Viral Video: ಯಾರೀಕೆ ʼಯಂಗ್ ಮೊನಾಲಿಸಾ...? ಇವಳನ್ನು ನೋಡಿದ್ರೆ ನೀವು ಕೂಡ ಶಾಕ್ ಆಗ್ತೀರಿ!
ಮಹಾಕುಂಭಮೇಳದಲ್ಲಿ ಇಡೀ ದೇಶ ಗಮನ ಸೆಳೆದಿದ್ದ ಮೊನಾಲಿಸಾ ಕ್ರೇಜ್ ಇನ್ನೂ ಮುಗಿದಿಲ್ಲ. ಇದೀಗ ಇದರ ಬೆನ್ನಲ್ಲೇ ಆಕೆಯನ್ನೇ ಹೋಲುವ ಪುಟ್ಟ ಬಾಲಕಿಯೊಬ್ಬಳು ಇದೀಗ ಭಾರೀ ಸುದ್ದಿಯಾಗುತ್ತಿದ್ದಾಳೆ. ಈಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್(Viral Video) ಆಗುತ್ತಿದೆ. ಈ 'ಯಂಗ್ ಮೊನಾಲಿಸಾ' ಯಾರು, ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.


ಲಖನೌ: ಇತ್ತೀಚೆಗೆ ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಮೊನಾಲಿಸಾ ಎನ್ನುವ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಳು. ನೆಟ್ಟಿಗರು ಈಕೆಯ ಕಣ್ಣು ನೋಡಿ ಫಿದಾ ಆಗಿದ್ದರು. ಇದೀಗ ಥೇಟ್ ಮೊನಾಲಿಸಾಳ ಹಾಗೇ ಇರುವ ಚಿಕ್ಕ ಹುಡುಗಿಯೊಬ್ಬಳ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಈಕೆಯನ್ನು ಯಂಗ್ ಮೊನಾಲಿಸಾ ಎಂದು ಕರೆದಿದ್ದಾರೆ. ಈ ಯಂಗ್ ಮೊನಾಲಿಸಾ ಯಾರು? ಆಕೆಯ ಹಿನ್ನೆಲೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಮನೋಜ್ ವೈಷ್ಣವ್ ಎಂಬ ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಮೂವರು ಹುಡುಗಿಯರು ಉಜ್ಜಯಿನಿಯ ದೇವಾಲಯದ ಬಳಿ ಅರಿಶಿನ ಮತ್ತು ಕುಂಕುಮ (ಹಳದಿ ಕುಂಕುಮ) ತುಂಬಿದ ಸಣ್ಣ ಬಟ್ಟಲುಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಅವರು ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ತಿಲಕವನ್ನು ಹಚ್ಚುವ ಕಾಯಕ ಮಾಡುತ್ತಾರಂತೆ. ಆದರೆ ಈ ದೇವಾಲಯ ಇರುವಂತಹ ನಿಖರವಾದ ಸ್ಥಳದ ಯಾವುದು ಎಂಬುವುದು ತಿಳಿದಿಲ್ಲ.
ಯಂಗ್ ಮೊನಾಲಿಸಾಳ ವಿಡಿಯೊ ಇಲ್ಲಿದೆ ನೋಡಿ...
ನಂತರ ಪ್ರಯಾಗ್‍ರಾಜ್‍ನ ಮಹಾಕುಂಭದ ಪ್ರಸಿದ್ಧ ಹುಡುಗಿ ಮೊನಾಲಿಸಾಳ ಹಾಗೇ ಇರುವ ಚಿಕ್ಕ ಹುಡುಗಿಯೊಬ್ಬಳ ಕಡೆಗೆ ಕ್ಯಾಮೆರಾವನ್ನು ತಿರುಗಿಸಲಾಗಿದೆ. ಆ ಚಿಕ್ಕ ಹುಡುಗಿ ನೋಡುವುದಕ್ಕೆ ಸೇಮ್ ಟು ಸೇಮ್ ಕುಂಭಮೇಳದಲ್ಲಿ ಮೋಡಿ ಮಾಡಿದ ರುದ್ರಾಕ್ಷಿ ಮಾರಾಟಗಾರ್ತಿ ಮೊನಾಲಿಸಾಳ ಹಾಗೇ ಇದ್ದಾಳೆ.ಕಂಟೆಂಟ್ ಕ್ರಿಯೇಟರ್ ಅವಳನ್ನು "ಯಂಗ್ ಮೊನಾಲಿಸಾ" ಎಂದು ಕರೆದಿದ್ದಾನೆ. ವಿಡಿಯೊದಲ್ಲಿ ಆತ ನೀನು ಮೊನಲಿಸಾ ಹಾಗೇ ಇದ್ದೆ ಎಂದಿದ್ದಕ್ಕೆ ಹುಡುಗಿ ನಾಚಿ ನಗಾಡಿದ್ದಾಳೆ. ಆದರೆ ಕ್ಯಾಮೆರಾಮನ್ ಅವಳ ವಿಡಿಯೊ ಮಾಡಲು ಹೋದಾಗ ಆಕೆ ಕೋಪದಿಂದ ಆ ವ್ಯಕ್ತಿಗೆ, “ನಾನು ನಿಮ್ಮ ಫೋನ್ ಒಡೆದುಹಾಕುತ್ತೇನೆ" ಎಂದು ಎಚ್ಚರಿಕೆ ನೀಡಿದ್ದಾಳೆ.
ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಅವಳು ನಿಜವಾಗಿಯೂ ಮೊನಾಲಿಸಾಳಂತೆ ಕಾಣುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಮಾರ್ಚ್ 11 ರಂದು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಎರಡು ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಲಿಫ್ಟ್ ಕೇಳಿದ ಯುವಕನನ್ನೇ ಗುದ್ದಿಕೊಂಡು ಹೋದ ಬೈಕ್ ಸವಾರ; ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಜನವರಿಯಲ್ಲಿ ಉತ್ತರಪ್ರದೇಶದ ಪ್ರಯಾಗ್‍ರಾಜ್ ಕುಂಭಮೇಳದಲ್ಲಿ ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶದ ಇಂದೋರ್‌ನ 16 ವರ್ಷದ ಹುಡುಗಿಯೊಬ್ಬಳು ತನ್ನ ಕಣ್ಣುಗಳ ಮೂಲಕ ದೇಶದ ಜನರ ಗಮನ ಸೆಳೆದಿದ್ದಳು. ಹೀಗಾಗಿ ಮೊನಾಲಿಸಾ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಳು. ಆದರೆ ಇದರಿಂದ ಆಕೆ ಬಹಳ ಕಷ್ಟಪಟ್ಟಿದ್ದಳು ಎನ್ನಲಾಗಿದೆ.