ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಸೀದಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗೆ ಮಹಿಳೆಯಿಂದ ಕಪಾಳಮೋಕ್ಷ; ಮುಂದೇನಾಯ್ತು? ವಿಡಿಯೊ ನೋಡಿ

ಸೌದಿ ಅರೇಬಿಯಾದ ಮದೀನಾದಲ್ಲಿರುವ ಮಸೀದಿ ಅನ್-ನಬಾವಿಯೊಳಗೆ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಮಸೀದಿಯಲ್ಲಿ ನಿರ್ಬಂಧಿತ ಸ್ಥಳದಲ್ಲಿ ಹೋಗುವುದನ್ನು ತಡೆಯಲು ಪ್ರಯತ್ನಿಸಿದ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ಮಸೀದಿಯಲ್ಲಿ ಭದ್ರತಾ ಸಿಬ್ಬಂದಿ-ಮಹಿಳೆ ನಡುವೆ ಜಟಾಪಟಿ!

Profile pavithra Mar 31, 2025 3:50 PM

ರಿಯಾದ್‌: ಸೌದಿ ಅರೇಬಿಯಾದ ಮದೀನಾದಲ್ಲಿರುವ ಮಸೀದಿ ಅನ್-ನಬಾವಿಯೊಳಗೆ ಹೋಗಲೆತ್ನಿಸಿದ ಮಹಿಳೆಯೊಬ್ಬಳು ತಡೆಯಲು ಪ್ರಯತ್ನಿಸಿದ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಸಂದರ್ಭದಲ್ಲಿ ಮಹಿಳೆ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡುವುದು ನಂತರ ಭದ್ರತಾ ಸಿಬ್ಬಂದಿ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆ ಸೆರೆಯಾಗಿದೆ. ಈ ವೈರಲ್ ಆದ ವಿಡಿಯೊ ಪವಿತ್ರ ಸ್ಥಳದಲ್ಲಿನ ಭದ್ರತಾ ಪ್ರೋಟೋಕಾಲ್‍ಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ವೈರಲ್ ಆದ ವಿಡಿಯೊದಲ್ಲಿ ಬುರ್ಖಾ ಧರಿಸಿದ ಮಹಿಳೆ ಚುರುಕಾಗಿ ನಡೆಯುತ್ತಾ ನಿರ್ಬಂಧಿತ ಸ್ಥಳಕ್ಕೆ ಪ್ರವೇಶಿಸಿ ಮಸೀದಿಯಲ್ಲಿ ಇರಿಸಲಾದ ಬ್ಯಾರಿಕೇಡ್‍ಗಳನ್ನು ದಾಟಲು ಪ್ರಯತ್ನಿಸಿದ್ದಾಳೆ. ಆಗ ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವಳನ್ನು ತಡೆದು ನಿಲ್ಲಿಸಿದ್ದಾನೆ ಮತ್ತು ಕೋಪದಿಂದ ಇನ್ನೊಂದು ದಿಕ್ಕಿನಿಂದ ಹೋಗುವಂತೆ ಹೇಳಿದ್ದಾನೆ. ಆದರೆ ಮಹಿಳೆ ಭದ್ರತಾ ಸಿಬ್ಬಂದಿಯ ಇನ್ನೊಂದು ಬದಿಯಿಂದ ಮುಂದೆ ಸಾಗುವ ಮೂಲಕ ಅವನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳಂತೆ. ಆಗ ಸಿಬ್ಬಂದಿ ಅವಳಿಗೆ ಮುಂದೆ ಹೋಗಲು ಅನುಮತಿ ನೀಡಲಿಲ್ಲವಂತೆ. ಇದರಿಂದ ಕೋಪಗೊಂಡ ಮಹಿಳೆ ಭದ್ರತಾ ಸಿಬ್ಬಂದಿಯ ಕಪಾಳಕ್ಕೆ ಹೊಡೆದಿದ್ದಾಳೆ. ಇದರಿಂದ ಸಿಟ್ಟಾದ ಆತ ಅವಳ ಕಪಾಳಕ್ಕೆ ಹೊಡೆದು, ಅವಳ ಬೆನ್ನಿಗೆ ಗುದ್ದಿದ್ದಾನಂತೆ. ನಂತರ ಅಲ್ಲಿದ್ದ ಜನರು ಮಧ್ಯಪ್ರವೇಶಿಸಿ ಅವನನ್ನು ತಡೆದಿದ್ದಾರೆ.

ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಮಹಿಳೆ ವಿಡಿಯೊ ನೋಡಿ...



ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಮದೀನಾ ಪೊಲೀಸರು, ಪ್ರವಾದಿಯ ಮಸೀದಿಯಲ್ಲಿ ಭದ್ರತಾ ಅಧಿಕಾರಿ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾಗ ಮಹಿಳೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಇಲಾಖೆ ಪ್ರಸ್ತುತ ತನಿಖೆ ನಡೆಸುತ್ತಿದೆ ಮತ್ತು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದೆ ಎಂಬುದಾಗಿ ತಿಳಿಸಿದ್ದಾರೆ.

ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಇದಕ್ಕೆ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ನೆಟ್ಟಿಗರೊಬ್ಬರು, "ಅವರಿಬ್ಬರೂ ತಪ್ಪು ಮಾಡಿದ್ದಾರೆ. ಅವಳು ನಿಯಮಗಳನ್ನು ನಿರ್ಲಕ್ಷಿಸಬಾರದು ಮತ್ತು ಅವನು ಭದ್ರತಾ ಸಿಬ್ಬಂದಿಯಾಗಿ ಈ ರೀತಿಯ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲು ಸಮರ್ಥನಾಗಿರಬೇಕು. ಮದೀನಾದಲ್ಲಿ ಅಧಿಕಾರಿಯೊಬ್ಬರನ್ನು ಥಳಿಸುವುದು ಗಂಭೀರ ಅಪರಾಧ” ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಈ ಪ್ರವಾಸಿಗನ ಧೈರ್ಯಕ್ಕೆ ನೋಡುಗರೇ ಶಾಕ್‌! ಚಾಕು ಹಿಡಿದು ಪುಂಡಾಟ ಮೆರೆದವನಿಗೆ ಈ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ

ಮಾಹಿತಿ ಪ್ರಕಾರ, ಭದ್ರತಾ ಅಧಿಕಾರಿಯು ನಿಯಮಗಳು ಮತ್ತು ಸೂಚನೆಗಳನ್ನು ಜಾರಿಗೆ ತರುವ ಮತ್ತು ತನ್ನ ವ್ಯಾಪ್ತಿ ಪ್ರದೇಶದಲ್ಲಿ ಉಲ್ಲಂಘನೆಗಳನ್ನು ಪತ್ತೆಹಚ್ಚುವ ಕರ್ತವ್ಯಗಳನ್ನು ನಿರ್ವಹಿಸುವಾಗ ಸಾರ್ವಜನಿಕರು ಅವರ ಮೇಲೆ ಹಲ್ಲೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ಕೃತ್ಯಗಳನ್ನು ಎಸಗಿದವರನ್ನು ಅಪರಾಧಿಗಳೆಂದು ಘೋಷಿಸಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಮತ್ತು ಅವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುವುದು.