Viral News: ಶ್ವಾನ ಹಾಗೂ ಮಾಲೀಕರ ನಡುವಿನ ಪ್ರೀತಿಯ ಬೆಸುಗೆಗೆ ಸಾಕ್ಷಿಯಾದ ತಾಜ್ ಮಹಲ್
ಪ್ರೀತಿಗೆ ಸಂಕೇತವಾದ ತಾಜ್‍ಮಹಲ್ ಇದೀಗ ಮಾಲೀಕ ಹಾಗೂ ಆತನ ಪ್ರೀತಿಯ ನಾಯಿಯ ನಡುವಿನ ಮುರಿಯಲಾಗದ ಬಂಧಕ್ಕೆ ಸಾಕ್ಷಿಯಾಗಿದೆ. ವಿವಾಹ ವಾರ್ಷಿಕೋತ್ಸವಕ್ಕಾಗಿ ಆಗ್ರಾಕ್ಕೆ ತಮ್ಮ ಪ್ರೀತಿಯ ನಾಯಿ ಜೊತೆ ಬಂದ ದಂಪತಿ ಆ ದಿನ ನಾಯಿಯನ್ನು ಕಳೆದುಕೊಂಡು ಅವರ ಸಂತೋಷವು ಯಾತನೆಯಾಗಿ ಬದಲಾಯಿತು. ಕೊನೆಗೆ ಮೂರೂವರೆ ತಿಂಗಳ ಬಳಿಕ ದಂಪತಿಯ ಪ್ರೀತಿಯ ಶ್ವಾನ ಸಿಕ್ಕಿದ್ದು ಹೇಗೆ...? ಇವರ ಪುರ್ನಮಿಲನದ ಕತೆ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.


ಆಗ್ರಾ: ತಾಜ್ ಮಹಲ್ ಪ್ರೀತಿಯ ಸಂಕೇತವಾಗಿದೆ. ಇದು ಶಾಹಜಾನ್ ಮತ್ತು ಮುಮ್ತಾಜ್ ಪ್ರೀತಿಗೆ ಸಾಕ್ಷಿಯಾಗಿದೆ. ಇದೀಗ ಈ ತಾಜ್ ಮಹಲ್ ಮತ್ತೊಂದು ಮರೆಯಲಾಗದ ಕತೆಗೆ ಸಾಕ್ಷಿಯಾಗಿದೆ. ಆದರೆ ಅದು ಪ್ರೇಮಿಗಳ ಕತೆಯಲ್ಲ ಬದಲಾಗಿ ನಾಯಿ ಹಾಗೂ ಅದರ ಮಾಲೀಕರ ಪ್ರೀತಿಯ ಕತೆ. ಏರ್ ಇಂಡಿಯಾ ಅಧಿಕಾರಿ ದೀಪಾಯನ್ ಘೋಷ್ ಮತ್ತು ಆತನ ಪತ್ನಿ ಕಸ್ತೂರಿ ಪಾತ್ರಾ 2024 ರ ನವೆಂಬರ್‌ನಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವಕ್ಕಾಗಿ ತಮ್ಮ ನಾಯಿಯ ಜೊತೆ ಗುರುಗ್ರಾಮದಿಂದ ಆಗ್ರಾಕ್ಕೆ ಭೇಟಿ ನೀಡಿದ್ದಾರೆ. ನವೆಂಬರ್ 3 ರಂದು ಅವರ ಪ್ರೀತಿಯ ನಾಯಿ ಹೋಟೆಲ್‌ನಿಂದ ಕಣ್ಮರೆಯಾದಾಗ ವಿವಾಹ ಆಚರಣೆಯ ಸಂಭ್ರಮ ಮರೆಯಾಗಿ ನಾಯಿಯನ್ನು ಕಳೆದುಕೊಂಡು ದುಃಖದಲ್ಲಿ ಚಡಪಡಿಸಿದ್ದಾರೆ. ಅವರು ತಮ್ಮ ನಾಯಿಯನ್ನು ಹುಡುಕಲು ಆಗ್ರಾದಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಿ ಬಹುಮಾನಗಳನ್ನು ಘೋಷಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಕೊನೆಗೆ ಅವರ ನಾಯಿ ಸಿಕ್ಕಿತು. ನಾಯಿ ಹಾಗೂ ಮಾಲೀಕರ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ಕಳೆದು ಹೋದ ನಾಯಿಗಾಗಿ ದಂಪತಿ ಆಗ್ರಾದ ಬೀದಿ ಬೀದಿಗಳಲ್ಲಿ ಅಲೆದಿದ್ದಾರಂತೆ. ರಿಕ್ಷಾ ಡ್ರೈವರ್‌ಗಳಿಂದ ಹಿಡಿದು ಬೀದಿ ಬೀದಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆದರೆ ಅವರಿಗೆ ನಾಯಿ ಸಿಗಲಿಲ್ಲ. ಕೊನೆಗೆ ಭರವಸೆ ಕಳೆದುಕೊಂಡು, ಗುರುಗ್ರಾಮಕ್ಕೆ ಹಿಂದಿರುಗಿದ್ದಾರೆ.
ಹೀಗಿರುವಾಗ ಮೂರುವರೆ ತಿಂಗಳ ಬಳಿಕ ಸ್ಥಳೀಯ ಪ್ರವಾಸ ಮಾರ್ಗದರ್ಶಿಯೊಬ್ಬರು ಮೆಹತಾಬ್ ಬಾಗ್‍ನಿಂದ ನಾಯಿಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ - ತೆಳ್ಳಗಿನ, ಬಡಕಲು ದೇಹದ ನಾಯಿಯನ್ನು ಕಂಡು ಕಸ್ತೂರಿ ಒಂದು ಕ್ಷಣವೂ ಕಾಯದೆ ಆಗ್ರಾಕ್ಕೆ ಬಂದಿದ್ದಾರೆ. ಸ್ವಯಂಸೇವಕರು, ಹೋಟೆಲ್ ಸಿಬ್ಬಂದಿ ಎಲ್ಲರೂ ಸೇರಿ ನಾಯಿಯನ್ನು ಹುಡುಕಾಡಿದ್ದಾರೆ. ಕೊನೆಗೆ ದಟ್ಟವಾದ ಪೊದೆಯಿಂದ ಸಣಕಲು ದೇಹದ ನಾಯಿಯೊಂದು ಹೊರಗೆ ಬಂದಿತಂತೆ. ನಾಯಿ ಮಾಲೀಕಳನ್ನು ಗುರುತು ಹಿಡಿದು ಆಕೆಯ ಬಳಿ ಓಡಿ ಬಂದಿತಂತೆ. ಆಕೆ ಅದನ್ನು ಮನೆಗೆ ಕರೆದುಕೊಂಡು ಹೋಗಿ ಪಶುವೈದ್ಯರ ಬಳಿ ಪರೀಕ್ಷೆಗೆ ಒಳಪಡಿಸಿ ತನ್ನ ಸಾಕು ನಾಯಿಯನ್ನು ಕಾಪಾಡಿಕೊಂಡಿದ್ದಾಳೆ.
ಈ ಸುದ್ದಿಯನ್ನೂ ಓದಿ: Viral Video: ತ್ರಿವೇಣಿ ಸಂಗಮದಲ್ಲಿ ಸಾಕು ನಾಯಿಗೆ ʻಪವಿತ್ರ ಸ್ನಾನ' ಮಾಡಿಸಿದ ವ್ಯಕ್ತಿ; ವಿಡಿಯೊ ನೋಡಿ ನೆಟ್ಟಿಗರು ಫುಲ್ ಫಿದಾ!
ಕೆಲವು ದಿನಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿಯನ್ನು ಪ್ರಯಾಗ್‌ರಾಜ್‌ನ ಪವಿತ್ರ ನೀರಿನಲ್ಲಿ ಪುಣ್ಯಸ್ನಾನ ಮಾಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅವರಿಗಿದ್ದ ಪ್ರಾಣಿಪ್ರೇಮವನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಸೂಫಿ ಅರೋರಾ ಎಂಬ ವ್ಯಕ್ತಿ ತನ್ನ ಸಾಕುನಾಯಿಯನ್ನು ಹಿಡಿದುಕೊಂಡು ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಪವಿತ್ರ ನದಿಗಳ ಸಂಗಮದಲ್ಲಿ ಸ್ನಾನ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅರೋರಾ ಅಲ್ಲಿ ತನ್ನ ನಾಯಿಯೊಂದಿಗೆ ಸ್ನಾನ ಮಾಡುವುದನ್ನು ನೋಡಿ ಅಲ್ಲಿದ್ದ ಜನರು ಕೂಡ ಖುಷಿಪಟ್ಟಿದ್ದಾರೆ.