ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ; ಆರೋಪಿ ಭಾರತಕ್ಕೆ ಪರಾರಿಯಾಗಿರುವ ಶಂಕೆ
Indian killed in Canada: ಕೆನಡಾದಲ್ಲಿ ಭಾರತೀಯ ಮೂಲದ ಅಮನ್‌ಪ್ರೀತ್ ಸೈನಿ ಎಂಬ ಯುವತಿಯ ಹತ್ಯೆ ಆಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ಬ್ರಾಂಪ್ಟನ್ ನಿವಾಸಿ ಮನ್‌ಪ್ರೀತ್ ಸಿಂಗ್ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಆರೋಪಿ ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿ - ಆರೋಪಿ -
ಒಟ್ಟಾವಾ: ಕೆನಡಾ (Canada)ದಲ್ಲಿ ಭಾರತೀಯ ಮೂಲದ (Indian) 27 ವರ್ಷದ ಯುವತಿ ಹತ್ಯೆಯ ನಂತರ ಭಾರತೀಯ ಮೂಲದ ವ್ಯಕ್ತಿಯ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.
ನಯಾಗ್ರಾ (Niagara) ಪೊಲೀಸರ ಪ್ರಕಾರ, ಅಕ್ಟೋಬರ್ 21ರಂದು ಲಿಂಕನ್‌ನಲ್ಲಿರುವ ಒಂದು ಪಾರ್ಕ್‌ನಲ್ಲಿ ಅಮನ್‌ಪ್ರೀತ್ ಸೈನಿ (Amanpreet Saini) ಎಂಬ ಯುವತಿಯ ಶವ ಪತ್ತೆಯಾಗಿದ್ದು, ಶವದ ಮೇಲೆ ಗಂಭೀರ ಗಾಯಗಳ ಗುರುತುಗಳು ಕಂಡುಬಂದಿವೆ. ಈ ಕೊಲೆ ಪ್ರಕರಣದಲ್ಲಿ ಬ್ರಾಂಪ್ಟನ್ ನಿವಾಸಿ 27 ವರ್ಷದ ಮನ್‌ಪ್ರೀತ್ ಸಿಂಗ್ (Manpreet Singh) ಕೈವಾಡ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಬಳಿಕ ಆರೋಪಿ ದೇಶ ತೊರೆದಿರುವ ಶಂಕೆ
“ಅಮನ್‌ಪ್ರೀತ್ ಸೈನಿ ಅವರ ಶವ ಪತ್ತೆಯಾದ ಕೆಲವೇ ದಿನಗಳಲ್ಲಿ ಮನ್‌ಪ್ರೀತ್ ಸಿಂಗ್ ದೇಶ ಬಿಟ್ಟು ಪರಾರಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ" ಎಂದು ನಯಾಗರಾ ಪ್ರಾದೇಶಿಕ ಪೊಲೀಸ್ ಸೇವೆ (Niagara Regional Police Service) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನು ಓದಿ: Viral Video: ಗಡದ್ದಾಗಿ ತಿಂದು ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ಪ್ರವಾಸಿಗರು; ಬೆನ್ನಟ್ಟಿದ ಸಿಬ್ಬಂದಿ
ಯುವತಿ ಮೇಲಿನ ದಾಳಿ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಮನ್‌ಪ್ರೀತ್ ಸಿಂಗ್‌ನ ಫೋಟೊವನ್ನು ಬಿಡುಗಡೆ ಮಾಡಿದ್ದು, ಆರೋಪಿ ಎಲ್ಲಿಯಾದರೂ ಕಂಡರೆ ಕೂಡಲೇ 911ಗೆ ಕರೆ ಮಾಡುವ ಮೂಲಕ ಮಾಹಿತಿ ನೀಡಿ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪಂಜಾಬ್ ಮೂಲದ ಮನ್‌ಪ್ರೀತ್ ಸಿಂಗ್ ಕುಟುಂಬವು ಕೂಡ ಭಾರತಕ್ಕೆ ಪಲಾಯನ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕೆನಡಾದ ಭದ್ರತಾ ಸಂಸ್ಥೆಗಳು ಈಗ ಭಾರತದ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಆರೋಪಿ ಮನ್‌ಪ್ರೀತ್ ಸಿಂಗ್ ಬಂಧನಕ್ಕೆ ಸಹಕಾರ ಕೋರಿವೆ ಎಂದು ಮೂಲಗಳು ತಿಳಿಸಿವೆ.
ಮೃತ ಅಮನ್‌ಪ್ರೀತ್ ಸೈನಿ ಮೂಲತಃ ಪಂಜಾಬ್‌ನ ಸಂಗ್ರೂರು ಜಿಲ್ಲೆಯವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಟೊರೊಂಟೋದಲ್ಲಿ ವಾಸಿಸುತ್ತಿದ್ದರು ಎಂದು ವರದಿಗಳು ಹೇಳಿವೆ. ಕೊಲೆಗೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ.