Andrea Sunshine: ಯುವತಿಯರನ್ನು ನಾಚಿಸುವಂತೆ ಫಿಟ್ ಆ್ಯಂಡ್ ಫೈನ್ ಆಗಿರುವ ಈ ಮಹಿಳೆಯ ವಯಸ್ಸು ಕೇಳಿದ್ರೆ ನೀವು ಶಾಕ್ ಆಗ್ತೀರಾ!
Fitness Tips: ಲಂಡನ್ ಮೂಲದ 55 ವರ್ಷದ ಮಹಿಳೆ ಆಂಡ್ರಿಯಾ ಸನ್‌ಶೈನ್ ಅವರು ತಮ್ಮ ಅಟ್ರಾ ಕ್ಟಿವ್ ಲುಕ್ ಮತ್ತು ಯೌವ್ವನದ ನೋಟದಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. ಶಿಸ್ತುಬದ್ಧ ಆಹಾರ ಮತ್ತು ಉತ್ತಮವಾದ ಫಿಟ್ನೆಸ್ ತರಬೇತಿಯಿಂದ ಅವರು ಬಹಳ ಯಂಗ್ ಲುಕ್‌ನಲ್ಲಿ ಕಾಣಿಸಿದ್ದಾರೆ. ಈ ಮೂಲಕ ತಮ್ಮ ಫಿಟ್ನೆಸ್ ಮತ್ತು ಸೌಂದರ್ಯದ ಮೂಲಕ ಜನರನ್ನು ಬೆರಗುಗೊಳಿಸಿದ್ದಾರೆ.

-

ನವದೆಹಲಿ: ನಮ್ಮ ದೇಹ ಫಿಟ್ (Fitness) ಆ್ಯಂಡ್ ಯಂಗ್ ಆಗಿ ಕಾಣಬೇಕು ಎಂಬುದು ಬಹುತೇಕರ ಮನದಾಳದ ಆಸೆಯಾಗಿರುತ್ತದೆ. ಇತ್ತೀಚಿನ ಜನಾಂಗದ ಜೀವನ ಶೈಲಿ, ಆಹಾರ ಕ್ರಮ ಎಲ್ಲವೂ ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು ಚಿಕ್ಕ ವಯಸ್ಸಿಗೆಲ್ಲ ದೇಹದಲ್ಲಿ ವಯಸ್ಸಾದವರಂತೆ ಕಂಡುಬರುವ ಮಂಡಿ ನೋವು, ಕೂದಲು ಬೆಳ್ಳಗಾಗುವುದು, ಸುಸ್ತು ಇತ್ಯಾದಿ ಸಮಸ್ಯೆ ಕಂಡು ಬರಲಿದೆ. ಆದರೆ ಲಂಡನ್ ಮೂಲದ ಮಹಿಳೆಯೊಬ್ಬರು ತಮ್ಮ 55ನೇ ವಯಸ್ಸಿನಲ್ಲಿಯೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದು ಸದ್ಯ ಅವರ ಫೋಟೊ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ತಮ್ಮ ಫಿಟ್ನೆಸ್ ನಿಂದಲೇ ಇವರು ಈ ಯಂಗ್ ಆ್ಯಂಡ್ ಚಾರ್ಮ್ ಲುಕ್ ಅನ್ನು ಪಡೆದಿದ್ದು ಅವರು ಎಲ್ಲ ವಯಸ್ಸಿನ ಜನರಿಗೂ ಫಿಟ್ನೆಸ್ ವಿಚಾರದಲ್ಲಿ ಪ್ರೇರಣೆಯಾಗಿದ್ದಾರೆ ಎಂದು ಹೇಳಬಹುದು. ಈ ಮೂಲಕ ಲಂಡನ್ ಮಹಿಳೆಯ ಫಿಟ್ನೆಸ್ ಸಿಕ್ರೆಟ್ ವಿಚಾರಗಳು ಈಗ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಲಂಡನ್ ಮೂಲದ 55 ವರ್ಷದ ಮಹಿಳೆ ಆಂಡ್ರಿಯಾ ಸನ್‌ಶೈನ್ ಅವರು ತಮ್ಮ ಅಟ್ರಾಕ್ಟಿವ್ ಲುಕ್ ಮತ್ತು ಯೌವ್ವನದ ನೋಟದಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. ಶಿಸ್ತುಬದ್ಧ ಆಹಾರ ಮತ್ತು ಉತ್ತಮ ವಾದ ಫಿಟ್ನೆಸ್ ತರಬೇತಿಯಿಂದ ಅವರು ಬಹಳ ಯಂಗ್ ಲುಕ್ ನಲ್ಲಿ ಕಾಣಿಸಿದ್ದಾರೆ. ಈ ಮೂಲಕ ತಮ್ಮ ಫಿಟ್ನೆಸ್ ಮತ್ತು ಸೌಂದರ್ಯದ ಮೂಲಕ ಜನರನ್ನು ಬೆರಗುಗೊಳಿಸಿದ್ದಾರೆ. ಅವರು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಸ್ಫೂರ್ತಿ ನೀಡಿದ್ದು ಅವರ ಈ ಫಿಟ್ನೆಸ್‌ಗೆ ಕಾರಣ ಏನು ಎಂಬುದು ಇದೀಗ ಅವರು ತಿಳಿಸಿದ್ದಾರೆ. ಆಂಡ್ರಿಯಾ ಸನ್‌ಶೈನ್‌ಳ ಅವರು ತಮ್ಮ 55ನೇ ವಯಸ್ಸಿ ನಲ್ಲಿಯೂ 25 ವರ್ಷ ವಯಸ್ಸಿನವರಂತೆ ಕಾಣಲು ಅವರ ಆಹಾರ ಕ್ರಮ ಮುಖ್ಯ ಕಾರಣ ಎನ್ನಬಹುದು.
ಇದನ್ನು ಓದಿ:Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ?
- ಆಂಡ್ರಿಯಾ ಸನ್‌ಶೈನ್ ಅವರ ಫಿಟ್‌ನೆಸ್ ಗೆ ಅಧಿಕ ಆಧ್ಯತೆ ನೀಡುತ್ತಿದ್ದು ಅದೆ ಅವರನ್ನು ಯೌವನವಾಗಿ ಕಾಣುವಂತೆ ಮಾಡುತ್ತಿದೆ.
- ಅವರು ಕನಿಷ್ಠ 3 ಗಂಟೆಗಳ ಕಾಲ ನಿತ್ಯವು ವ್ಯಾಯಾಮ ಮಾಡುತ್ತಾರೆ.
- ಆಹಾರದಲ್ಲಿ ಅಧಿಕ ಪೌಷ್ಟಿಕಾಂಶ ಹಾಗೂ ಕಡಿಮೆ ಕೊಲೆಸ್ಟ್ರಾಲ್ ಆಹಾರ ಸೇವಿಸುತ್ತಾರೆ.
- ಯೋಗ, ಧ್ಯಾನ ದಂತಹ ಉತ್ತಮ ಹವ್ಯಾಸಿ ಕ್ರಮವನ್ನು ಅವರು ಅನುಸರಿಸುತ್ತಾರೆ.
- ಸೈಕ್ಲಿಂಗ್, ಸ್ವಿಮ್ಮಿಂಗ್, ಶಟಲ್ ಬ್ಯಾಟ್, ಬ್ಯಾಡ್ಮಿಂಟನ್ ನಂತಹ ದೇಹಕ್ಕೆ ಚಟುವಟಿಕೆಗಳನ್ನು ನೀಡುವ ಜೀವನ ಶೈಲಿಯ ಕ್ರಮವನ್ನು ಅವರು ಅನುಸರಿಸುತ್ತಿದ್ದಾರೆ.
ಫಿಟ್ನೆಸ್ ಸಿಕ್ರೆಟ್ ಬಗ್ಗೆ ಸ್ವತಃ ಆಂಡ್ರಿಯಾ ಸನ್‌ಶೈನ್ ಅವರೆ ಸೋಶಿಯಲ್ ಮಿಡಿಯಾದಲ್ಲಿ ಬರೆದು ಕೊಂಡಿದ್ದಾರೆ. ನಾನು ವ್ಯಾಯಾಮ, ಯೋಗ ಇತ್ಯಾದಿಗಳನ್ನು ಬೇರೆ ಅವರ ಗಮನ ಸೆಳೆಯಲು ಮಾಡಲಾರೆ ಬದಲಾಗಿ ನನ್ನ ಆರೋಗ್ಯ ವೃದ್ಧಿಗಾಗಿ ಮಾತ್ರ ಮಾಡುತ್ತೇನೆ. ಯಾರು ಕೂಡ ಬೇರೆ ಅವರನ್ನು ಮೆಚ್ಚಿಸಲು ವ್ಯಾಯಾಮ, ಆಹಾರ ಕ್ರಮ ಅನುಸರಿಸಬೇಡಿ ನಿಮಗಾಗಿ ನಿಮ್ಮ ದೇಹದ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ ಎಂದು ಅವರು ಬರೆದು ಕೊಂಡಿದ್ದಾರೆ.