ಬಾಲ್ಕನಿಯಿಂದ ಬೀಳುತ್ತಿದ್ದ 5 ವರ್ಷದ ಬಾಲಕನ ಪ್ರಾಣ ಉಳಿಸಿದ ಅಂಗಡಿಕಾರ: ಮೈ ಜುಂ ಎನಿಸುವ ವಿಡಿಯೊ ನೋಡಿ
Viral Video: ಐದು ವರ್ಷದ ಮಗುವೊಂದು ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯ ಅಂಗಡಿ ಕಾರರೊಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಈಜಿಪ್ಟ್ ನ ಗಿಜಾ ನಗರದ ‘ಅರ್ದ್ ಎಲ್-ಲಿವಾ’ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆಯೂ ನಡೆದಿದೆ. ಮಗು ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯ ಅಂಗಡಿಕಾರ ಅಹಮದ್ ರಜಾಬ್ ಬಾಲಕನನ್ನು ಹಿಡಿದು ಜೀವ ಉಳಿಸಿದ್ದಾರೆ.
ಇಂಟರ್ ನೆಟ್ ಚಿತ್ರ -
ಈಜಿಪ್ಟ್,ಅ.5: ಐದು ವರ್ಷದ ಮಗುವೊಂದು ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯ ಅಂಗಡಿಕಾರರೊಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಈಜಿಪ್ಟ್ ನ ಗಿಜಾ ನಗರದ ‘ಅರ್ದ್ ಎಲ್-ಲಿವಾ’ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮಗು ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯ ಅಂಗಡಿಕಾರ ಅಹಮದ್ ರಜಾಬ್ ಬಾಲಕನನ್ನು ಹಿಡಿದು ಜೀವ ಉಳಿಸಿದ್ದಾರೆ. ಈ ರಕ್ಷಣೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಈಜಿಪ್ಟ್‌ನ ಗಿಜಾ ನಗರದ 'ಅರ್ದ್ ಎಲ್-ಲೆವಾ' ಪ್ರದೇಶದಲ್ಲಿ, ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದ ಐದು ವರ್ಷದ ಬಾಲಕನನ್ನು ಅಂಗಡಿಗಾರ ಅಹ್ಮದ್ ರಗಾಬ್ ಕ್ಷಣಮಾತ್ರದ ಸಮಯದಲ್ಲಿ ರಕ್ಷಣೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ರಗಾಬ್ ಮಗು ಬೀಳುತ್ತಿದ್ದಂತೆ ವೇಗವಾಗಿ ಓಡಿಹೋಗಿ, ನೆಲಕ್ಕೆ ಬೀಳುವ ಮುನ್ನವೇ ಹಿಡಿದುಕೊಳ್ಳುವುದನ್ನು ಕಾಣಬಹುದು.
ವಿಡಿಯೋ ನೋಡಿ:
A little boy was miraculously saved by a shop owner in a densely populated Egyptian neighborhood. https://t.co/y4Pc7aJFLq
— Massimo (@Rainmaker1973) October 4, 2026
ಸೆಪ್ಟೆಂಬರ್ 29, 2026 ರಂದು ಈ ಘಟನೆ ನಡೆದಿದೆ. ಅಂಗಡಿಯ ಹತ್ತಿರದಲ್ಲಿದ್ದ ರಜಾಬ್ ಅವರಿಗೆ ಮೇಲಿನಿಂದ ಕಿರುಚಾಟ ಕೇಳಿಸಿದೆ. ತಕ್ಷಣ ಮೇಲಕ್ಕೆ ನೋಡಿದಾಗ ಬಾಲ್ಕನಿಯಿಂದ ಮಗುವೊಂದು ಬೀಳುತ್ತಿರುವುದು ಕಂಡು ಬಂದಿದೆ. ಕೂಡಲೇ ಅವರು ಯಾವುದೇ ಆಲೋಚನೆಗೆ ಸಮಯವಿಲ್ಲದೆ, ಕ್ಷಣಾರ್ಧದಲ್ಲಿ ಓಡಿ ಬಂದು ಮಗು ನೆಲಕ್ಕೆ ಅಪ್ಪಳಿಸುವ ಮುನ್ನವೇ ತಮ್ಮ ಕೈಗಳಲ್ಲಿ ಹಿಡಿದು ಕೊಂಡಿದ್ದಾರೆ.
ಜನನಿಬಿಡ ರಸ್ತೆಯಲ್ಲಿ ಜನರು ಓಡಾಡುತ್ತಿರುವಾಗಲೇ ಈ ಘಟನೆ ನಡೆದಿದೆ. ಮಗು ಬೀಳುವುದನ್ನು ಗಮನಿಸಿದ ಅಂಗಡಿಕಾರ ಸಮಯ ಪ್ರಜ್ಞೆ ಮೆರೆದಿದ್ದಾರೆ. ರಕ್ಷಣೆಯ ನಂತರ ತೀವ್ರ ಆತಂಕ ಮತ್ತು ಒತ್ತಡದಿಂದಾಗಿ ಅವರು ಪಕ್ಕದಲ್ಲಿದ್ದ ಹಾಸಿಗೆಯ ಮೇಲೆ ಒರಗಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಾಹಸಕ್ಕೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.