ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗೋವಾ ಎಕ್ಸ್‌ಪ್ರೆಸ್‌ನಲ್ಲಿ ಪ್ರತಿಭಟನಾಕಾರರ ಬಂಧನ ವೇಳೆ ಪೊಲೀಸರಿಗೆ ಧಮ್ಕಿ ಹಾಕಿದ ಮಹಿಳೆ!

Viral Video: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ, ಅಖಿಲ ಭಾರತ ವಿದ್ಯಾರ್ಥಿ ಮತ್ತು ಇತರ ವಿದ್ಯಾರ್ಥಿ ಮತ್ತು ರಾಜಕೀಯ ಪಕ್ಷಗಳು ದೆಹಲಿಯ ಜಂತರ್​​ ಮಂತರ್​ನಲ್ಲಿ ಪ್ರತಿಭಟನೆಗೆ ಕರೆ ನೀಡಿವೆ. ಈ ಪ್ರತಿಭಟನೆಗೆ ಭಾಗವಹಿಸಲು ಗೋವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರನ್ನು ತಡೆದು ಮಧ್ಯಪ್ರದೇಶದ ಇಟಾರ್ಸಿ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿ ಪ್ರತಿಭಟನೆ: ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇನೆ ಎಂದ ಮಹಿಳೆ!

ಪೊಲೀಸರ ವಿರುದ್ಧವೇ ಎಫ್‌ಐಆರ್ ದಾಖಲಿಸುತ್ತೇನೆ ಎಂದ ಮಹಿಳೆ -

Profile
Pushpa Kumari Oct 10, 2026 4:02 PM

ನವದೆಹಲಿ ,ಅ.10: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ, ಅಖಿಲ ಭಾರತ ವಿದ್ಯಾರ್ಥಿ ಮತ್ತು ಇತರ ವಿದ್ಯಾರ್ಥಿ ಮತ್ತು ರಾಜಕೀಯ ಪಕ್ಷಗಳು ಇಂದು ದೆಹಲಿಯ ಜಂತರ್​​ ಮಂತರ್​ನಲ್ಲಿ ಪ್ರತಿಭಟನೆಗೆ ಕರೆ ನೀಡಿವೆ. ಈ ಪ್ರತಿಭಟನೆಗೆ ಭಾಗವಹಿಸಲು ಗೋವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರನ್ನು ತಡೆದು ಮಧ್ಯಪ್ರದೇಶದ ಇಟಾರ್ಸಿ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದಿಂದ ಪೊಲೀಸರು ಕರೆದೊಯ್ಯುತ್ತಿರುವಾಗ, ಮಹಿಳೆಯೊಬ್ಬರು ಪೊಲೀಸರಿಗೆ ಧಮ್ಕಿ ಹಾಕಿರುವ ವಿಡಿಯೊ ವೈರಲ್ (Viral News) ಆಗಿದೆ‌

ಪ್ರತಿಭಟನಾ ಸ್ಥಳದಿಂದ ಮಹಿಳೆಯೊಬ್ಬರನ್ನು ಮಹಿಳಾ ಪೊಲೀಸರು ಬಲವಂತವಾಗಿ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಪೋಲಿಸರಿಗೆ ಬೆದರಿಕೆ ಹಾಕಿದ ಮಹಿಳೆ "ನನ್ನನ್ನು ಮುಟ್ಟಬೇಡಿ, ನಿಮ್ಮೆಲ್ಲರ ಮೇಲೂ ಎಫ್‌ಐಆರ್ ದಾಖಲಿಸುತ್ತೇನೆ" ಎಂದು ಗದರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ವಿಡಿಯೋ ನೋಡಿ:



ವೈರಲ್ ವಿಡಿಯೋದಲ್ಲಿ, ಮಹಿಳಾ ಪೇದೆಗಳು ಮಹಿಳೆಯೊಬ್ಬರನ್ನು ಕರೆದೊಯ್ಯುತ್ತಿರುವುದು ಮತ್ತು ಆಕೆ ತಮ್ಮನ್ನು ಮುಟ್ಟದಂತೆ ಪದೇ ಪದೇ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ,ಆಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ. ವೀಡಿಯೊವು ಮಹಿಳೆಯ ಪ್ರತಿಕ್ರಿಯೆ ಮತ್ತು ಪೊಲೀಸ್ ಸಿಬ್ಬಂದಿಗಳ ತಾಳ್ಮೆಯ ನಡವಳಿಕೆ ಬಗ್ಗೆ ಚರ್ಚಿಸುವಂತೆ ಮಾಡಿದೆ.

Viral Video: ಹರಿಹರ ಕೋಟೆಯ ಕಿರಿದಾದ ಮೆಟ್ಟಿಲ ಮೇಲೆ ಜನಸಾಗರ; ಮೊಘಲ್ ಸೈನಿಕರೂ ಇಷ್ಟೊಂದು ಸಂಖ್ಯೆಯಲ್ಲಿ ದಾಳಿ ಮಾಡಿರಲಿಲ್ಲ ಎಂದ ನೆಟ್ಟಿಗರು

ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಗೋವಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಡಜನ್‌ಗಟ್ಟಲೆ ವಿದ್ಯಾರ್ಥಿಗಳನ್ನು ಸ್ಥಳೀಯ ಪೊಲೀಸರು ಮುಂಜಾಗ್ರತೆಯಾಗಿ ವಶಕ್ಕೆ ಪಡೆದಿದ್ದಾರೆ.‌ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ಮಹಿಳೆಯ ಆತ್ಮವಿಶ್ವಾಸವನ್ನು ಪ್ರಶ್ನಿಸುತ್ತಾ, "ಇವರಿಗೆಲ್ಲ ಇಂತಹ ಆತ್ಮವಿಶ್ವಾಸ ಎಲ್ಲಿಂದ ಬರುತ್ತದೆ?" ಎಂದು ಕಿಡಿಕಾರಿದ್ದಾರೆ.