Viral News: ಸತ್ತುಹೋದ ಶ್ವಾನವನ್ನು ಮರಳಿ ಕರೆತರಲು ಈ ಮಹಿಳೆ ಮಾಡಿದ್ದೇನು ಗೊತ್ತಾ?
ಚೀನಾದ ಶಾಂಘೈನ ಮಹಿಳೆಯೊಬ್ಬಳು ಸತ್ತು ಹೋದ ತನ್ನ ಸಾಕು ನಾಯಿಯನ್ನು ಮರಳಿ ಕರೆತರಲು ಕ್ಲೋನಿಂಗ್‍ಗಾಗಿ ಲಕ್ಷ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾಳೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಕೊನೆಗೂ ಅವಳು ತನ್ನ ಸಾಕು ನಾಯಿಯನ್ನು ಮರಳಿ ಪಡೆದಿದ್ದಾಳೆ. ಹೇಗೆ ಎಂಬ ವಿವರ ಇಲ್ಲಿದೆ ನೋಡಿ.


ಬೀಜಿಂಗ್: ಶಾಂಘೈನಲ್ಲಿ ಮಹಿಳೆಯೊಬ್ಬಳು 2022 ರಲ್ಲಿ ಸಾವನ್ನಪ್ಪಿದ ತನ್ನ ಸಾಕು ನಾಯಿಯನ್ನು ಮರಳಿ ಕರೆತರಲು ಲಕ್ಷ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾಳೆ. ಇದೇನು ನಿಜನಾ ಎಂದು ನೀವು ಹುಬ್ಬೇರಿಸಬಹುದು! ಹೌದು ಇದು ನಿಜ. ಅಂದಹಾಗೇ ಅವಳು ತನ್ನ ಮನೆಗೆ ಅದೇ ರೀತಿಯ ನಾಯಿಯನ್ನು ತರಲು ಕ್ಲೋನಿಂಗ್‍ಗಾಗಿ 19 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾಳಂತೆ. ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಚೀನಾದ ಶಾಂಘೈನಲ್ಲಿ ವಾಸವಾಗಿದ್ದ ಈ ಮಹಿಳೆ ತನ್ನ ಸಾಕು ನಾಯಿಯನ್ನು ಕ್ಲೋನ್ ಮಾಡಲು 160,000 ಯುವಾನ್ (ಸುಮಾರು 19 ಲಕ್ಷ ರೂ.) ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದಾಳೆ.
ವರದಿ ಪ್ರಕಾರ, 2022 ರ ನವೆಂಬರ್‌ನಲ್ಲಿ ಚೀನಾದ ಕ್ಸು ಎಂಬ ಮಹಿಳೆಯ ಸಾಕು ನಾಯಿ ಜೋಕರ್ ಹೃದಯಾಘಾತದಿಂದ ಸಾವನ್ನಪ್ಪಿತ್ತಂತೆ. ವೈದ್ಯಕೀಯ ಹಿನ್ನೆಲೆಯನ್ನು ಹೊಂದಿರುವ ಮಹಿಳೆ, ಜೋಕರ್ ಅನ್ನು ಮನೆಗೆ ತರಲು ಕ್ಲೋನಿಂಗ್‍ನ(ತದ್ರೂಪಿ ಸೃಷ್ಟಿ) ಸಹಾಯವನ್ನು ಪಡೆದಿದ್ದಾಳೆ. ಸತ್ತ ಪ್ರಾಣಿಯನ್ನು ಜೀವಂತವಾಗಿ ತರುವ ಆಯ್ಕೆಯಲ್ಲದಿದ್ದರೂ, ವೈದ್ಯಕೀಯ ಕಾರ್ಯವಿಧಾನದಲ್ಲಿ ಲಕ್ಷಗಟ್ಟಲೆ ಖರ್ಚು ಮಾಡುವ ಮೂಲಕ ಜೋಕರ್ ಅನ್ನು ಆಕೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
"ಜೋಕರ್ ನನ್ನ ಆಪ್ತ ಸ್ನೇಹಿತ... ಜೋಕರ್ ಅನ್ನು ಬೆಳೆಸುವಲ್ಲಿ ನನಗೆ ಅನುಭವದ ಕೊರತೆಯಿದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಲಿಟಲ್ ಜೋಕರ್ ಅದನ್ನು ಸಂಪೂರ್ಣವಾಗಿ ಪ್ರೀತಿಸಲು ಮತ್ತು ಕಾಳಜಿ ವಹಿಸಲು ನನಗೆ ಎರಡನೇ ಅವಕಾಶವನ್ನು ನೀಡಿದೆ" ಎಂದು ಕ್ಸು ಹೇಳಿದ್ದಾಳೆ. ಕ್ಲೋನ್ ಮಾಡಿದ ನಾಯಿಯ ಮೂಗಿನ ಬಳಿ ಕಪ್ಪು ಚುಕ್ಕೆ ಸೇರಿದಂತೆ ನೋಡಲು ತನ್ನ ಹಿಂದಿನ ನಾಯಿಗೆ ಹೋಲುತ್ತದೆ. ಮತ್ತು ಇನ್ನೊಂದು ಆಶ್ಚರ್ಯವೆನೆಂದರೆ ಕ್ಲೋನ್ ಮಾಡಿದ ನಾಯಿ ಜೋಕರ್‍ನಂತೆ ಕಾಣುವುದಲ್ಲದೆ, ಸಾಕ್ಸ್ ಕದಿಯುವುದರಿಂದ ಹಿಡಿದು ನೀರು ಕುಡಿಯುವವರೆಗೆ ಅದರ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಆಕೆ ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral News: ಶ್ವಾನ ಹಾಗೂ ಮಾಲೀಕರ ನಡುವಿನ ಪ್ರೀತಿಯ ಬೆಸುಗೆಗೆ ಸಾಕ್ಷಿಯಾದ ತಾಜ್ ಮಹಲ್
ತಾವು ಪ್ರೀತಿಯಿಂದ ಸಾಕಿದ ಶ್ವಾನಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇತ್ತೀಚೆಗೆ ನಡೆದ ಈ ಘಟನೆಯೇ ಸಾಕ್ಷಿ. ಏರ್ ಇಂಡಿಯಾ ಅಧಿಕಾರಿ ದೀಪಾಯನ್ ಘೋಷ್ ಮತ್ತು ಆತನ ಪತ್ನಿ ಕಸ್ತೂರಿ ಪಾತ್ರಾ 2024 ರ ನವೆಂಬರ್‌ನಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವಕ್ಕಾಗಿ ತಮ್ಮ ನಾಯಿಯ ಜೊತೆ ಗುರುಗ್ರಾಮದಿಂದ ಆಗ್ರಾಕ್ಕೆ ಭೇಟಿ ನೀಡಿದ್ದಾರೆ. ಆಗ ಅವರ ಪ್ರೀತಿಯ ನಾಯಿ ಹೋಟೆಲ್‌ನಿಂದ ಕಣ್ಮರೆಯಾದಾಗ ವಿವಾಹ ಆಚರಣೆಯ ಸಂಭ್ರಮ ಮರೆಯಾಗಿ ನಾಯಿಯನ್ನು ಕಳೆದುಕೊಂಡು ದುಃಖದಲ್ಲಿ ಚಡಪಡಿಸಿದ್ದಾರೆ. ಹೀಗಿರುವಾಗ ಮೂರುವರೆ ತಿಂಗಳ ಬಳಿಕ ದಟ್ಟವಾದ ಪೊದೆಯಲ್ಲಿ ಅವರ ನಾಯಿ ಸಿಕ್ಕಿತು.ಕೊನೆಗೆ ಆಕೆ ಅದನ್ನು ಮನೆಗೆ ಕರೆದುಕೊಂಡು ಹೋಗಿ ಪಶುವೈದ್ಯರ ಬಳಿ ಪರೀಕ್ಷೆಗೆ ಒಳಪಡಿಸಿ ತನ್ನ ಸಾಕು ನಾಯಿಯನ್ನು ಕಾಪಾಡಿಕೊಂಡಿದ್ದಾಳೆ.