Viral Video: ಉರ್ಫಿಯೇ ಈಕೆಗೆ ಸ್ಫೂರ್ತಿಯಂತೆ! ಈಕೆಯ ಇನೋವೇಟಿವ್ ಡ್ರೆಸ್ ಹೇಗಿದೆ ನೋಡಿ
Uorfi Javed: ಯುವತಿಯೊಬ್ಬಳು ಸಾಮಾಜಿಕ ಮಾಧ್ಯಮ ಸೆನ್ಸೇಷನ್ ಮತ್ತು ಫ್ಯಾಷನಿಸ್ಟ್ ಉರ್ಫಿ ಜಾವೇದ್‌ಳಿಂದ ಸ್ಫೂರ್ತಿ ಪಡೆದು ಸೃಜನಶೀಲ ಉಡುಪನ್ನು ತಯಾರಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಇನ್ಸ್ಟಾಗ್ರಾಂ ರೀಲ್ಸ್‌ನಲ್ಲಿ ತಾನು ತಯಾರಿಸಿದ ಉಡುಪನ್ನು ಪ್ರದರ್ಶಿಸುವ ಮೂಲಕ ಬಳಕೆದಾರರ ಗಮನ ಸೆಳೆದಿದ್ದಾಳೆ.

-

ನವದೆಹಲಿ: ಸಾಮಾಜಿಕ ಮಾಧ್ಯಮ ಸೆನ್ಸೇಷನ್ ಮತ್ತು ಫ್ಯಾಷನಿಸ್ಟ್ ಉರ್ಫಿ ಜಾವೇದ್ (Uorfi Javed) ಅವರು ತಮ್ಮ ವಿಶಿಷ್ಟ ಮತ್ತು ಅಸಾಂಪ್ರದಾಯಿಕ ಫ್ಯಾಷನ್ ಸೆನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಅವರ ಕುಖ್ಯಾತ ಕಸದ ಚೀಲದ ಉಡುಪಿನಿಂದ ಗುಲಾಬಿ ದಳದಂತಹ ಉಡುಪಿನವರೆಗೆ, ಬಹುತೇಕ ಎಲ್ಲವನ್ನೂ ತಮ್ಮ ಫ್ಯಾಷನ್ ಪ್ರಯೋಗಗಳಲ್ಲಿ ಹೊಂದಿದ್ದಾರೆ. ಇದೀಗ ಯುವತಿಯೊಬ್ಬಳು ಉರ್ಫಿಯಿಂದ ಸ್ಫೂರ್ತಿ ಪಡೆದು ಸೃಜನಶೀಲ ಉಡುಪನ್ನು ತಯಾರಿಸಿ ಎಲ್ಲರ ಹುಬ್ಬೇರಿಸಿದ್ದಾಳೆ. ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಹೌದು, ಯುವತಿಯೊಬ್ಬಳು ಅದ್ಭುತವಾದ ಉಡುಪನ್ನು ತಯಾರಿಸುವ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾಳೆ. ‘ನಿರೀಕ್ಷೆ v/s ನಾನು ಮಾಡಿದದ್ದು’ ಎಂಬ ಶೀರ್ಷಿಕೆಯ ಇನ್‌ಸ್ಟಾಗ್ರಾಮ್ ರೀಲ್‍ನಲ್ಲಿ ಯುವತಿ ತಾನು ರಚಿಸಲು ಪ್ರಯತ್ನಿಸಿದ ಉಡುಪನ್ನು ತೋರಿಸಿದ್ದಾಳೆ. ಕಾರ್ಸೆಟ್ ಟಾಪ್ ಮತ್ತು ಕಪ್ಪು ಬಣ್ಣದ ಸ್ಕರ್ಟ್ ಅನ್ನು ಧರಿಸಿರುವ ಯುವತಿಯು, ದೊಡ್ಡ ಉಂಗುರಾಕೃತಿಯ ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಆ ಉಡುಗೆಯು ಜೇನುಗೂಡಿನಂತೆ ಗೋಚರಿಸುತ್ತದೆ.
ಇದು ಕಾಗದದಿಂದ ತಯಾರಿಸಲಾದ ಉಡುಪಾಗಿದ್ದು, ಬಹಳ ಸುಂದರವಾಗಿ ಮಾಡಿದ್ದಾರೆ. ಅದನ್ನು ಯುವತಿ ವಿಡಿಯೊ ಮೂಲಕ ಬಹಳ ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಯುವತಿಯ ಈ ವಿಭಿನ್ನ ಉಡುಪನ್ನು ಕೊಂಡಾಡಿದ್ದಾರೆ. ತುಂಬಾ ಅದ್ಭುತವಾಗಿದೆ, ಚೆನ್ನಾಗಿ ತಯಾರಿಸಿದ್ದೀರಿ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಉರ್ಫಿ ಜಾವೇದ್ ಪ್ರತಿಕ್ರಿಯೆ
ಇನ್ನು ಈ ಉಡುಪಿಗೆ ಸ್ವತಃ ಉರ್ಫಿ ಜಾವೇದ್ ಕೂಡ ಪ್ರಭಾವಿತರಾಗಿದ್ದಾರೆ. ತನಗೂ ಇದೇ ರೀತಿಯ ಉಡುಪನ್ನು ತಯಾರಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಉರ್ಫಿಯ ಕಾಮೆಂಟ್‍ಗೆ ಯುವತಿ ಇನ್ನಿಲ್ಲದೆ ಖುಷಿಪಟ್ಟಿದ್ದಾಳೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ಯಾರೂ ನಿಮ್ಮಂತೆ ಆಗಲು ಸಾಧ್ಯವಿಲ್ಲ ಎಂದು ಪ್ರೀತಿಯಿಂದ ಯುವತಿ ಪ್ರತಿಕ್ರಿಯೆ ನೀಡಿದ್ದಾಳೆ.
ಇನ್ನು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೂಡ ಈ ವಿಭಿನ್ನ ಉಡುಪು ಆಕರ್ಷಿಸಿದೆ. ಯುವತಿಯ ಫ್ಯಾಷನ್‍ಗೆ ಮನಸೋತ ನೆಟ್ಟಿಗರು ಕೆಂಪು ಬಣ್ಣದ ಹೃದಯದ ಎಮೋಜಿ, ಬೆಂಕಿಯ ಎಮೋಟಿಕಾನ್‍ಗಳಿಂದ ಕಾಮೆಂಟ್ ವಿಭಾಗವು ತುಂಬಿ ಹೋಗಿದೆ. ಈ ಉಡುಪು ತೊಟ್ಟು, ಸ್ಟುಡಿಯೊ ಸೆಟಪ್ ಪಡೆಯುವಂತೆ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸ್ಟುಡಿಯೊ ಸೆಟಪ್‍ನಲ್ಲಿ ಉಡುಪು ಮತ್ತಷ್ಟು ಕಂಗೊಳಿಸುತ್ತದೆ ಎಂದು ಅವರು ಹೇಳಿದರು.
ಬಹಳ ಅದ್ಭುತವಾಗಿ ಮೂಡಿಬಂದಿದೆ. ಇದನ್ನು ತಯಾರಿಸಲು ಕಠಿಣ ಪರಿಶ್ರಮ ಪಟ್ಟಿದ್ದೀರಿ, ಅಭಿನಂದನೆಗಳು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದರು. ಯಾವ ರೀತಿ ಹೊಲೀಯಬೇಕೆಂದು ಅಂದುಕೊಂಡಿದ್ದಿರೋ ಅದಕ್ಕಿಂತಲೂ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದರು. ಉರ್ಫಿ ಜಾವೇದ್ ತೊಡುವ ಉಡುಪಿಗಿಂತ ಇದು ಬಹಳ ಚೆನ್ನಾಗಿದೆ. ಜೇನುಗೂಡು ಉಡುಪು ಫ್ಯಾಷನ್ ಜಗತ್ತಿನಲ್ಲಿ ಖಂಡಿತವಾಗಿಯೂ ಎಲ್ಲರ ಮನಗೆದ್ದಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.