Viral Video: ರೈಲ್ವೇ ಸಿಬ್ಬಂದಿ ಮತ್ತು ಪ್ರಯಾಣಿಕನ ನಡುವೆ ಭಾರೀ ಜಗಳ- ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಗೀತಾಂಜಲಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ರೈಲ್ವೆ ಪ್ರಯಾಣಿಕನೊಬ್ಬ ನಿಗದಿಪಡಿಸಿದ ತೂಕಕ್ಕಿಂತ ಕಡಿಮೆ ಆಹಾರವನ್ನು ನೀಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕ್ಯಾಂಟೀನ್ ಸಿಬ್ಬಂದಿ ಅವನನ್ನು ಥಳಿಸಿ ಒತ್ತೆಯಾಳಾಗಿ ಇರಿಸಿಕೊಂಡ ಆಘಾತಕಾರಿ ಘಟನೆ ಇತ್ತೀಚೆಗೆ ನಡೆದಿದೆ. ಅವರ ವಾಗ್ವಾದದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.


ಮುಂಬೈ: ಗೀತಾಂಜಲಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ರೈಲ್ವೆ ಪ್ರಯಾಣಿಕನೊಬ್ಬ ನಿಗದಿಪಡಿಸಿದ ತೂಕಕ್ಕಿಂತ ಕಡಿಮೆ ಆಹಾರವನ್ನು ನೀಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕ್ಯಾಂಟೀನ್ ಸಿಬ್ಬಂದಿ ಅವನನ್ನು ಥಳಿಸಿದ ಆಘಾತಕಾರಿ ಘಟನೆ ನಡೆದಿದೆ. ಐಆರ್‌ಸಿಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ವಾಗ್ವಾದದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡು ವೈರಲ್(Viral Video)ಆಗಿದೆ. ಅಮರಾವತಿಯ ಬದ್ನೇರಾ ಬಳಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ್ ರೈಲ್ವೆ ಪೊಲೀಸರು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಕ್ಯಾಂಟೀನ್ ಸಿಬ್ಬಂದಿ ಬಳಿ ಪ್ರಯಾಣಿಕ ಬರ್ಮನ್ ಆಹಾರದ ತೂಕದ ವಿಷಯವಾಗಿ ವಾಗ್ವಾದ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ.ಅದು ಅಲ್ಲದೇ, ಈ ಸಂದರ್ಭದಲ್ಲಿ ಸಿಬ್ಬಂದಿಗಳು ಬರ್ಮನ್ ಫೋನ್ ಅನ್ನು ಕಸಿದುಕೊಂಡಿದ್ದಾರಂತೆ.
ವಿಡಿಯೊ ತುಣುಕು ಇಲ್ಲಿದೆ ನೋಡಿ...
"हम शिकायत करने गए, उन्होंने हमें धमकाया"
— News24 (@news24tvchannel) April 11, 2025
◆ गीतांजलि एक्सप्रेस में सामाजिक कार्यकर्ता को स्टाफ ने बनाया बंधक, वीडियो वायरल
◆ सत्यजीत बर्मन ने IRCTC के 7 कर्मचारियों पर दर्ज कराया केस #ViralStory #IRCTC #IndiaNews pic.twitter.com/GAXOaPdKDn
ವರದಿ ಪ್ರಕಾರ, ಸತ್ಯಜಿತ್ ಬರ್ಮನ್ ಕೆಲಸದ ನಿಮಿತ್ತ ಕೋಲ್ಕತ್ತಾಗೆ ತೆರಳಿದ್ದಾಗ ಕೆಲವು ಪ್ರಯಾಣಿಕರು ಪ್ಯಾಂಟ್ರಿ ಕಾರ್ ಸಿಬ್ಬಂದಿಯೊಂದಿಗೆ ಜಗಳವಾಡುವುದನ್ನು ಬರ್ಮನ್ ಕೇಳಿಸಿಕೊಂಡಿದ್ದಾನೆ.ಜಗಳಕ್ಕೆ ಕಾರಣವೇನು ಎಂದು ಅವರ ಬಳಿ ಬರ್ಮನ್ ಕೇಳಿದಾಗ ಪ್ಯಾಂಟ್ರಿ ಕಾರ್ ಐಆರ್‌ಸಿಟಿಸಿ ನಿಗದಿಪಡಿಸಿದ ತೂಕಕ್ಕಿಂತ ಕಡಿಮೆ ಆಹಾರವನ್ನು ನೀಡುತ್ತಿದೆ ಮತ್ತು ಅದಕ್ಕಾಗಿ ಹೆಚ್ಚಿನ ಹಣವನ್ನು ಕೇಳುತ್ತಿದೆ ಎಂದು ಮೂವರು ಪ್ರಯಾಣಿಕರು ಆರೋಪಿಸಿದ್ದಾರೆ.
ಬರ್ಮನ್ ಈ ಬಗ್ಗೆ ಪ್ರಶ್ನಿಸಿದಾಗ, ಸಿಬ್ಬಂದಿ ಆಹಾರವನ್ನು ತೂಕ ಮಾಡಲು ಹೇಳಿದ್ದಾನೆ. ಬರ್ಮನ್ ಆಹಾರ ಪ್ಯಾಕೆಟ್‍ಗಳನ್ನು ತೂಕ ಮಾಡಲು ಮೂವರು ಪ್ರಯಾಣಿಕರೊಂದಿಗೆ ಪ್ಯಾಂಟ್ರಿ ಕಾರ್‌ಗೆ ಹೋಗಿದ್ದಾನೆ. ಬರ್ಮನ್ ಮತ್ತು ಮೂವರು ಪ್ರಯಾಣಿಕರು ಪ್ಯಾಂಟ್ರಿ ಕಾರ್‌ಗೆ ಹೋದಾಗ ಮ್ಯಾನೇಜರ್ ಪ್ರಯಾಣಿಕರನ್ನು ಹಿಡಿದುಕೊಂಡು ಅವರ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದಾನೆ ಹಾಗೇ ಅವರಿಗೆ ಹಿಗ್ಗಾಮುಗ್ಗಾ ಥಳಿಸಿ ಬಲವಂತವಾಗಿ ಅಲ್ಲಿ ಕುಳಿತುಕೊಳ್ಳುವಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.ಅಲ್ಲಿಂದ ತಪ್ಪಿಸಿಕೊಂಡ ಪ್ರಯಾಣಿಕರೊಬ್ಬರು ಆರ್‌ಪಿಎಫ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕಚೋರಿ, ಪೂರಿಗಳ ಮೇಲೆ ಓಡಾಡಿದ ಇಲಿ; ಏನಿದರ ಹಿಂದಿನ ರಹಸ್ಯ?
ಪೊಲೀಸರು ಬರ್ಮನ್ ಅನ್ನು ರಕ್ಷಿಸಿದ್ದಾರೆ. ಘಟನೆಯ ಬಗ್ಗೆ ಬರ್ಮನ್ ಸ್ಥಳೀಯ ಕಲ್ಯಾಣ್ ಜಿಆರ್‌ಪಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿ ಎಲ್ಲಾ ಏಳು ಪ್ಯಾಂಟ್ರಿ ಉದ್ಯೋಗಿಗಳ ವಿರುದ್ಧ ದೂರು ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸತ್ಯಜಿತ್ ಬರ್ಮನ್ ಅವನ ದೂರಿನ ಆಧಾರದ ಮೇಲೆ, ಕಲ್ಯಾಣ್ ಜಿಆರ್‌ಪಿ ರಂಜೀತ್ ಬೆಹೆರಾ, ಸುಮನ್ ಕರಣ್ ಮತ್ತು ಇತರ ಐದು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಒಟ್ಟು ಏಳು ಐಆರ್‌ಸಿಟಿಸಿ ಸಿಬ್ಬಂದಿ ವಿರುದ್ಧ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.