ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಾವಿನ ಹಣ್ಣು ತುಂಬಿದ್ದ ಟ್ರಕ್ ಪಲ್ಟಿ; ಎದ್ನೋ ಬಿದ್ನೋ ಅಂತಾ ಓಡಿ ಬಂದ ಜನ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿ

ಡೆಹ್ರಾಡೂನ್‍ನ ರಿಸ್ಪಾನಾ ಸೇತುವೆಯ ಮೇಲೆ ಮಾವಿನ ಹಣ್ಣುಗಳನ್ನು ತುಂಬಿದ್ದ ಟ್ರಕ್ ಪಲ್ಟಿಯಾಗಿದೆ. ಆ ವೇಳೆ ಜನರು ಗಾಯಗೊಂಡ ಚಾಲಕನಿಗೆ ಸಹಾಯ ಮಾಡುವ ಬದಲು ಮಾವಿನ ಹಣ್ಣುಗಳನ್ನು ಲೂಟಿ ಮಾಡುವಲ್ಲಿ ನಿರತರಾಗಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಮಾವಿನ ಹಣ್ಣಿದ್ದ ಟ್ರಕ್ ಪಲ್ಟಿ; ಮುಂದೇನಾಯ್ತು? ವಿಡಿಯೊ ನೋಡಿ

Profile pavithra Jul 18, 2025 4:28 PM

ಡೆಹ್ರಾಡೂನ್: ಇತ್ತೀಚೆಗೆ ಮೀನು ತುಂಬಿದ್ದ ಗಾಡಿಯೊಂದು ಮಗುಚಿ ಬಿದ್ದಿದ್ದು, ಜನರು ಅವನಿಗೆ ಸಹಾಯ ಮಾಡುವ ಬದಲು ಮೀನುಗಳನ್ನು ಹೆಕ್ಕಲು ಮುಗಿಬಿದ್ದ ಘಟನೆಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಡೆಹ್ರಾಡೂನ್‍ನ ರಿಸ್ಪಾನಾ ಸೇತುವೆಯ ಮೇಲೆ ಮಾವಿನ ಹಣ್ಣುಗಳನ್ನು ತುಂಬಿದ್ದ ಟ್ರಕ್ ಪಲ್ಟಿಯಾದ ಘಟನೆಯೊಂದು ನಡೆದಿದೆ. ಸುಮಾರು 600 ಬಾಕ್ಸ್‌ಗಳಷ್ಟು ಮಾವಿನ ಹಣ್ಣುಗಳನ್ನು ಟ್ರಕ್‌ನಲ್ಲಿ ತುಂಬಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಅಪಘಾತದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಆದರೆ ಮಾವಿನ ಹಣ್ಣುಗಳನ್ನು ಲೂಟಿ ಮಾಡಲು ಜನರು ಪಲ್ಟಿಯಾದ ಟ್ರಕ್ ಮೇಲೆ ನುಗ್ಗಿದ್ದಾರೆ. ಈ ಘಟನೆಯನ್ನು ಸೆರೆಹಿಡಿಯಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಸ್ಥಳೀಯರ ಅನಾಗರಿಕ ವರ್ತನೆಯನ್ನು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ,ಟ್ರಕ್ ಪಲ್ಟಿಯಾದ ತಕ್ಷಣ, ಮಾವಿನ ಹಣ್ಣುಗಳು ರಸ್ತೆಯಲ್ಲಿ ಹರಡಿಕೊಂಡಿವೆ. ನಂತರ, ಸ್ಥಳೀಯ ಜನರು ರಸ್ತೆಯಲ್ಲಿ ಬಿದ್ದ ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳಲು ಸ್ಥಳದಲ್ಲಿ ಜಮಾಯಿಸಿದರು. ಜನರು ಸಾಧ್ಯವಾದಷ್ಟು ಮಾವಿನ ಹಣ್ಣುಗಳನ್ನು ತುಂಬುತ್ತಿರುವುದು ಕಂಡುಬಂದಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಈಗಾಗಲೇ ಸಾವಿರಾರು ವ್ಯೂವ್ಸ್ ಪಡೆದುಕೊಂಡಿದೆ. ಇಲ್ಲಿ ಜನರು ಗಾಯಗೊಂಡ ಚಾಲಕ ಅಥವಾ ಕಂಡಕ್ಟರ್ ಕಡೆಗೆ ಗಮನ ಹರಿಸಲಿಲ್ಲ. ಬದಲಾಗಿ ಮಾವಿನ ಹಣ‍್ಣನ್ನು ತುಂಬಿಸಿಕೊಳ್ಳುವುದರಲ್ಲೆ ಮಗ್ನರಾಗಿದ್ದಾರೆ. ಹಾಗೂ ಕೆಲವರು ವಿಡಿಯೊಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಹಾಗಾಗಿ ಅನೇಕರು ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, "ಜನರಲ್ಲಿ ಪ್ರಾಮಾಣಿಕತೆ ಸಂಪೂರ್ಣವಾಗಿ ಕಣ್ಮರೆಯಾಗಿರುವಂತೆ ತೋರುತ್ತಿದೆ. ಇಲ್ಲಿ ಜನರು ಬಲಿಪಶುಗಳಿಗೆ ಸಹಾಯ ಮಾಡುವ ಬದಲು ಅವರ ವಸ್ತುಗಳನ್ನು ಲೂಟಿ ಮಾಡಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.

"ಈ ಜೀವನದಲ್ಲಿ ಇತರರಿಗೆ ಸಹಾಯ ಮಾಡುವ ಬದಲು ವಿಡಿಯೊಗಳನ್ನು ಮಾಡುವುದು ಹೊಸ ಪ್ರವೃತ್ತಿಯಾಗಿದೆ. ಅಪಘಾತಗಳು ಈಗ ಮನರಂಜನೆಯಾಗಿದೆ. ಮತ್ತು ಗಾಯಗೊಂಡ ವ್ಯಕ್ತಿ ಕೇವಲ ಒಂದು ದೃಶ್ಯ. ಮಾವಿನಹಣ್ಣು ಸಿಹಿಯಾಗಿತ್ತು, ಆದರೆ ಸಮಾಜದ ಪ್ರತಿಕ್ರಿಯೆ ಕಹಿಯಾಗಿದೆ"ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕೋಲ್ಡ್‌ಪ್ಲೇ ಕಾರ್ಯಕ್ರಮದಲ್ಲಿ ಖ್ಯಾತ ಕಂಪನಿಯ CEO ಮತ್ತು HR ಲವ್ವಿ-ಡವ್ವಿ ಬಟಾ ಬಯಲು- ವಿಡಿಯೊ ಫುಲ್‌ ವೈರಲ್‌

ಮಾವಿನ ಹಣ್ಣಿಗಾಗಿ ಜನರು ಮುಗಿಬಿದ್ದಿದ್ದು ಇದೇ ಮೊದಲಲ್ಲ. ಈ ಹಿಂದೆ ಲಕ್ನೋದ ಮಾವಿನ ಉತ್ಸವದಲ್ಲಿ ಜನರು ಸಾಧ್ಯವಾದಷ್ಟು ಮಾವಿನ ಹಣ್ಣುಗಳನ್ನು ದೋಚಲು ಬಂದಿದ್ದರು. ಜುಲೈ 4 ರಿಂದ 6 ರವರೆಗೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮಾವಿನ ಹಬ್ಬವನ್ನು ಆಯೋಜಿಸಲಾಗಿತ್ತು. ಇದನ್ನು ರಾಜ್ಯದ ಹಲವಾರು ಅಧಿಕಾರಿಗಳು ಆಯೋಜಿಸಿದ್ದರು. ಜುಲೈ 6 ರಂದು ಉತ್ಸವ ಮುಗಿದ ತಕ್ಷಣ, ಸಂದರ್ಶಕರು ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಅನೇಕರು ತಮ್ಮ ದುಪ್ಪಟ್ಟುಗಳು, ಸೀರೆಗಳು ಮತ್ತು ಜೇಬಿನಲ್ಲಿ ಮಾವಿನ ಹಣ್ಣುಗಳನ್ನು ತುಂಬಿಸಿಕೊಂಡಿದ್ದಾರೆ.