ರಣರಂಗವಾದ ಮದುವೆ ಮಂಟಪ; ಕೇಕ್ ತಿಂದ ಎಂದು ವಿವಾಹವನ್ನೇ ಕ್ಯಾನ್ಸಲ್ ಮಾಡಿದ ಯುವತಿ; ಅಷ್ಟಕ್ಕೂ ಆಗಿದ್ದೇನು?
Viral Video: ಇಲ್ಲೊಂದೆಡೆ ವೈವಾಹಿಕ ಕಾರ್ಯಕ್ರಮವು ಆಘಾತಕಾರಿ ತಿರುವು ಪಡೆದುಕೊಂಡಿದ್ದು ದಂಪತಿಗಳ ನಡುವೆ ವಾಗ್ವಾದ ನಡೆದು ಮದುವೆಯೇ ಅರ್ಧಕ್ಕೆ ನಿಲ್ಲುವಂತ ಘಟನೆ ನಡೆದಿದೆ.. ಕೇವಲ ಕೇಕ್ ವಿಚಾರವಾಗಿ ಮದುಮಗ ಮತ್ತು ಮದುಮಗಳ ನಡುವೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿದೆ..ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದೆ.
ಕೇಕ್ ವಿಚಾರವಾಗಿ ಮದುವೆ ಮಂಟಪವೇ ರಣರಂಗ -
ದೆಹಲಿ,ಡಿ.13: ಇತ್ತೀಚೆಗೆ ಮದುವೆ ಅಂದಾಗ ಪ್ರತಿಯೊಬ್ಬರು ಅದ್ದೂರಿಯಾಗಿ ಆಯೋಜನೆ ಮಾಡುತ್ತಾರೆ. ಆದರೆ ಕೆಲವೊಮ್ಮೆ ಸಾಕಷ್ಟು ಹಣ ವ್ಯಯಿಸಿ ಖರ್ಚು ಮಾಡಿದ್ರೂ ಸಣ್ಣ ಪುಟ್ಟ ಕಾರಣಗಳಿಗೆ ಜಗಳ ಉಂಟಾಗಿ ಮದುವೆ ಕ್ಯಾನ್ಸಲ್ ಆದ ಘಟನೆಗಳು ನಡೆದಿವೆ. ಇಲ್ಲೊಂದೆಡೆ ವೈವಾಹಿಕ ಕಾರ್ಯಕ್ರಮವು ಆಘಾತಕಾರಿ ತಿರುವು ಪಡೆದುಕೊಂಡಿದ್ದು ದಂಪತಿಗಳ ನಡುವೆ ವಾಗ್ವಾದ ನಡೆದು ಮದುವೆಯೇ ಅರ್ಧಕ್ಕೆ ನಿಲ್ಲುವಂತ ಘಟನೆ ನಡೆದಿದೆ.. ಕೇವಲ ಕೇಕ್ ವಿಚಾರ ವಾಗಿ ಮದುಮಗ ಮತ್ತು ಮದುಮಗಳ ನಡುವೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿದೆ..ಸದ್ಯ ಈ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.
ಮದುವೆಯ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೊದಲು ಮದುಮಗ ತನ್ನ ಬೆರಳಿನಿಂದ ಸ್ವಲ್ಪ ಕೇಕ್ ತೆಗೆದು ರುಚಿ ನೋಡುತ್ತಾನೆ. ಇದನ್ನು ಕಂಡು ಕೋಪಗೊಂಡ ಮದುಮಗಳು, ಎಲ್ಲರ ಮುಂದೆ ಆತನನ್ನು ಯಾಕೆ ತಿಂದೆ ಎಂದು ಪ್ರಶ್ನೆ ಮಾಡುತ್ತಾಳೆ. ನಂತರ ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಈ ಘಟನೆ ಟರ್ಕಿಯಲ್ಲಿ ನಡೆದಿದ್ದು ಕೆಲವೇ ಸೆಕೆಂಡಿನಲ್ಲಿ ಮದುವೆ ಕ್ಯಾನ್ಸಲ್ ಆಗಿದೆ.
ವಿಡಿಯೋ ನೋಡಿ:
🚨⚡️UNUSUAL
— RussiaNews 🇷🇺 (@mog_russEN) January 10, 2026
Turkey: A dispute during the wedding cake cutting turned into an argument after the groom tasted the cake, angering the bride, ending with the cake being smashed, the bride in tears, and her leaving the ceremony. pic.twitter.com/XGVRelLQSS
ವಿಡಿಯೋವು ವಧು-ವರರು ಕೇಕ್ ಪಕ್ಕದಲ್ಲಿ ನಿಂತಿರುವುದನ್ನು ತೋರಿಸುತ್ತದೆ. ಅತಿಥಿಗಳು ಅವರ ಸುತ್ತಲೂ ಒಟ್ಟುಗೂಡಿ, ಕೇಕ್ ಕತ್ತರಿಸುವಿಕೆಗಾಗಿ ಕಾಯುತ್ತಿದ್ದಾರೆ. ಆ ಕ್ಷಣವನ್ನು ಸೆರೆಹಿಡಿಯಲು ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳು ಸಹ ಅಲ್ಲಿದ್ದಾರೆ. ಆದರೆ ಕೇಕ್ ಕತ್ತರಿಸುವ ಮೊದಲು ಮದುಮಗ ತನ್ನ ಬೆರಳಿನಿಂದ ಸ್ವಲ್ಪ ಕೇಕ್ ತೆಗೆದು ರುಚಿ ನೋಡುತ್ತಾನೆ.ಇದನ್ನು ಕಂಡು ವಧು ಅಲ್ಲಿಯೇ ಕೋಪಗೊಳ್ಳುತ್ತಾಳೆ.ಕೆಲವೇ ಸೆಕೆಂಡುಗ ಳಲ್ಲಿ, ವರನು ಅಸಮಾಧಾನಗೊಳ್ಳುತ್ತಾನೆ. ಇಡೀ ಕೇಕ್ ಅನ್ನು ತೆಗೆದು ಎತ್ತಿ ನೆಲಕ್ಕೆ ಅಪ್ಪಳಿಸುತ್ತಾನೆ.
Viral Video: ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಮದುಮಗನ ಈ ವರ್ತನೆಯಿಂದ ಮದುಮಗಳು ತೀವ್ರ ಆಘಾತಕ್ಕೊಳಗಾಗುತ್ತಾಳೆ. ಬೇಸರರಿಂದ ಕಣ್ಣೀರು ಹಾಕುತ್ತಾ ಅವಳು ಮದುವೆ ಮಂಟಪದಿಂದಲೇ ಹೊರ ನಡೆದಿದ್ದಾಳೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದ್ದು, ಅದು ಮೂರು ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಗಳಿಸಿತು. ಒಬ್ಬ ಬಳಕೆದಾರರು ಏನೋ ನನಗೆ ಕೇಕ್ ಮಾತ್ರ ಸಮಸ್ಯೆಯಲ್ಲ ಎಂದು ಹೇಳುವಂತಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಆ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಬದುಕಲು ಸಾಧ್ಯವಿಲ್ಲ.ಇಷ್ಟು ಸಣ್ಣ ವಿಚಾರಕ್ಕೆ ಜಗಳವೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸಾರ್ವಜನಿಕವಾಗಿ ಎಲ್ಲರ ಎದುರು ಮದುಮಗನನ್ನು ಗದರಿಸಿದ ಮದುಮಗಳ ವರ್ತನೆಯೂ ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.