಿ ಇದೀಗ ಮತ್ತೊಂದು ವೈರಲ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.ಈ ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ತನ್ನ ಬರಿಗೈಯಿಂದ ಬೃಹತ್ ಜೇನುಗೂಡನ್ನು ಹಿಡಿದುಕೊಂಡಿದ್ದಾನೆ. ಸಾಮಾನ್ಯವಾಗಿ ಜನರು ಜೇನುನೊಣ ಹತ್ತಿರ ಬಂದರೆ ಸಾಕು ಹೆದರಿ ಓಡುತ್ತಾರೆ. ಅಂತಹದರಲ್ಲಿ ಆತ ಜೇನುಗೂಡನ್ನೇ ಬರಿಗೈಯಲ್ಲಿ ಹಿಡಿದುಕೊಂಡಿದ್ದು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಕಿಟಕಿಯ ಬಳಿ ಕುಳಿತಿರುವ ವ್ಯಕ್ತಿ, ಕಟ್ಟಡದ ಛಾವಣಿಯ ಮೇಲೆ ಕಟ್ಟಲಾದ ದೊಡ್ಡ ಜೇನುಗೂಡಿನ ಕಡೆಗೆ ಕೈಹಾಕಿ ಅದರಲ್ಲಿರುವ ಜೇನುನೊಣಗಳನ್ನು ಕೈಮುಷ್ಟಿಯಲ್ಲಿ ಹಿಡಿದುಕೊಂಡು ಹಾರಿಸಿದ್ದಾನೆ. ಯಾವುದೇ ರಕ್ಷಣಾ ಸಾಧನಗಳಿಲ್ಲದೆ, ಅವನು ಜೇನುಗೂಡನ್ನು ಮುಟ್ಟಿದ್ದಾನೆ. ಈ ಅಪಾಯಕಾರಿಯಾದ ಕೆಲಸ ಮಾಡಿದವನನ್ನು ಕಂಡು ಸೋಶಿಯಲ್ ಮಿಡಿಯಾ ನೆಟ್ಟಿಗರು ಶಾಕ್ ಆಗಿದ್ದಾರೆ.
ಹಾಗೇ ಈ ವಿಡಿಯೊದಲ್ಲಿರುವ ವ್ಯಕ್ತಿ ಇನ್ಸ್ಟಾಗ್ರಾಮ್‍ನಲ್ಲಿ 15,000 ಕ್ಕೂ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿರುವ ವೃತ್ತಿಪರ ಜೇನು ಸಾಕಣೆದಾರ ರಾಜು ಪಟೇಲ್ ಎಂದು ನೆಟ್ಟಿಗರು ಗುರುತಿಸಿದ್ದಾರೆ. ಜೇನುನೊಣಗಳಿಗೆ ಸಂಬಂಧಿಸಿದ ವಿಡಿಯೊ ಮಾಡುವ ಈ ಕಂಟೆಂಟ್ ಕ್ರಿಯೇಟರ್ ರಾಜು ಆಗಾಗ್ಗೆ ಜೇನುಗೂಡುಗಳೊಂದಿಗೆ ಸಂವಹನ ನಡೆಸುವುದನ್ನು ತನ್ನ ಬರಿಗೈಯಲ್ಲಿ ಅವುಗಳನ್ನು ಹಿಡಿಯುವುದನ್ನು ವಿಡಿಯೊ ಮಾಡುತ್ತಿರುತ್ತಾನೆ.
ಇತ್ತೀಚಿನ ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. "ಬ್ರೋ ಅಪಾಯದಲ್ಲಿಲ್ಲ, ಆದರೆ ಅವನೇ ಅಪಾಯಕಾರಿ" ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. "ಯಮರಾಜ ಕೂಡ ಸಹೋದರನಿಗೆ ಹೆದರುತ್ತಾನೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಯಾರು ಅದನ್ನು ನಕಲಿ ಮಾಡಲು ಸಾಧ್ಯವಾಗದಂತಹ ವಿಷಯಗಳನ್ನು ಮಾಡಿ” ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಒಂದೇ ಮಂಟಪದಲ್ಲಿ ಒಂದೇ ಕುಟುಂಬದ 6 ಜೋಡಿಗಳ ಮದ್ವೆ- ಅರೇ... ಇದೇನಿದು ಸಾಮೂಹಿಕ ವಿವಾಹವೇ?
ಜೇನುನೊಣಗಳ ಜೊತೆ ವ್ಯಕ್ತಿ ಸ್ಟಂಟ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಯುವಕನೊಬ್ಬ ತನ್ನ ಬರಿಗೈಯಿಂದ ಇಡೀ ಜೇನುನೊಣಗಳ ಗುಂಪನ್ನು ಸಾಗಿಸಿದ್ದಾನೆ. ಆತ ತನ್ನ ಕೈಯಲ್ಲಿ ರಾಣಿ ಜೇನುನೊಣವನ್ನು ಹಿಡಿದು ಸಾಗಿಸುವಾಗ ಉಳಿದ ಜೇನುನೊಣಗಳು ಆತನ ಕೈಯ ತೋಳಿನ ಸುತ್ತ ಸುತ್ತಿಕೊಂಡಿದ್ದವು. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದನ್ನು ಕಂಡು ಶಾಕ್ ಆಗಿದ್ದರು. ಈ ವಿಡಿಯೊ 2 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.
