ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

11 ವರ್ಷ ಅಮೆರಿಕದಲ್ಲಿದ್ದ ಮಹಿಳೆ ಭಾರತಕ್ಕೆ ಬಂದಾಗ ಎದುರಿಸಿದ ಸಂಕಷ್ಟಗಳೇನು? ವೈರಲ್‌ ಆದ ಪೋಸ್ಟ್‌ನಲ್ಲೇನಿದೆ?

Viral Video: ಸುಮಾರು 11 ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಿದ್ದ ಕುಟುಂಬವೊಂದು ಮರಳಿ ಹೈದರಾಬಾದ್‌ ಗೆ ಬಂದಿದೆ. ಆದರೆ ಇಲ್ಲಿಗೆ ಸ್ಥಳಾಂತರಗೊಂಡ ನಂತರ ಎದುರಿಸಿದ ಸಮಸ್ಯೆಗಳ ಬಗ್ಗೆ ಶೇರ್ ಮಾಡಿಕೊಂಡಿದ್ದು ಅಮೆರಿಕದಿಂದ ಭಾರತಕ್ಕೆ ಬಂದ ನಂತರ ಎದುರಾದ ಕೆಲವು ಕಷ್ಟಗಳನ್ನು ಮಹಿಳೆಯೊಬ್ಬರು ವಿವರಿಸಿದ್ದಾರೆ.

11 ವರ್ಷ ಅಮೆರಿಕದಲ್ಲಿದ್ದ ಮಹಿಳೆ ಭಾರತಕ್ಕೆ ಬಂದು ಎದುರಿಸಿದ ಸಂಕಷ್ಟಗಳೇನು?

ಸಂಗ್ರಹ ಚಿತ್ರ -

Profile
Pushpa Kumari Jul 30, 2026 3:32 PM

ಹೈದರಾಬಾದ್,ಜು.30: ಹೆಚ್ಚಿನ ಭಾರತೀಯ ಜನರು ವಿದೇಶದಲ್ಲಿ ಕೆಲಸಮಾಡಲು ಆಸಕ್ತಿ ವಹಿಸುತ್ತಾರೆ. ಉತ್ತಮ ವೇತನ, ಗುಣಮಟ್ಟದ ಜೀವನಶೈಲಿಯ ಅವಕಾಶಗಳು ವಿದೇಶದಲ್ಲೂ ಸಿಕ್ಕರೂ ಕೆಲವೊಮ್ಮೆ ವೈಯಕ್ತಿಕ ವಿಚಾರದ ಕಾರಣಕ್ಕೆ ತಾಯ್ನಾಡಿಗೆ ಮರಳಲೇ ಬೇಕಾಗುತ್ತದೆ. ಇದೀಗ ಸುಮಾರು 11 ವರ್ಷಗಳ ಕಾಲ ಅಮೆರಿಕದಲ್ಲಿ ವಾಸವಿದ್ದ ಕುಟುಂಬವೊಂದು ಮರಳಿ ಹೈದರಾಬಾದ್‌ಗೆ ಬಂದಿದೆ. ಆದರೆ ಇಲ್ಲಿಗೆ ಸ್ಥಳಾಂತರ ಗೊಂಡ ನಂತರ ಎದುರಿಸಿದ ಸಮಸ್ಯೆಗಳ ಬಗ್ಗೆ ಶೇರ್ ಮಾಡಿಕೊಂಡಿದ್ದು (Viral News) ಅಮೆರಿಕದಿಂದ ಭಾರತಕ್ಕೆ ಬಂದ ನಂತರ ಎದುರಾದ ಕೆಲವು ಕಷ್ಟಗಳನ್ನು ಮಹಿಳೆಯೊಬ್ಬರು ವಿವರಿಸಿದ್ದಾರೆ.

ಅಮೆರಿಕದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಜೀವನ ನಡೆಸಿದ ಒಬ್ಬ ಭಾರತೀಯ ಮಹಿಳೆ ತನ್ನ ಕುಟುಂಬದೊಂದಿಗೆ ಭಾರತಕ್ಕೆ ಮರಳಲು ನಿರ್ಧರಿಸಿದರು. ಅಮೆರಿಕದ ಕ್ಯಾಲಿಫೋರ್ನಿಯಾದ ಕುಪರ್ಟಿನೋದಲ್ಲಿ ಅವರ ಪತಿ, ತಮ್ಮ ಇಬ್ಬರು ಮಕ್ಕಳೊಂದಿಗೆ ಹನ್ನೊಂದು ವರ್ಷದ ವರೆಗೆ ಸಮಯ ಕಳೆದಿದ್ದು ತಂದೆ- ತಾಯಿ ಕುಟುಂಬದ ಹತ್ತಿರ ಇರಬೇಕೆಂದು ಬಯಸಿ ಹೈದರಾಬಾದ್‌ಗೆ ಮರಳಿ ಬಂದಿದ್ದಾರೆ.

ಅಮೆರಿಕದಿಂದ ಹಿಂದಿರುಗಿದ ನಂತರ ಕೆಲವು ವಿಚಾರಗಳನ್ನು ಆಶ್ಚರ್ಯ ಪಡಿಸಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಮೆರಿಕದ ಜೀವನ ಶೈಲಿಯ ಬಗ್ಗೆ ಮಾತನಾಡಿದ ಅವರು ಅಲ್ಲಿ ರಸ್ತೆಯಲ್ಲಿ ಸಿಕ್ಕ ಅಪರಿಚಿತರು ಕೂಡ ಮುಗುಳ್ನಕ್ಕು ಪರಸ್ಪರ ಮಾತನಾಡಿಸುತ್ತಿದ್ದರು. ಆದರೆ ಭಾರತದಲ್ಲಿ ಹಾಗಿಲ್ಲ, ಒಬ್ಬರಿಗೊಬ್ಬರು ಕೆಲವೊಮ್ಮೆ ತಲೆ ಎತ್ತಿಯೂ ನೋಡುವುದಿಲ್ಲ, ನನ್ನ‌ ಮಗನೇ ಅಮ್ಮ ಅವರು ಯಾಕೆ ಹಾಯ್ ಹೇಳುವುದಿಲ್ಲ? ಎಂದು ಅಚ್ಚರಿಯಿಂದ ಕೇಳುತ್ತಾನೆ ಅಮೆರಿಕದಲ್ಲಿರುವ ತನ್ನ ದೈನಂದಿನ ಸಂವಹನಗಳನ್ನು ಮತ್ತು ಸ್ನೇಹಿತರ ಗುಂಪನ್ನು ಮಿಸ್ ಮಾಡಿಕೊಂಡರು ಭಾರತದಲ್ಲಿ ಹೆತ್ತರವನ್ನು ನೋಡಿಕೊಳ್ಳುವುದು ಖುಷಿ ತಂದಿದೆ ಎಂದರು‌.

Viral Video: ರಸ್ತೆಗೆ ಮದ್ಯದ ಬಾಟಲ್‌ ಎಸೆದ ಕಿಡಿಗೇಡಿ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಭಾರತಕ್ಕೆ ಹಿಂತಿರುಗುವ ಮೊದಲು ಕುಟುಂಬಗಳು ಯೋಚಿಸಬೇಕಾದ ಇನ್ನೊಂದು ಸವಾಲಿನ ಬಗ್ಗೆಯೂ ಮಾತನಾಡಿದ್ದಾರೆ. ತಮ್ಮ ಮಕ್ಕಳಿಗೆ ಶಿಕ್ಷಣ ಪಡೆಯಲು ಸರಿಯಾದ ಶಾಲೆಯನ್ನು ಹುಡುಕುವುದು. ಪೋಷಕರು ತಮ್ಮ ಮಕ್ಕಳು ಸಿದ್ಧರಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳದೆ ಉನ್ನತ ಶ್ರೇಣಿಗಳಿಗೆ ಸೇರಿಸಲು ಆತುರಪಡಬಾರದು.

ಕುಟುಂಬವು ಭಾರತಕ್ಕೆ ಸ್ಥಳಾಂತರಗೊಳ್ಳುವ ಮೊದಲು ತನ್ನ ಹಿರಿಯ ಮಗಳು ಯುಎಸ್‌ನಲ್ಲಿ ಕಿಂಡರ್‌ಗಾರ್ಟನ್ ಪೂರ್ಣ ಗೊಳಿಸಿದ್ದಳು‌. ಆದರೆ ಭಾರತದಲ್ಲಿ ಅವರು ಸಂಪರ್ಕಿಸಿದ ಶಾಲೆಯು ಯಾವುದೇ ಮೌಲ್ಯಮಾಪನವನ್ನು ನಡೆಸದೆ ತನ್ನ ಮಗಳನ್ನು ನೇರವಾಗಿ ಎರಡನೇ ತರಗತಿಗೆ ಸೇರಿಸಲು ಸಿದ್ಧವಾಗಿತ್ತು. ಆದರೆ, ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ತರಗತಿ ಜಿಗಿದಿದ್ದರಿಂದ ಮಗಳು ಓದಿನಲ್ಲಿ ಸಾಕಷ್ಟು ಹಿಂದುಳಿಯ ಬೇಕಾಯಿತು. ನಂತರ ಆಕೆಯನ್ನು ಮತ್ತೆ ಅದೇ ತರಗತಿಗೆ ಸೇರಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಹಾಗಾಗಿ ವಿದೇಶದಿಂದ ಹಿಂದಿರುಗುವ ಪೋಷಕರು ಶಾಲಾ ಪ್ರವೇಶದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.