Viral Video: ಮರಾಠಿ ಕೆಲಸಗಾರನಿಗೆ ಹರ್ಯಾನ್ವಿ ಭಾಷೆಯಲ್ಲಿ ಮಾತನಾಡಲು ಹೇಳಿದ ವ್ಯಕ್ತಿ;ಕೊನೆಗೆ ಆಗಿದ್ದೇನು?
ಹರಿಯಾಣದ ಮನು ಶರ್ಮಾ ಎಂಬ ವ್ಯಕ್ತಿ ಹೊಲದಲ್ಲಿ ಕೆಲಸಮಾಡುತ್ತಿದ್ದ ಮರಾಠಿ ಕೆಲಸಗಾರನನ್ನು ಹರ್ಯಾನ್ವಿ ಭಾಷೆಯಲ್ಲಿ ಮಾತನಾಡಲು ಕೇಳಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ಈ ವಿಡಿಯೊವನ್ನು ಒಂದು ಗುಂಪಿನ ನೆಟ್ಟಿಗರು ಹೊಗಳಿದರೆ, ಕೆಲವರು ಇದನ್ನು ವ್ಯೂವ್ಸ್ ಪಡೆಯಲು ಮಾಡಿದ ಕೃತ್ಯ ಎಂದು ಕರೆದಿದ್ದಾರೆ


ಚಂಡೀಗಢ: ಮಹಾರಾಷ್ಟ್ರದಲ್ಲಿ ಭಾಷಾ ಸಂಘರ್ಷಗಳು ಹೆಚ್ಚಾಗುತ್ತಿವೆ. ಎಂಎನ್‌ಎಸ್ ಬೆಂಬಲಿಗರು ಮರಾಠಿ ಮಾತನಾಡಲು ನಿರಾಕರಿಸಿದ್ದಕ್ಕಾಗಿ ಇತರ ರಾಜ್ಯಗಳಿಂದ ಬಂದ ವಲಸಿಗರನ್ನು ಥಳಿಸುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ವೈರಲ್ ಆಗಿತ್ತು. ಇದೀಗ ಹರಿಯಾಣದ ಮನು ಶರ್ಮಾ ಎಂಬ ವ್ಯಕ್ತಿ ಮರಾಠಿ ಕೆಲಸಗಾರನನ್ನು ಹರ್ಯಾನ್ವಿ ಭಾಷೆಯಲ್ಲಿ ಮಾತನಾಡಲು ಕೇಳುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ, ಹರಿಯಾಣದ ವ್ಯಕ್ತಿ ಮನು ಶರ್ಮಾ,ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿ ಬಂದು ಮಹಾರಾಷ್ಟ್ರದಿಂದ ಬಂದ ಕೆಲಸಗಾರನ ಬಳಿ ಹರ್ಯಾನ್ವಿಯಲ್ಲಿ ಮಾತನಾಡಲು ಕೇಳಿದ್ದಾನೆ. ಮರಾಠಿ ವ್ಯಕ್ತಿಗೆ ಹರ್ಯಾನ್ವಿಯಲ್ಲಿ ಮಾತನಾಡಲು ಬರದ ಕಾರಣ, ಆ ವ್ಯಕ್ತಿ, "ನಹಿ ಆತಾ? ಎಂದಿದ್ದಾನೆ. ಇದಕ್ಕೆ ಅವನು “ನಿಮಗೆ ಹರ್ಯಾನ್ವಿ ಮಾತನಾಡಲು ಗೊತ್ತಿಲ್ಲದಿದ್ದರೆ ನೀವು ಇಲ್ಲಿಗೆ ಹೇಗೆ ಬಂದಿರಿ? ನೀವು ಇಲ್ಲಿ ಹೇಗೆ ಕೆಲಸ ಮಾಡುತ್ತೀರಿ?" ಎಂದು ಕೇಳಿದ್ದಾನೆ. ಕೊನೆಗೆ ಹರಿಯಾಣದ ವ್ಯಕ್ತಿ ಜೋರಾಗಿ ನಗುತ್ತಾ, " ಪರವಾಗಿಲ್ಲ, ನೀವು ಏನು ಬೇಕಾದರೂ ಮಾಡಿ, ನೀವು ಭಾರತದಲ್ಲಿ ವಾಸಿಸುತ್ತಿದ್ದೀರಿ." ಎಂದಿದ್ದಾನೆ. ಆತ ಹೇಳಿದ ಈ ಮಾತಿಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊವನ್ನು ಮನು ಶರ್ಮಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ.ಈ ವಿಡಿಯೊವನ್ನು ಒಂದು ಗುಂಪಿನ ನೆಟ್ಟಿಗರು ಹೊಗಳಿದರೆ, ಕೆಲವರು ಇದನ್ನು ವ್ಯೂವ್ಸ್ ಪಡೆಯಲು ಮಾಡಿದ ಕೃತ್ಯ ಎಂದು ಕರೆದಿದ್ದಾರೆ ಮತ್ತು ವಿಡಿಯೊದಲ್ಲಿ ತೋರಿಸಿರುವ ಮಹಾರಾಷ್ಟ್ರದ ವ್ಯಕ್ತಿ ವಾಸ್ತವವಾಗಿ ಮರಾಠಿ ಅಲ್ಲ ಎಂದು ಆರೋಪಿಸಿದ್ದಾರೆ. ಒಬ್ಬರು, "ನಾಸಿಕ್‍ನಿಂದ ಯಾವುದೇ ಮರಾಠಿ ಇದನ್ನು ನಾಸಿಕ್ ಎಂದು ಉಚ್ಚರಿಸುವುದಿಲ್ಲ, ಹಿಂದಿ ಮಾತನಾಡುವ ಜನರು ಮಾತ್ರ ಹೀಗೆ ಉಚ್ಚರಿಸುತ್ತಾರೆ. ಇದೆಲ್ಲವೂ ಲಿಪಿಯಲ್ಲಿದೆ" ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸಿಕ್ಕಾಪಟ್ಟೆ ವೈರಲ್ ಆಯ್ತು ಈತನ ರೆಸ್ಯೂಮ್; ಅಂಥದ್ದೇನಿದೆ ಇದರಲ್ಲಿ?
ಮತ್ತೊಬ್ಬರು, "ಉತ್ತರ ಭಾರತೀಯರು ತಮ್ಮ ಸಂತೋಷಕ್ಕಾಗಿ ಸ್ಕ್ರಿಪ್ಟ್ ಮಾಡಿ ವಿಡಿಯೊವನ್ನು ಮಾಡುತ್ತಿದ್ದಾರೆ. ನಾಸಿಕ್ ಭಾರತದ ಅತ್ಯಂತ ಶ್ರೀಮಂತ ಕೃಷಿ ಜಿಲ್ಲೆಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ, ಜಿಲ್ಲೆಯ ಜನರು ಮುಂಬೈ ಅಥವಾ ಪುಣೆಗೆ ವಲಸೆ ಹೋಗುವುದಿಲ್ಲ. ಅವರು ಬೇರೆ ರಾಜ್ಯಗಳಿಗೆ ಏಕೆ ಹೋಗುತ್ತಾರೆ?" ಎಂದು ಕೇಳಿದ್ದಾರೆ.