ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ; ಆದರೂ ನನ್ನನ್ನು ಕ್ಷಮಿಸಿಬಿಡಿ: ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಬಾಲಕಿ
ನನಗೆ ಕೇವಲ 15 ವರ್ಷ. ನಾನು ಮಾಡಿರುವುದು ಕ್ಷಮೆಗೆ ಅರ್ಹವಲ್ಲ, ಆದರೂ ನನ್ನನ್ನು ಕ್ಷಮಿಸಿ ಎಂದು ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕ್ಷಮೆ ಕೇಳಿದ್ದಾಳೆ. ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆಯಲ್ಲಿ ಬಾಲಕಿ ಪ್ರಧಾನಿ ಮೋದಿಯನ್ನು ನಿಂದಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬಳಿಕ ಆಕೆ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಪ್ರಧಾನಿಯವರ ಬಳಿ ಕ್ಷಮೆ ಯಾಚಿಸಿದ್ದಾಳೆ.
ಸಂಗ್ರಹ ಚಿತ್ರ -
ನವದೆಹಲಿ: ನನಗೆ ಕೇವಲ 15 ವರ್ಷ. ನಾನು ಏನೇ ಮಾಡಿದರೂ ಅದು ಕ್ಷಮೆಗೆ ಅರ್ಹವಲ್ಲ. ಆದರೂ ನಾನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಹಳಷ್ಟು ಕೆಟ್ಟ ವಿಷಯಗಳನ್ನು ಹೇಳಿದ್ದೇನೆ. ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ಇದಕ್ಕಾಗಿ ನಾನು ಸಂಪೂರ್ಣ ದೇಶದ ಜನರ ಬಳಿ ಕ್ಷಮೆಯಾಚಿಸುತ್ತೇನೆ. ನನಗೆ ತುಂಬಾ ನಾಚಿಕೆಯಾಗುತ್ತಿದೆ. ನಾನು ನನ್ನನ್ನೇ ನೋಡಲೂ ಸಾಧ್ಯವಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಬಳಿ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಕ್ಷಮೆಯಾಚಿಸಿದ್ದಾಳೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.
ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ವೇಳೆ ಬಾಲಕಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ್ದಳು. ಇದರಿಂದ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೊ ಮಾಡಿ ಹಂಚಿಕೊಂಡಿದ್ದ ಕೆಲವೇ ಗಂಟೆಗಳ ಬಳಿಕ ಆಕೆ ಕ್ಷಮೆಯಾಚಿಸುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾಳೆ.
ಕರುನಾಡ ಬುಕ್ ಆಫ್ ರೆಕಾರ್ಡ್ಸ್" ವಿಶ್ವದಾಖಲೆಗೆ ಸಮಾಜ ಸೇವಕ ಎಂ. ಧರ್ಮನಗೌಡ ಪಾತ್ರ
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ನೀಡಿರುವುದಕ್ಕೆ ಆಕೆಯ ವಿರುದ್ಧ ಬುಧವಾರ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನೋಯ್ಡಾ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿ ಅದನ್ನು ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ದೂರುದಾರರು ಆಕೆಯ ಹೇಳಿಕೆಗಳಿಂದ ಪ್ರಧಾನಿ ಕಚೇರಿಯ ಘನತೆಗೆ ಅವಮಾನವಾಗಿದೆ. ಇದರಿಂದ ಇನ್ನಷ್ಟು ಇಂತಹ ಪ್ರಕರಣಗಳು ನಡೆಯಬಹುದು. ಇದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ಹೇಳಿದ್ದರು.
ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದ ಬಾಲಕಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರ ಬಳಿಕ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಇನ್‌ಸ್ಟಾಗ್ರಾಮ್ ನಲ್ಲಿ ಇನ್ನೊಂದು ವಿಡಿಯೊವನ್ನು ಹಂಚಿಕೊಂಡ ಬಾಲಕಿ ಟಿ ಶರ್ಟ್ ಧರಿಸಿದ್ದು, ನಮಸ್ಕಾರ ಭಂಗಿಯಲ್ಲಿ ಕೈಜೋಡಿಸಿ, ನಾನು ಪ್ರತಿಭಟನೆಯಲ್ಲಿ ಕೆಲವು ಜನರ ಪ್ರಭಾವಕ್ಕೆ ಒಳಗಾಗಿ ಪ್ರಧಾನಿಯವರ ವಿರುದ್ಧ ಬಹಳಷ್ಟು ಕೆಟ್ಟದಾಗಿ ಮಾತನಾಡಿದ್ದೇನೆ. ಎಫ್‌ಐಆರ್‌ನಲ್ಲಿ ನನಗೆ 25 ವರ್ಷ ಎಂದು ಉಲ್ಲೇಖಿಸಲಾಗಿದೆ. ಆದರೆ ನಾನು ಕೇವಲ 15 ವರ್ಷದವಳು. ನಾನು ಏನೇ ಮಾಡಿದರೂ ಅದು ಕ್ಷಮೆಗೆ ಅರ್ಹವಲ್ಲ ಎಂದು ಹೇಳಿದ್ದಾಳೆ.
ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ಇದಕ್ಕಾಗಿ ನಾನು ನಮ್ಮ ದೇಶದ ಕ್ಷಮೆಯಾಚಿಸುತ್ತೇನೆ. ನನಗೆ ತುಂಬಾ ನಾಚಿಕೆಯಾಗುತ್ತಿದೆ. ನಾನು ನನ್ನನ್ನೇ ನೋಡಲೂ ಸಾಧ್ಯವಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಆಕೆ ಹೇಳಿದ್ದಾಳೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಮಾಡಿರುವ ಪೋಸ್ಟ್ ನಲ್ಲಿ ಅವಕಾಶಗಳ ದುರುಪಯೋಗದಿಂದ ಎಂದಿಗೂ ಏನನ್ನೂ ಪರಿಹರಿಸಲು ಆಗುವುದಿಲ್ಲ. ದಾರಿ ತಪ್ಪಿದವರನ್ನು ಶಿಕ್ಷಿಸುವ ಬದಲು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಜಂತರ್ ಮಂತರ್‌ನಲ್ಲಿ ಏನಾಯಿತು ಎಂಬುದನ್ನು ದೇಶ ಮತ್ತು ಜಗತ್ತು ನೋಡಿದೆ. ಕೆಲವು ದಾರಿ ತಪ್ಪಿದ ಯುವಕರು ಯಾವುದೇ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲದ ಭಾಷೆಯನ್ನು ಬಳಸಿದ್ದಾರೆ. ನನ್ನ ಮೇಲೆ ಹೇಳಿಕೆಗಳಿಂದ ದೌರ್ಜನ್ಯ ನಡೆಸಲಾಗಿದೆ. ನನ್ನ ತಾಯಿಯನ್ನೂ ಕೂಡ ನಿಂದಿಸಲಾಗಿದೆ. ತಮ್ಮನ್ನು ನಿಂದಿಸಿದವರು ದಾರಿ ತಪ್ಪಿದವರು. ಇದಕ್ಕೆ ಉತ್ತರ ಕೋಪ ಅಥವಾ ಪ್ರತೀಕಾರದಲ್ಲಿದೆ ಎಂಬುದನ್ನು ನಾನು ನಂಬುವುದಿಲ್ಲ ಎಂದು ಹೇಳಿದರು.
Mahesh Babu: ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗನ ಸಿನಿಮಾಗೆ ಬೆಂಬಲ ನೀಡದ ಸ್ಟಾರ್!
ಬಾಲ್ಯದಲ್ಲಿ ತಪ್ಪುಗಳನ್ನು ಮಾಡಲಾಗುತ್ತದೆ. ಬಾಲ್ಯವು ಆ ತಪ್ಪುಗಳನ್ನು ಸರಿಪಡಿಸಲು ಅವಕಾಶವನ್ನು ಕೂಡ ಒದಗಿಸುತ್ತದೆ. ಸಮಾಜಕ್ಕೆ ಕೋಪವಿದೆ. ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ. ಆದರೆ ಈಗ ಈ ಮಕ್ಕಳನ್ನು ಅಪ್ಪಿಕೊಂಡು ಸರಿಯಾದ ಮಾರ್ಗವನ್ನು ತೋರಿಸುವ ಸಮಯ. ಅವರು ದಾರಿ ತಪ್ಪಿದ ಮಕ್ಕಳು. ಅವರಿಗೆ ದಾರಿ ತೋರಿಸುವುದು ನಮ್ಮ ಕರ್ತವ್ಯ. ಅವರನ್ನು ಶಿಕ್ಷಿಸುವುದು, ನ್ಯಾಯಾಲಯಗಳಿಗೆ ಎಳೆದುಕೊಂಡು ಹೋಗುವುದು ಮತ್ತು ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸುತ್ತೇನೆ. ಇದನ್ನು ಸಮಾಜವೂ ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡೋಣ ಎಂದು ತಿಳಿಸಿದ್ದರು.