Viral Video: ಮದುವೆ ಮನೆಗೆ ಬಂದ ಈ ಅನಿರೀಕ್ಷಿತ ಅತಿಥಿ ಕಂಡು ಜನ ಫುಲ್ ಶಾಕ್! ವಿಡಿಯೊ ವೈರಲ್
ದೈತ್ಯಾಕಾರದ ಖಡ್ಗಮೃಗವೊಂದು ಮದುವೆಯ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದು, ಈ ಅನಿರೀಕ್ಷಿತ ಅತಿಥಿಯನ್ನು ಕಂಡು ಅಲ್ಲಿದ್ದ ಜನರು ಶಾಕ್ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಅನೇಕರು ಈ ಘಟನೆಯ ಬಗ್ಗೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.


ಕಠ್ಮಂಡು: ಇತ್ತೀಚೆಗೆ ಹಾಸನದಲ್ಲಿ ಮದುವೆ ಮನೆಗೆ ಮಂಗವೊಂದು ನುಗ್ಗಿ ವರನಿಗೆ ಕಾಟ ಕೊಟ್ಟಿದ್ದು ಅಲ್ಲದೇ, ಅಲ್ಲಿದ್ದ 8 ಮಂದಿ ಅತಿಥಿಗಳಿಗೂ ಕಚ್ಚಿದ ಘಟನೆಯೊಂದು ನಡೆದಿತ್ತು. ಇದೀಗ, ನೇಪಾಳ(Nepal)ದ ಪಟ್ಟಣವೊಂದರಲ್ಲಿ ದೈತ್ಯಾಕಾರದ ಖಡ್ಗಮೃಗ(Rhinoceros)ವೊಂದು ಮದುವೆಮನೆಗೆ ಭೇಟಿ ನೀಡಿದೆ.ಈ ಅನಿರೀಕ್ಷಿತ ಅತಿಥಿಯನ್ನು ಕಂಡು ಅಲ್ಲಿದ್ದ ಜನರು ಹೌಹಾರಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕ ಜನರು ಈ ಘಟನೆಯ ಬಗ್ಗೆ ತಮಾಷೆ ಮಾಡಿದ್ದಾರೆ. ಈ ಖಡ್ಗಮೃಗ ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದಿಂದ ಪಟ್ಟಣಕ್ಕೆ ಬಂದಿದೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಿನಿಂದ ಈ ವಿಡಿಯೊ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ. ಮತ್ತು ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಸಾಕಷ್ಟು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರೊಬ್ಬರು ಇದನ್ನು ವೈಲ್ಡ್ ಕಾರ್ಡ್ ಎಂಟ್ರಿ ಅಂತ ಕರೆದಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ, "ಅದು ಎಲ್ಲಾ ಕೆಲಸ ಸರಿಯಾಗಿದೆಯೇ ಎಂದು ಚೆಕ್ ಮಾಡುತ್ತಿದೆ" ಎಂದು ಬರೆದಿದ್ದಾರೆ ಮತ್ತು ಇನ್ನೊಬ್ಬರು ಕಾಮೆಂಟ್ ಮಾಡಿ, "ವರ ಅರಣ್ಯ ಇಲಾಖೆಯಿಂದ ಬಂದಿರಬೇಕು" ಎಂದು ತಮಾಷೆ ಮಾಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಚಿಟ್ವಾನ್ ರಾಷ್ಟ್ರೀಯ ಉದ್ಯಾನವನವು 750 ಚದರ ಕಿ.ಮೀ ವಿಸ್ತೀರ್ಣದ ಬಫರ್ ಝೋನ್‍ನಿಂದ ಆವೃತವಾಗಿದ್ದು, ಇದರ ಸುತ್ತಮುತ್ತಲೂ ಸುಮಾರು 45,000 ಕುಟುಂಬಗಳು ವಾಸಿಸುತ್ತವೆ. ಈ ಪ್ರದೇಶದಾದ್ಯಂತದ ನಗರಗಳಲ್ಲಿ, ಖಡ್ಗಮೃಗಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವುದು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್ ಬಳಿ ವಿಶ್ರಾಂತಿ ಪಡೆಯುವುದು ಅಥವಾ ಜನರ ತೋಟಗಳಲ್ಲಿ ಹೆಚ್ಚಾಗಿ ಕಾಣಬಹುದಂತೆ.
ಈ ಸುದ್ದಿಯನ್ನೂ ಓದಿ:Viral Video: ಅಬ್ಬಬ್ಬಾ..! ಇವನ ಬಂಗಾರದ ಮೋಹ ನೋಡಿದ್ರೆ ನೀವು ಕೂಡ ಶಾಕ್ ಆಗ್ತೀರಿ
1973ರಲ್ಲಿ ಈ ಉದ್ಯಾನವನವನ್ನು ಸ್ಥಾಪಿಸಿದಾಗ ಸುಮಾರು 100 ದೈತ್ಯಾಕಾರದ ಒಂದು ಕೊಂಬಿನ ಘೇಂಡಾಮೃಗಗಳು ಇದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂದು, ಚಿಟ್ವಾನ್‌ನಲ್ಲಿ ಮಾತ್ರ ಸುಮಾರು 700 ಘೇಂಡಾಮೃಗಗಳು ಇವೆಯಂತೆ. ಇದು ನೇಪಾಳದ ಒಟ್ಟು ಘೇಂಡಾಮೃಗ ಜನಸಂಖ್ಯೆಯ 90% ರಷ್ಟಿದೆ. ಇದರೊಂದಿಗೆ, ಬಫರ್ ವಲಯದಲ್ಲಿ ಜನಸಂಖ್ಯೆಯೂ ಹೆಚ್ಚಾಗಿದೆ, ಈಗ ಸರಿ ಸುಮಾರು ಮೂರು ಲಕ್ಷ ಜನರು ಅಲ್ಲಿ ವಾಸಿಸುತ್ತಿದ್ದಾರಂತೆ.