ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ 22 ವರ್ಷದ ಯುವಕ; ವಿಡಿಯೊ ವೈರಲ್
Viral Video: ಬಿಹಾರದ ಪಟ್ನಾದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿ ಹೊಡೆದಿದ್ದಾನೆ. ಈ ಆರೋಪದ ಮೇಲೆ ಪಟ್ನಾದಲ್ಲಿ 22 ವರ್ಷದ ಪ್ರದೀಪ್ ಕುಮಾರ್ ಎಂಬ ಯುವಕನನ್ನು ಬಂಧಿಸಲಾಗಿದೆ. ಸದ್ಯ ಯುವಕನ ವರ್ತನೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಹಾರದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕ -
ಪಟ್ನಾ, ಅ. 2: ಮಹಿಳೆಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ಪ್ರತಿ ದಿನ ವರದಿಯಾಗುತ್ತಲೇ ಇವೆ. ಇತ್ತೀಚೆಗಷ್ಟೇ ಬಿಹಾರದ ಪಟ್ನಾದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿ ಹೊಡೆಯಲು ಮುಂದಾಗಿದ್ದ. ಈ ಆರೋಪದ ಮೇಲೆ ಪಟ್ನಾದಲ್ಲಿ 22 ವರ್ಷದ ಪ್ರದೀಪ್ ಕುಮಾರ್ ಎಂಬ ಯುವಕನನ್ನು ಬಂಧಿಸಲಾಗಿದೆ. ಸದ್ಯ ಯುವಕನ ವರ್ತನೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ (Viral News) ಆಕ್ರೋಶ ವ್ಯಕ್ತವಾಗುತ್ತಿದೆ.
ಶಾಲಾ-ಕಾಲೇಜುಗಳ ಬಳಿ ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಮಹಿಳಾ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮೂವರು ಯುವಕರನ್ನು ತಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಆಗ ಪ್ರದೀಪ್ ಕುಮಾರ್ ಸಿಬ್ಬಂದಿ ಜತೆ ಜಗಳಕ್ಕೆ ಇಳಿದಿದ್ದು, ಮಹಿಳಾ ಪೊಲೀಸ್‌ಗೆ ಕಪಾಳಮೋಕ್ಷ ಮಾಡಿ ಹಲ್ಲೆ ಎಸಗಿದ್ದ. ಇದೀಗ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ.
ವಿಡಿಯೊ ನೋಡಿ:
Patna - A video showing a confrontation between a woman police officer and a group of men in Patna has gone viral on social media, prompting police action and the arrest of a 22-year-old man. The accused has been identified as Pradeep Kumar, while police are continuing efforts to… pic.twitter.com/QdrSZVGg5J
— NextMinute News (@nextminutenews7) October 2, 2026
ಸೆಪ್ಟೆಂಬರ್ 30ರ ಸಂಜೆ ಸುಮಾರು 6:30ಕ್ಕೆ ಈ ಘಟನೆ ನಡೆದಿದೆ. ಶಾಲಾ-ಕಾಲೇಜುಗಳ ಬಳಿ ವಿದ್ಯಾರ್ಥಿನಿಯರ ರಕ್ಷಣೆಗಾಗಿ ನಿಯೋಜಿತರಾಗಿದ್ದ ಪೊಲೀಸರು ಶಂಕಿತ ರೀತಿಯಲ್ಲಿ ಕಂಡುಬಂದ ಮೂವರು ಯುವಕರನ್ನು ತಡೆದು ಸಿಬ್ಬಂದಿ ವಿಚಾರಣೆ ನಡೆಸಿದರು. ಈ ವೇಳೆ ಪ್ರದೀಪ್ ಕುಮಾರ್ ಮಹಿಳಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಮಹಿಳಾ ಪೊಲೀಸ್ ಆತನಿಗೆ ಹೊಡೆದಿದ್ದು ಪ್ರತಿಯಾಗಿ ಪ್ರದೀಪ್ ಕೂಡ ಪೋಲಿಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ
ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ತಲೆ ತಗ್ಗಿಸಿದ ನಾಗರಿಕ ಸಮಾಜ
ಘಟನೆಯ ಬಳಿಕ ಮೂವರೂ ಯುವಕರು ಸ್ಥಳದಿಂದ ಓಡಿಹೋಗಿದ್ದರು. ದೃಶ್ಯಾವಳಿಗಳನ್ನು ಪರಿಶೀಲಿಸಿ ಪ್ರದೀಪ್‌ನನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟದಲ್ಲಿದ್ದಾರೆ.