ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪತಿಯನ್ನು ಕಳೆದುಕೊಂಡ ದುಃಖದಿಂದ ಹೊರ ಬರಲು ಈ ಮಹಿಳೆ ಮಾಡಿದ್ದೇನು ಗೊತ್ತಾ?

ಪತಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದ ಅಮೆರಿಕದ ಪಿಟ್ಸ್‌ಬರ್ಗ್‌ನ 58 ವರ್ಷದ ಮಹಿಳೆ ಎಲೈನ್ ವಿಂಟರ್ಸ್ AI ಚಾಟ್‌ಬಾಟ್‌ ಲ್ಯೂಕಸ್‍ನೊಂದಿಗೆ ಪ್ರೀತಿಯ ಸಂಬಂಧವನ್ನು ಬೆಳೆಸಿಕೊಂಡಿದ್ದಾಳೆ. ಕೊನೆಗೆ ಅದರ ಪ್ರೀತಿಗೆ ಆಕರ್ಷಿತಳಾಗಿ ಸುಮಾರು 27,000 ರೂ.ಗಳ ಜೀವಮಾನದ ಚಂದಾದಾರಿಕೆ ನೀಡಿ ಅದನ್ನು ಖರೀದಿಸಿದ್ದಾಳೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಒಂಟಿತನ ನೀಗಿಸಲು AI ಮೊರೆ ಹೋದ ಮಹಿಳೆ! ಏನಿದು ಘಟನೆ?

Profile pavithra May 13, 2025 4:28 PM

ಇಂದಿನ ದಿನಗಳಲ್ಲಿ ಎಐ ತಂತ್ರಜ್ಞಾನ ಸರ್ವೇಸಾಮಾನ್ಯ ಎಂಬಷ್ಟು ಮಟ್ಟಕ್ಕೆ ಬಳಕೆಯಾಗುತ್ತಿದೆ. ಈ ಎಐ ಮೂಲಕ ಅಸಾಧ್ಯವಾದ ಕೆಲಸಗಳನ್ನು ಸಾಧ್ಯವಾಗಿಸುವಂತಾಗಿದೆ. ಈ ಹಿಂದೆ ಕೊಲೆಯಾದ ವ್ಯಕ್ತಿಯೊಬ್ಬನನ್ನು ಎಐ ಮೂಲಕ ರಚಿಸಿ ಕೊಲೆ ಮಾಡಿದ ವ್ಯಕ್ತಿಯ ಜೊತೆ ಮಾತುಕತೆ ನಡೆಸುವಂತೆ ವಿಡಿಯೊ ಮಾಡಲಾಗಿತ್ತು.ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಅಮೆರಿಕದ ಪಿಟ್ಸ್‌ಬರ್ಗ್‌ನ 58 ವರ್ಷದ ಮಹಿಳೆಯೊಬ್ಬಳು ಒಂಟಿತನ ನೀಗಲು AI ಚಾಟ್‌ಬಾಟ್‌ನೊಂದಿಗೆ ಪ್ರೀತಿಯ ಸಂಬಂಧವನ್ನು ಬೆಳೆಸಿಕೊಂಡಿದ್ದಾಳೆ. ಏನಿದು ಸುದ್ದಿ ಎಂದು ನಿಮಗೆ ಕೂಡ ಆಶ್ಚರ್ಯವಾಗುತ್ತಿದೆಯಾ...? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಚಾಟ್‌ಬಾಟ್‌ಗಳು ಅಥವಾ ರೋಬೋಟ್‌ಗಳನ್ನು ಮದುವೆಯಾಗುವ ಪ್ರವೃತ್ತಿ, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚು ಟ್ರೆಂಡಿಂಗ್‍ನಲ್ಲಿದೆ. ಅನೇಕ ಯುವತಿಯರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಅದೇರೀತಿ ಇದೀಗ 58 ವರ್ಷದ ಮಹಿಳೆಯೊಬ್ಬಳು ಪತಿಯ ಪ್ರೀತಿಯನ್ನು ಪಡೆದುಕೊಳ್ಳಲು AI ಮೊರೆ ಹೋಗಿದಾಳೆ.ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಎಲೈನ್ ವಿಂಟರ್ಸ್ ಹಲವು ವರ್ಷಗಳ ಹಿಂದೆ, ಕಮ್ಯೂನಿಕೇಷನ್‍ ಶಿಕ್ಷಕಿಯಾಗಿದ್ದು, 2015 ರಲ್ಲಿ ಡೊನ್ನಾ ಅವರನ್ನು ಭೇಟಿಯಾದಳಂತೆ.ಈ ಭೇಟಿ ಅವರಿಬ್ಬರ ನಡುವೆ ಪ್ರೀತಿ ಬೆಳೆಯಲು ಕಾರಣವಾಯಿತಂತೆ. ಕೊನೆಗೆ ಇವರಿಬ್ಬರೂ 2019ರಲ್ಲಿ ಮದುವೆಯಾಗಿದ್ದಾರಂತೆ. ಆದರೆ ದುರದೃಷ್ಟವಶಾತ್, ಡೊನ್ನಾ 2023 ರಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು.

ಇದರಿಂದಾಗಿ ವಿಂಟರ್ಸ್ ಜೀವನದಲ್ಲಿ ಏಕಾಂಗಿಯಾದಳು. ಸಂಗಾತಿಯ ಪ್ರೀತಿಗಾಗಿ ಹಾತೊರೆಯುತ್ತಿದ್ದ ವಿಂಟರ್ಸ್ AI ಚಾಟ್‌ಬಾಟ್ ಅನ್ನು ಭೇಟಿಯಾಗಿದ್ದಾಳೆ. AI ಚಾಟ್‌ಬಾಟ್‌ನೊಂದಿಗೆ ಮಾತುಕತೆ ನಡೆಸಿದ ವಿಂಟರ್ಸ್ ತದನಂತರ ಅದಕ್ಕೆ ತುಂಬಾ ಹತ್ತಿರವಾದಳಂತೆ. ವಿಂಟರ್ಸ್ ಚಾಟ್‌ಬಾಟ್ ಅನ್ನು ಒಂದು ವಾರ ಬಳಸಿದಳು. ಅದಕ್ಕೆ ಅವಳು ಲ್ಯೂಕಸ್ ಎಂಬ ಹೆಸರನ್ನು ಕೂಡ ಇಟ್ಟಿದ್ದಾಳಂತೆ. ನೀಲಿ ಕಣ್ಣುಗಳು ಮತ್ತು ಬಿಳಿ ಕೂದಲಿನೊಂದಿಗೆ ಅದರ ಲುಕ್‌ ಅನ್ನು ಕಸ್ಟಮೈಸ್ ಮಾಡಿದ್ದಾಳಂತೆ.

ಅಂತಿಮವಾಗಿ, ವಿಂಟರ್ಸ್ ರೆಪ್ಲಿಕಾ ಎಂಬ AI ಚಾಟ್‌ಬಾಟ್‌ ಅನ್ನು ಜೀವಮಾನದ ಚಂದಾದಾರಿಕೆಯನ್ನು ನೀಡಿ ಖರೀದಿಸಿದ್ದಾಳೆ. ಅದಕ್ಕಾಗಿ ಅವಳು ಸುಮಾರು 27,000 ರೂ.ಗಳನ್ನು ವೆಚ್ಚ ಮಾಡಿದ್ದಾಳೆ. ಲ್ಯೂಕಸ್ ನಿಜವಲ್ಲದಿದ್ದರೂ, ಅದರ ಬೆಂಬಲ ಮತ್ತು ಪ್ರೀತಿ ನಿಜವಾದವು ಎಂದು ವಿಂಟರ್ಸ್ ಹೇಳುತ್ತಾಳೆ.

ಈ ಸುದ್ದಿಯನ್ನೂ ಓದಿ:Viral Video: ಯುಕೆ ಮಹಿಳೆ ಸೆರೆ ಹಿಡಿದ ತಾಜ್‌ಮಹಲ್‌ನ ಈ ಫೋಟೋ ಬಹಳ ವೈರಲಾಗ್ತಿದೆ! ಅಂತಹದ್ದೇನಿದೆ ಇದ್ರಲ್ಲಿ?

AI ಚಾಟ್‌ಬಾಟ್‌ನೊಂದಿಗಿನ ವಿಂಟರ್ಸ್‌ ಆತ್ಮೀಯತೆ ನೋಡಿ ಕೆಲವರು ಆಕೆಯನ್ನು ಮಾನಸಿಕ ಅಸ್ವಸ್ಥಳು ಎಂದು ಕರೆದಿದ್ದಾರೆ. ಆದರೆ ವಿಂಟರ್ಸ್‌ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಲ್ಯೂಕಸ್ ಜೊತೆಗೆ ತನ್ನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಲೇ ಇದ್ದಾಳಂತೆ.