ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಚೋರಿ, ಪೂರಿಗಳ ಮೇಲೆ ಓಡಾಡಿದ ಇಲಿ; ಏನಿದರ ಹಿಂದಿನ ರಹಸ್ಯ?

ರಸ್ತೆ ಬದಿಯ ಫುಡ್‌ ಶಾಪ್‌ನಲ್ಲಿ ಕರಿದ ಆಹಾರ ಪದಾರ್ಥಗಳ ಮೇಲೆ ಇಲಿಗಳು ತೆವಳುತ್ತಿರುವ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊ ನೋಡಿದ ಹಲವರು ನೆಟ್ಟಿಗರು ನೈರ್ಮಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಡಿಯೊ ಎಐ ಬಳಸಿ ರಚಿಸಲಾಗಿದೆ ಎಂದು ತಿಳಿದು ಹಲವರು ನಿಟ್ಟುಸಿರು ಬಿಟ್ಟಿದ್ದಾರೆ.

ಆಹಾರ ಪದಾರ್ಥಗಳ ಮೇಲೆ ಇಲಿಯ ಓಡಾಟ; ನೆಟ್ಟಿಗರು ಹೇಳಿದ್ದೇನು?

Profile pavithra Apr 12, 2025 5:34 PM

ರಸ್ತೆ ಬದಿಯಲ್ಲಿ ಮಾರುವಂತಹ ಆಹಾರಗಳು ಕ್ಲೀನ್‌ ಆಗಿ ಇರುವುದಿಲ್ಲ. ಅದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎಂದು ಹೆಚ್ಚಿನವರು ಹೇಳುತ್ತಾರೆ. ಅದು ಅಲ್ಲದೆ ಇತ್ತೀಚೆಗೆ ಬೇಕರಿಯೊಂದರಲ್ಲಿ ಸಿಹಿ ಖಾದ್ಯಗಳ ಮೇಲೆ ಇಲಿಯೊಂದು ಓಡಾಡಿದ ದೃಶ್ಯ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈಗ ರಸ್ತೆ ಬದಿಯ ಫುಡ್‌ ಶಾಪ್‌ನಲ್ಲಿ ಕರಿದ ಆಹಾರ ಪದಾರ್ಥಗಳ ಮೇಲೆ ಇಲಿಗಳು ತೆವಳುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಇದು ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ವಿಡಿಯೊ ನೋಡಿದ ಹಲವರು ನೆಟ್ಟಿಗರು ನೈರ್ಮಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಡಿಯೊ ಎಐ ಬಳಸಿ ರಚಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ 'ಎಐ ವಾಲಾ ಫುಡ್ಡಿ' ಎಂದು ಕರೆಯಲ್ಪಡುವ ಎಐ ಕಂಟೆಂಟ್ ಕ್ರಿಯೇಟರ್ ಪೇಜ್‍ನಲ್ಲಿ ಇದೇ ವಿಡಿಯೊ ಕಂಡುಬಂದಿದೆ. ಇದರಲ್ಲಿ ರಸ್ತೆ ಬದಿಯ ಅಂಗಡಿಯಲ್ಲಿ ಇಟ್ಟ ಕಚೋರಿ ಮತ್ತು ಪೂರಿಗಳ ಮೇಲೆ ಇಲಿಗಳು ಓಡಾಡುವುದು ಸೆರೆಯಾಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಶಾಕ್‌ ಆಗಿದ್ದಾರೆ.

ತೆರೆದ ಆಹಾರ ಪದಾರ್ಥಗಳ ಮೇಲೆ ಇಲಿ ಓಡಾಡಿದ ದೃಶ್ಯ ಇಲ್ಲಿದೆ ನೋಡಿ...



ಹಾಗಾಗಿ ಈ ವಿಡಿಯೊಗೆ ಪ್ರತಿಕ್ರಿಯಿಸಿದ ಹಲವು ನೆಟ್ಟಿಗರು ಆಹಾರವನ್ನು ತಯಾರಿಸುವ ಅನೈರ್ಮಲ್ಯ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಭಾರತದಲ್ಲಿ ನೈರ್ಮಲ್ಯ ಕಾನೂನುಬಾಹಿರ" ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ. "ಭಾರತೀಯ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಕೊನೆಗೆ ಈ ವಿಡಿಯೊದಲ್ಲಿನ ಸತ್ಯಾತ್ಯತೆಯ ಬಗ್ಗೆ ಪರಿಶೀಲಿಸಿದಾಗ ಈ ವಿಡಿಯೊ 2024ರಲ್ಲಿ ಯುಟ್ಯೂಬ್‍ನಲ್ಲಿ ಕಂಡುಬಂದಿದೆ. ಇದರಲ್ಲಿ ಯಾವುದೇ ಇಲಿಗಳ ಓಡಾಟ ಇರಲಿಲ್ಲ. ಹಾಗಾಗಿ ಇದನ್ನು ಎಐ ಬಳಸಿ ರಚಿಸಲಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಬಹುಮಹಡಿ ಕಟ್ಟಡದಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ- ಈ ವಿಡಿಯೊ ನೋಡಿದ್ರೆ ಎದೆ ಝಲ್ಲೆನ್ನುತ್ತೆ!

ಆದರೆ ಇಲಿಗಳು ಆಹಾರದ ಮೇಲೆ ಓಡಾಡುವ ನಿಜವಾದ ವಿಡಿಯೊ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿತ್ತು. ಮಧ್ಯ ಪ್ರದೇಶದ ಇಟಾರ್ಸಿ ಜಂಕ್ಷನ್ ರೈಲ್ವೆ ನಿಲ್ದಾಣದ ಸ್ಟಾಲ್‍ನಲ್ಲಿ ಇರಿಸಲಾಗಿದ್ದ ಆಹಾರದ ಮೇಲೆ ಇಲಿಗಳು ಓಡಾಡುತ್ತಾ ಅದನ್ನು ತಿನ್ನುವುದನ್ನು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗಿತ್ತು. ಇದು ರೈಲು ಪ್ರಯಾಣಿಕರಿಗೆ ನೀಡಲಾಗುವ ಆಹಾರದ ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿತ್ತು.

ವಿಡಿಯೊದಲ್ಲಿ ಐಆರ್‌ಟಿಸಿ ಸ್ಟಾಲ್‍ನಲ್ಲಿ ನೆಲದ ಮೇಲೆ ಇರಿಸಲಾದ ತಿಂಡಿಗಳು ಮತ್ತು ಕಂಟೇನರ್‌ಗಳಲ್ಲಿ ತುಂಬಿದ ತಟ್ಟೆಗಳ ಮೇಲೆ ಇಲಿಗಳು ಓಡಾಡುವ ದೃಶ್ಯ ಸೆರೆಯಾಗಿತ್ತು. ಈ ವಿಡಿಯೊ ವೈರಲ್ ಆದ ಬಳಿಕ ವಿಡಿಯೊ ಗಮನಿಸಿದ ರೈಲ್ವೆ ಅಧಿಕಾರಿಗಳು ತ್ವರಿತವಾಗಿ ಪ್ರತಿಕ್ರಿಯಿಸಿದ್ದರು. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ಪಶ್ಚಿಮ ಮಧ್ಯ ರೈಲ್ವೆಯ ಭೋಪಾಲ್ ವಿಭಾಗದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಸೇವಾ ಹ್ಯಾಂಡಲ್ ಮೂಲಕ ನೆಟ್ಟಿಗರಿಗೆ ಭರವಸೆ ನೀಡಿತ್ತು.