Viral Video: ಪರೀಕ್ಷೆಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಕ್ರೂರಿ ಅಪ್ಪ ಮಾಡಿದ್ದೇನು ನೋಡಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!
ಚೀನಾದಲ್ಲಿ ತಂದೆಯೊಬ್ಬ ಮಗ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಕ್ಕೆ ಮನೆಯ ಹೊರಗಿನ ಬೀದಿಯಲ್ಲಿ ಕೈಯಲ್ಲಿ ಬೆಲ್ಟ್ ಹಿಡಿದು ಅಡ್ಡಾಡಿಸಿಕೊಂಡು ಹೊಡೆದಿದ್ದಾನೆ. ಇದಕ್ಕೆ ಮಗನು ತಂದೆಯ ಮೇಲೆ ಪ್ರತಿದಾಳಿ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಪೋಷಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ.


ಬೀಜಿಂಗ್: ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದಾಗ ಪೋಷಕರು ಮಕ್ಕಳಿಗೆ ಬೈಯುವುದು, ಹೊಡೆಯುವುದು ಸಾಮಾನ್ಯ. ಆದರೆ ಚೀನಾದಲ್ಲಿ ತಂದೆಯೊಬ್ಬ ಮಗ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನೆಯ ಹೊರಗೆ ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ. ಮಗ ಕೂಡ ತಂದೆಯ ಮೇಲೆ ಪ್ರತಿದಾಳಿ ನಡೆಸಿದ್ದಾನೆ. ನಡು ರಸ್ತೆಯಲ್ಲಿ ತಂದೆ-ಮಗ ಹೊಡೆದಾಡಿಕೊಂಡ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಬಿರುಗಾಳಿ ಎಬ್ಬಿಸಿದೆ. ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಇದು ಪೋಷಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ.
ವೈರಲ್ ಆದ ವಿಡಿಯೊದಲ್ಲಿ ತಂದೆ ಕೈಯಲ್ಲಿ ಬೆಲ್ಟ್ ಹಿಡಿದುಕೊಂಡು ಮಗನ ಹಿಂದೆ ಓಡುತ್ತಿರುವುದನ್ನು ಸೆರೆಯಾಗಿದೆ. ಫೇಲ್ ಆದ ಮಗನನ್ನು ರಸ್ತೆಯಲ್ಲಿ ಬೆಲ್ಟ್ ಹಿಡಿದು ಥಳಿಸಿದ್ದಾನೆ.ಪೆಟ್ಟು ತಿಂದ ಮಗನು ಕೈಯಲ್ಲಿ ಕೋಲು ಹಿಡಿದುಕೊಂಡು ಅಪ್ಪನಿಗೆ ಹೊಡೆದಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
ತಂದೆಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬರು, "ಇದು ಭಯಾನಕ ಪೋಷಕರ ನಡವಳಿಕೆ. ಛೀ... ಆ ಅಪ್ಪ ಅದೇ ಪರೀಕ್ಷೆಯಲ್ಲಿ ಪಾಸ್ ಆಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಮಗ ಪರೀಕ್ಷೆಯಲ್ಲಿ ಫೇಲ್ ಆದ ಬಗ್ಗೆ ಪೋಷಕರು ಇಷ್ಟೊಂದು ಅಸಮಾಧಾನಗೊಳ್ಳಲು ಯಾವುದೇ ಕಾರಣವಿಲ್ಲ. ಏಕೆಂದರೆ ಅದು ಅಷ್ಟು ಗಂಭೀರವಲ್ಲ" ಎಂದು ಬರೆದಿದ್ದಾರೆ.
ಚೀನಾದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಮಹಿಳೆಯ ವೇಷ ಧರಿಸಿ 1,000 ಕ್ಕೂ ಹೆಚ್ಚು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಮಾಡಿ ಹಾಗೂ ಅದನ್ನು ರಹಸ್ಯವಾಗಿ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮಧ್ಯವಯಸ್ಕ ಚೀನೀ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿ ಚೀನಾದ ಸೋಶಿಯಲ್ ಮೀಡಿಯಾ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.ಪೂರ್ವ ನಗರದ ನಾನ್‌ಜಿಂಗ್‌ನಲ್ಲಿರುವ ಜಿಯಾವೊ ಎಂಬ ಉಪನಾಮ ಹೊಂದಿರುವ ಆ ವ್ಯಕ್ತಿ ತನ್ನ ಮನೆಯಲ್ಲಿ 1,691 ಪುರುಷರ ಜೊತೆ ಲೈಂಗಿಕ ಸಂಪರ್ಕ ಮಾಡಿ ನಂತರ ಅದನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಬೈಕ್ ಎಗರಿಸಿ ಎಸ್ಕೇಪ್ ಆಗ್ತಿದ್ದ ಕಿಲಾಡಿ ಕಳ್ಳ ಬಲೆಗೆ ಬಿದ್ದಿದ್ದು ಹೇಗೆ ಗೊತ್ತಾ? ಈ ವಿಡಿಯೊ ನೋಡಿ
ಫೇಲ್ ಆಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಯುವತಿ!
ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್‌ಎಲ್‌ಸಿ ಎರಡನೇ ವಿಷಯದ ಪರೀಕ್ಷೆ ಬರೆದು ಬಂದಿದ್ದಳು. ಆದರೆ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಫಾರೆಸ್ಟ್ ಕಾಲನಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.