ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶಿವಾ... ಅಂತಾ ಆಫೀಸ್‌ಗೆ ಬಂದವನಿಗೆ ಕಾದಿತ್ತು ಶಾಕ್‌! ಡೆಸ್ಕ್‌ನಡಿಯಲ್ಲೇ ಭುಸುಗುಡುತ್ತಿತ್ತು ವಿಷ ಸರ್ಪ

ಕೊಲೊರಾಡೋದ ಬೌಲ್ಡರ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ಸುತ್ತಮುತ್ತ ಸರಿಯಾಗಿ ಗಮನಿಸದೇ ತನ್ನ ಆಫೀಸ್‌ ಟೇಬಲ್‌ ಹತ್ತಿರ ಬಂದು ಕುಳಿತುಕೊಂಡಿದ್ದಾನೆ. ಆದರೆ ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ದೊಡ್ಡ ಹಾವೊಂದು ಆತನನ್ನೇ ನೋಡುತ್ತಿರುವುದನ್ನು ಕಂಡು ಆತ ಶಾಕ್‌ ಆಗಿದ್ದಾನಂತೆ.ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಡೆಸ್ಕ್‌ನಡಿಯಲ್ಲೇ ಭುಸುಗುಡುತ್ತಿತ್ತು ವಿಷ ಸರ್ಪ- ಈ ವಿಡಿಯೊ ನೋಡಿ

Profile pavithra May 28, 2025 4:32 PM

ನವದೆಹಲಿ: ಇತ್ತೀಚೆಗೆ ಮಲಗಿದ್ದ ವ್ಯಕ್ತಿಯೊಬ್ಬನ ಮೇಲೆ ದೈತ್ಯ ಕಾಳಿಂಗ ಸರ್ಪ ಹರಿಯುತ್ತಿದ್ದರೂ ಆತ ಸ್ವಲ್ಪ ಕೂಡ ಹೆದರದೇ ಕಣ್ಣುಬಿಟ್ಟುಕೊಂಡು ಮಲಗಿದ್ದ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಮತ್ತೊಂದು ಹಾವಿನ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದೇನಂದ್ರೆ, ಕೊಲೊರಾಡೋದ ಬೌಲ್ಡರ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ಸುತ್ತಮುತ್ತ ಸರಿಯಾಗಿ ಗಮನಿಸದೇ ತನ್ನ ಆಫೀಸ್‌ ಟೇಬಲ್‌ ಹತ್ತಿರ ಬಂದು ಕುಳಿತುಕೊಂಡಿದ್ದಾನೆ. ಆದರೆ ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ದೊಡ್ಡ ಹಾವೊಂದು ಆತನನ್ನೇ ನೋಡುತ್ತಿರುವುದನ್ನು ಕಂಡು ಆತ ಶಾಕ್‌ ಆಗಿದ್ದಾನಂತೆ.ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಈ ಘಟನೆಯ ದೃಶ್ಯವನ್ನು ಖ್ಯಾತ ಇನ್‍ಸ್ಟಾಗ್ರಾಮರ್ @miraclemancash ಹಂಚಿಕೊಂಡಿದ್ದು, ಆತ ಹಾವು ತನ್ನ ಟೇಬಲ್‍ ಕೆಳಗೆ ಇದ್ದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಆ ಹಾವು ಸುಮಾರು 8 ಅಡಿ ಉದ್ದವಿದೆಯಂತೆ! ಹಾವನ್ನು ನೋಡಿ ಆತ ಅದು ಅತ್ಯಂತ ವಿಷಕಾರಿ ಹಾವು ರಾಟಲ್‍ಸ್ನೇಕ್ ಎಂದು ಭಯಪಟ್ಟನಂತೆ. ಆದರೆ ಅದು ಬುಲ್ ಸ್ನೇಕಂತೆ ಹಾಗೇ ಇದನ್ನು ಗೋಫರ್ ಸ್ನೇಕ್ ಎಂದು ಕೂಡ ಕರೆಯುತ್ತಾರೆ, ಇದು ವಿಷಕಾರಿಯಲ್ಲ. ಆ ವ್ಯಕ್ತಿ ಹಾವು ಹೊರಗೆ ಹುಲ್ಲಿನೊಳಗೆ ಹೋಗುವುದನ್ನು ನಿಧಾನವಾಗಿ ವಿಡಿಯೊ ರೆಕಾರ್ಡ್ ಮಾಡಿದ್ದಾನೆ.

ಹಾವಿನ ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ಕೂಡಲೇ ವೈರಲ್ ಆಗಿ, 100,000 ಕ್ಕೂ ಹೆಚ್ಚು ವ್ಯೂವ್ಸ್ ಮತ್ತು ಕಾಮೆಂಟ್‍ಗಳನ್ನು ಪಡೆದಿದೆ. ಕೆಲವು ನೆಟ್ಟಿಗರು ಆತನಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರೆ, ಇತರರು ಹಾವಿನ ಲುಕ್‌ ಅನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ ಹಾವಿಗೆ ಹಾನಿ ಮಾಡದಿದ್ದಕ್ಕಾಗಿ ಆ ವ್ಯಕ್ತಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮದುವೆ ಮನೆಗೆ ಬಂದ ಈ ಅನಿರೀಕ್ಷಿತ ಅತಿಥಿ ಕಂಡು ಜನ ಫುಲ್‌ ಶಾಕ್‌! ವಿಡಿಯೊ ವೈರಲ್

ಇತ್ತೀಚೆಗಷ್ಟೇ ಹಾಸಿಗೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ಎಚ್ಚರದಲ್ಲಿರುವಾಗಲೇ ಆತನ ಮೈಮೇಲೆ ಕಾಳಿಂಗ ಸರ್ಪ ಹರಿದುಕೊಂಡು ಹೋಗಿದೆ. ಮೈ ಮೇಲೆ ಹಾವು ಹರಿಯುತ್ತಿರುವುದು ಆತನಿಗೆ ಗೊತ್ತಿದ್ದರೂ ಕೂಡ ಆತ ಸುಮ್ಮನೇ ಮಲಗಿಯೇ ಇದ್ದಾನಂತೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವಿಷಕಾರಿ ಕಾಳಿಂಗ ಸರ್ಪ ಮೈ ಮೇಲೆ ಇದ್ದರೂ ಆತ ಏನೂ ಕೂಡ ಮಾಡದೇ ಸುಮ್ಮನೇ ಮಲಗಿರುವುದನ್ನು ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಉತ್ತರಾಖಂಡದಲ್ಲಿ ಈ ಘಟನೆ ನಡೆದಿದೆಯಂತೆ. ಆದರೆ ಇದು ನೈಜ ಘಟನೆಯೇ ಎಂಬುದು ತಿಳಿದುಬಂದಿಲ್ಲ.