ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ನೀರಿನಲ್ಲಿ ಒಬ್ಬಾತ ಈಜುತ್ತಿದ್ದರೆ, ಮತ್ತೊಬ್ಬ ಮೂತ್ರ ವಿಸರ್ಜಿಸಿದ! ಇಲ್ಲಿದೆ ವಿಡಿಯೊ

Man Urinate: ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿ ತಾಣವೊಂದರ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಹೊಳೆಯಲ್ಲಿ ಈಜುತ್ತಿದ್ದರೆ, ಕೂಗಳತೆ ದೂರದಲ್ಲಿ ಮತ್ತೊಬ್ಬ ವ್ಯಕ್ತಿ ಅದೇ ನೀರಿನಲ್ಲಿ ಮೂತ್ರ ವಿಸರ್ಜಿಸಿದ್ದಾನೆ. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ನೀರಿನ ಮೂಲಗಳನ್ನು ಕಲ್ಮಶ ಮಾಡುವುದು ಎಷ್ಟು ಸರಿ? ಎಂಬ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ವ್ಯಕ್ತಿಯೊಬ್ಬ ಈಜು ಹೊಡೆಯುತ್ತಿದ್ದರೆ... ಈ ಕಿಡಿಗೇಡಿ ಮಾಡಿದ್ದೇನು ಗೊತ್ತಾ?

Priyanka P Priyanka P Aug 7, 2025 11:57 AM

ಲೋನಾವಾಲಾ: ಭಾರತದಲ್ಲಿ ರಸ್ತೆ ಸರಿ ಇಲ್ಲ, ಸ್ವಚ್ಛತೆಯಿಲ್ಲ, ಜನರು ಎಲ್ಲೆಂದರಲ್ಲಿ ಕಸಗಳನ್ನು ಎಸೆಯುತ್ತಾರೆ ಅಥವಾ ಉಗುಳುತ್ತಾರೆ ಇದಕ್ಕೆಲ್ಲಾ ರಾಜಕಾರಣಿಗಳೇ ಕಾರಣ ಎಂಬಂತಹ ಮಾತುಗಳನ್ನು ಕೇಳಿರಬಹುದು. ನಾವು ಎಷ್ಟೇ ಅಭಿವೃದ್ಧಿ ಹೊಂದಿದರೂ ಮನಸ್ಸಿನಲ್ಲಿ ಕಲ್ಮಶವಿದ್ದರೆ ಅದನ್ನು ಸರಿ ಮಾಡುವುದು ಅಸಾಧ್ಯ. ಇದಕ್ಕೆಲ್ಲಾ ವ್ಯವಸ್ಥೆಯನ್ನು ದೂರುವುದು ಸರಿಯಲ್ಲ. ಮೊದಲು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನಾವು ಚೆನ್ನಾಗಿ ಇಟ್ಟುಕೊಂಡರೆ ಎಲ್ಲವೂ ಸರಿಯಾಗುತ್ತದೆ. ಈ ಮಾತು ಯಾಕೆ ಬಂತು ಅಂದರೆ, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊ(Viral Video) ನೋಡಿದ್ರೆ ಖಂಡಿತಾ ನಿಮಗೆ ಅಸಹ್ಯವುಂಟಾಗುತ್ತದೆ.

ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿ ತಾಣವೊಂದರ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಹೊಳೆಯಲ್ಲಿ ಈಜುತ್ತಿದ್ದರೆ, ಕೂಗಳತೆ ದೂರದಲ್ಲಿ ಮತ್ತೊಬ್ಬ ವ್ಯಕ್ತಿ ಅದೇ ನೀರಿನಲ್ಲಿ ಮೂತ್ರ ವಿಸರ್ಜಿಸಿದ್ದಾನೆ. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ರೀತಿಯ ಪ್ರಕೃತಿ ತಾಣಗಳು ಶಾಂತಿ ಮತ್ತು ವಿಶ್ರಾಂತಿಗೆ ಸೂಕ್ತವಾದ ಸ್ಥಳಗಳೆಂದು ಪರಿಗಣಿಸಲ್ಪಟ್ಟಿದ್ದರೂ, ಕೆಲವರು ಅದನ್ನು ಗಲೀಜು ಮಾಡುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ತೆರೆದ ನೀರಿನ ಮೂಲಗಳನ್ನು ಕಲ್ಮಶ ಮಾಡುವುದು ಎಷ್ಟು ಸರಿ? ಎಂಬ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಬುಷಿ ಅಣೆಕಟ್ಟಿನಲ್ಲಿ ಕ್ಯಾಮರಾದಲ್ಲಿ ಸೆರೆಯಾದ ಆಘಾತಕಾರಿ ಕ್ಷಣ

ಲೋನಾವಾಲದಲ್ಲಿರುವ ಬುಷಿ ಅಣೆಕಟ್ಟು ಮಳೆಗಾಲದಲ್ಲಿ ಪ್ರಸಿದ್ಧ ತಾಣವಾಗಿದೆ. ಪ್ರತಿ ವರ್ಷ, ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನೀರಿನ ತೊರೆಗಳು, ಧೋ ಎಂದು ಸುರಿಯುವ ಮಳೆ, ಹಚ್ಚ ಹಸರಿನಿ ಪ್ರಕೃತಿಯ ರಮಣೀಯ ನೋಟಗಳನ್ನು ಇಲ್ಲಿ ಆನಂದಿಸುತ್ತಾರೆ. ಆದರೆ, ಇತ್ತೀಚೆಗೆ ಈ ಸ್ಥಳದಲ್ಲಿ ಚಿತ್ರೀಕರಿಸಲಾದ ವಿಡಿಯೊ ನೈರ್ಮಲ್ಯ ಮತ್ತು ಸಾರ್ವಜನಿಕ ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಅಣೆಕಟ್ಟಿನ ಮೆಟ್ಟಿಲುಗಳ ಬಳಿ ಇರುವ ಕಿರಿದಾದ ಹೊಳೆಯಲ್ಲಿ ವ್ಯಕ್ತಿಯೊಬ್ಬ ನೀರಿನಲ್ಲಿ ಈಜುತ್ತಾ ತನ್ನನ್ನು ತಾನು ಮೈಮರೆತಿದ್ದಾನೆ. ಇನ್ನೊಂದೆಡೆ ಮತ್ತೊಬ್ಬ ವ್ಯಕ್ತಿ ಅದೇ ನೀರಿನ ಹೊಳೆಯಲ್ಲಿ ಮೂತ್ರ ವಿಸರ್ಜಿಸಿದ್ದಾನೆ. ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೇಳೆ ವಿಡಿಯೊ ಮಾಡುತ್ತಿರುವ ವ್ಯಕ್ತಿ ಹೊಳೆಯಲ್ಲಿ ಈಜುತ್ತಿರುವ ವ್ಯಕ್ತಿಗೆ ದಡಕ್ಕೆ ಬರುವಂತೆ ಎಚ್ಚರಿಸಿದ್ದಾನೆ.

ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. “ಶೂನ್ಯ ನಾಗರಿಕ ಪ್ರಜ್ಞೆ! ಒಬ್ಬ ವ್ಯಕ್ತಿ ನೀರಿನಲ್ಲಿ ಸ್ನಾನ ಮಾಡುತ್ತಾ ಆನಂದಿಸುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ ಹೊಳೆಯಲ್ಲಿ ಮೂತ್ರ ವಿಸರ್ಜಿಸುತ್ತಿದ್ದಾನೆ. ಇದೇ ಕಾರಣಕ್ಕೆ ನಾನು ಸ್ವಿಮ್ಮಿಂಗ್ ಪೂಲ್‌ಗಳು ಮತ್ತು ಹೊಳೆಗಳಿಗೆ ಹೋಗುವುದನ್ನು ನಿಲ್ಲಿಸಿದ್ದೇನೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:



ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಈ ವಿಡಿಯೊ ಭಾರಿ ವೈರಲ್ ಆಗಿದೆ. ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಬಳಕೆದಾರರಿಂದ ಕಾಮೆಂಟ್‌ಗಳು ಹರಿದು ಬಂದಿವೆ. ಜನಪ್ರಿಯ ಪ್ರವಾಸಿ ತಾಣದಲ್ಲಿ ಇಂತಹ ಅಸಹ್ಯಕರ ದೃಶ್ಯದ ಬಗ್ಗೆ ನೆಟ್ಟಿಗರು ಆಘಾತ ಮತ್ತು ಹತಾಶೆಯನ್ನು ವ್ಯಕ್ತಪಡಿಸಿದರು. ನಾಗರಿಕ ಪ್ರಜ್ಞೆ ಯೋಚಿಸಲಾಗದ ಮಟ್ಟಕ್ಕೆ ಕುಸಿದಿದೆ ಎಂದು ಒಬ್ಬ ಬಳಕೆದಾರರೊಬ್ಬರು ಬೇಸರ ಹೊರಹಾಕಿದರು.

ಈ ಸುದ್ದಿಯನ್ನೂ ಓದಿ: Viral Video: ವರದಕ್ಷಿಣೆಗಾಗಿ ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ; ವೈರಲ್‌ ಆಯ್ತು ಪತಿಯ ಕ್ರೌರ್ಯ

ಬಾಹ್ಯ ನೀರಿನ ಮೂಲಗಳನ್ನು ಅವು ಎಷ್ಟೇ ಸ್ವಚ್ಛವಾಗಿ ಕಂಡರೂ ಎಂದಿಗೂ ನಂಬಬೇಡಿ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಪ್ರವಾಸಿಗರ ಮುಂದೆ ವ್ಯಕ್ತಿ ಈ ರೀತಿ ಬಹಿರಂಗವಾಗಿ ಮೂತ್ರವಿಸರ್ಜಿಸಿದ್ದಕ್ಕೆ ಅನೇಕರು ಟೀಕಿಸಿದರು. ಅಷ್ಟೊಂದು ಜನರಿರುವಾಗ, ವಿಶೇಷವಾಗಿ ಮಹಿಳೆಯರು ಇರುವಾಗ ಈ ರೀತಿಯ ವರ್ತನೆ ತೋರುವುದೇ? ಛಿ, ಅಸಹ್ಯಕರ ಎಂದು ಕಾಮೆಂಟ್ ಮಾಡಿದ್ದಾರೆ.

.ಇಂತಹ ವ್ಯಕ್ತಿಗಳು ವಿದೇಶಗಳಲ್ಲಿಯೂ ಇದೇ ರೀತಿಯ ಅಸಹ್ಯಕರ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಆ ದೇಶಗಳ ನಾಗರಿಕರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಜನಾಂಗೀಯತೆ ಎಂದು ಆರೋಪಿಸುತ್ತಾರೆ. ಈ ಡಿಜಿಟಲ್ ಯುಗದಲ್ಲಿ, ಈ ವಿಡಿಯೊಗಳನ್ನು ಪ್ರಪಂಚದಾದ್ಯಂತ ವೀಕ್ಷಿಸಲಾಗುತ್ತದೆ. ಇದು ನಮ್ಮ ಖ್ಯಾತಿಯನ್ನು ಮತ್ತಷ್ಟು ಹಾಳು ಮಾಡುತ್ತದೆ ಬಳಕೆದಾರರೊಬ್ಬರು ಹೇಳಿದ್ದಾರೆ.