Viral Video: ಕಾರಿನ ಬಾನೆಟ್‌ನಲ್ಲಿ ಬಾಲಕನನ್ನು ಕೂರಿಸಿ ರೀಲ್ಸ್... ವಿಡಿಯೊ ನೋಡಿ ಹೌಹಾರಿದ ನೆಟ್ಟಿಗರು!
Viral Video: ಇಲ್ಲೊಬ್ಬ ಭೂಪ ಚಲಿಸುತ್ತಿರುವ ಆಲ್ಟೊ ಕಾರಿನ ಮೇಲೆ ಬಾಲಕನ್ನು ಕೂರಿಸಿ ವಿಡಿಯೋ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಪೊಲೀಸರು ಕೂಡ ಈ ಚಾಲಕನ ಹಿಂದೆ ಬಿದ್ದಿದ್ದಾರೆ.

ನವದೆಹಲಿ: ಕೆಲವರಿಗೆ ಅಪಾಯಕಾರಿ ಸ್ಟಂಟ್ ಮಾಡುವ ಕ್ರೇಝ್. ತಮ್ಮ ಈ ಹುಚ್ಚಾಟದಿಂದ ತಮಗೇ ಕಷ್ಟ ಎದುರಾಗುತ್ತದೆ, ಬೇರೆಯವರು ಕೂಡಾ ತೊಂದರೆ ಅನುಭವಿಸುತ್ತಾರೆ ಎಂಬುದರ ಬಗ್ಗೆ ಇವರು ಕಿಂಚಿತ್ತೂ ಯೋಚಿಸುವುದೇ ಇಲ್ಲ. ಇಂತಹ ಹುಚ್ಚು ಸಾಹಸದಿಂದ ಜೀವ ಕಳೆದುಕೊಂಡವರೂ ಇದ್ದಾರೆ. ಆದರೆ, ಇಂತಹ ಸಾಲು ಸಾಲು ಘಟನೆಗಳು ನಡೆದರೂ ಒಂದಷ್ಟು ಮಂದಿ ಇನ್ನೂ ಬುದ್ಧಿ ಕಲಿಯುತ್ತಿಲ್ಲ ಎಂಬುದು ದುರಾದೃಷ್ಟಕರ(Viral Video).
ಅಲ್ಲದೇ ಇವತ್ತಿನ ದಿನದಲ್ಲಿ ಸೋಷಿಯಲ್ ಮೀಡಿಯಾ(Social Media) ದಲ್ಲಿ ಬೇಗನೆ ಖ್ಯಾತಿಗಳಿಸಲು ಹಲವು ಯುವಕ, ಯುವತಿಯರು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಚಿತ್ರ-ವಿಚಿತ್ರವಾದ ರೀಲ್ ಮಾಡಿ, ಇತರ ಗಮನ ಸೆಳೆಯುತ್ತಿರುತ್ತಾರೆ. ಕೆಲವೊಮ್ಮೆ ಈ ರೀತಿ ಮಾಡಲು ಹೋಗಿ, ತಾವು ಮಾತ್ರವಲ್ಲದೆ, ಬೇರೆಯವರನ್ನು ತೊಂದರೆಗೆ ತಳ್ಳುತ್ತಾರೆ. ಅಂತಹದೊಂದು ಘಟನೆ ನಡೆದಿದೆ.
ಅದೇ ರೀತಿ ಇಲ್ಲೊಬ್ಬ ಭೂಪ ಚಲಿಸುತ್ತಿರುವ ಆಲ್ಟೊ ಕಾರಿನ ಮೇಲೆ ಬಾಲಕನ್ನು ಕೂರಿಸಿ ವಿಡಿಯೋ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಪೊಲೀಸರು ಕೂಡ ಈ ಚಾಲಕನ ಹಿಂದೆ ಬಿದ್ದಿದ್ದಾರೆ. ಈ ಘಟನೆ ರಾಜಸ್ಥಾನದ ಝಾಲಾವರ್‌ನ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದ್ದು, ಕಪ್ಪು ಬಣ್ಣದ ಮಾರುತಿ ಆಲ್ಟೊ ಕಾರಿನ ಬಾನೆಟ್ ಮೇಲೆ ಬಾಲಕ ಕೂತು ರೀಲ್ಸ್(Reels) ಮಾಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಮತ್ತೊಂದು ಕಾರಿನಲ್ಲಿದ್ದ ಪ್ರಯಾಣಿಕರು ಆ ದೃಶ್ಯವನ್ನು ವಿಡಿಯೊ(Viral Video) ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ.
https://twitter.com/Live_Hindustan/status/1872263876252975244?ref_src=twsrc%5Etfw%7Ctwcamp%5Etweetembed%7Ctwterm%5E1872263876252975244%7Ctwgr%5Efd148fbf326aa6ed24a28aa307d55da8507537dd%7Ctwcon%5Es1_&ref_url=https%3A%2F%2Ftv9kannada.com%2Ftrending%2Fchild-rides-on-car-bonnet-rajasthan-highway-stunt-goes-viral-955600.html
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಾಹನದ ನೋಂದಣಿ ಸಂಖ್ಯೆಯ ಮೂಲಕ ವಾಹನವನ್ನು ಪತ್ತೆ ಹಚ್ಚುವಿಕೆಗಾಗಿ ಪೊಲೀಸರು ಮುಂದಾಗಿದ್ದು, ಕಾರಿನ ನಂಬರ್ ಕೂಡ ವಿಡಿಯೋದಲ್ಲಿ ಕಾಣಿಸುತ್ತಿದೆ. ಆಲ್ಟೊ ಕಾರು ಪರವಾನಗಿ ಸಂಖ್ಯೆ ‘RJ17CB3024’ ಎಂಬುದಾಗಿ ತಿಳಿದು ಬಂದಿದ್ದು, ಈ ಕಾರಿನ ಮಾಲೀಕನಿಗಾಗಿ ಇದೀಗ ಶೋಧ ಕಾರ್ಯ ನಡೆಯುತ್ತಿದೆ.
ನಿಮ್ಮ ಸುರಕ್ಷತೆ ನಿಮಗೆ ಬೇಡವಾಗಿದ್ದರೆ ಸರಿ. ರಸ್ತೆಯಲ್ಲಿ ಸಂಚಾರ ಮಾಡುವರ ಸುರಕ್ಷತೆಗಾದರೂ ಗಮನ ಕೊಡಿ. ಸಂಚಾರಿ ನಿಯಮಗಳನ್ನು ಪಾಲಿಸಿ ಎಂದಿದ್ದಾರೆ ಮತ್ತೊಬ್ಬರು. ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವವರನ್ನು ಜೈಲಿಗೆ ಹಾಕಬೇಕು ಎಂದಿದ್ದಾರೆ ಇನ್ನೊಬ್ಬರು. ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ನಂತೆ ಮೆರೆಯುತ್ತಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಮಗದೊಬ್ಬರು ಹೇಳಿದ್ದಾರೆ.
ಇನ್ನು ಈ ವೀಡಿಯೋವನ್ನು ಲೈವ್ ಹಿಂದೂಸ್ತಾನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು,ಸದ್ಯ ವೈರಲ್ ಆಗುತ್ತಿರುವ 39 ಸೆಕೆಂಡಿನ ಈ ಕ್ಲಿಪ್‌ನಲ್ಲಿ ಒಬ್ಬರು ಕಾರಿನ ಬಾನೆಟ್ ಮೇಲೆ ಕುಳಿತು ಸಾಗುವ ದೃಶ್ಯ ಇದೆ. ಇನ್ನು ಈ ಹಿಂದೆ ಯುವತಿ ಒಬ್ಬಳು ತನ್ನ ಮದುವೆಯ ದಿನ (Wedding Day) ಕಲ್ಯಾಣ ಮಂಟಪಕ್ಕೆ ಕಾರಿನ ಬಾನೆಟ್ ಮೇಲೆ ಬಂದ ವಿಡೀಯೋ ವೈರಲ್ ಆಗಿತ್ತು. ಆಕೆ ವಿಭಿನ್ನವಾಗಿ ಬರಬೇಕೆಂಬ ಬಯಕೆಯಿಂದ ಈಡೇರಿಸಿಕೊಳ್ಳಲು ಹೋಗಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಳು. ಈ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದ್ದು, ಶುಭಾಂಗಿ ಎಂಬ ಹೆಸರಿನ ಯುವತಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಈ ಸುದ್ದಿಯನ್ನು ಓದಿ: K Annamalai: ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ- DMK ಸರ್ಕಾರದ ವಿರುದ್ಧ ವಿನೂತನ ಪ್ರೊಟೆಸ್ಟ್